‘ಇಂಡೋ-ಯು.ಎಸ್. ಸಂಬಂಧ ನನ್ನ ಪಾಲಿಗೆ ಅತಿ ಸವಾಲಿನ ಕೆಲಸ’ – ಅಮೆರಿಕದಲ್ಲಿ ವಿದೇಶಾಂಗ ವ್ಯವಹಾರ ಸಚಿವ ಎಸ್.ಜೈಶಂಕರ್ ಹೇಳಿಕೆ

ನ್ಯೂಸ್ ಆ್ಯರೋ : ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ನಂತರ ಭಾರತ ಮತ್ತು ಅಮೆರಿಕಾ ನಡುವಿನ ದ್ವಿಪಕ್ಷೀಯ ಸಂಬಂಧ ಸಾಕಷ್ಟು ಸುಧಾರಣೆಗೊಂಡಿದೆ. ಭಾರತ ತನ್ನ ಉತ್ತಮ ವ್ಯವಹಾರ ಹಾಗೂ ರಕ್ಷಣಾ ಭಾಗೀಧಾರ ಎಂದು ಅಮೆರಿಕಾ ಜಾಗತಿಕ ವೇದಿಕೆಯಲ್ಲಿ ಹಲವು ಬಾರಿ ಹೇಳಿದೆ. ಇತ್ತೀಚಿನ ದಿನಗಳಲ್ಲಿ ಇಂಡೋ-ಯು.ಎಸ್. ದ್ವಿಪಕ್ಷೀಯ ಸಂಬಂಧಗಳನ್ನು ಇನ್ನಷ್ಟು ಗಟ್ಟಿಗೊಳಿಸುವಲ್ಲಿ ಪ್ರಧಾನಿ ಮೋದಿ ಸಚಿವ ಸಂಪುಟದ ವಿದೇಶಾಂಗ ಸಚಿವಾಲಯದ ಮತ್ತು ಸಚಿವರ ಪಾತ್ರ ಮಹತ್ವದ್ದಾಗಿದೆ.
ಇದೀಗ ವಿದೇಶಾಂಗ ವ್ಯವಹಾರ ಸಚಿವರಾಗಿ ಕಾರ್ಯನಿರ್ವಹಿಸುತ್ತಿರುವ ಎಸ್. ಜೈಶಂಕರ್ ಅವರು ಇದೀಗ ಭಾರತ ಮತ್ತು ಅಮೆರಿಕಾ ದೇಶಗಳ ನಡುವಿನ ಬಾಂಧವ್ಯ ಬೆಸುಗೆಯ ಬಗ್ಗೆ ಮಾತನಾಡಿದ್ದು, ಇಂಡೋ-ಯುಎಸ್ ಸಂಬಂಧ ತಾನು ಅತಿಯಾದ ಆತ್ಮವಿಶ್ವಾಸವನ್ನು ಹೊಂದಿದ್ದೆ ಎಂದು ಹೇಳಿದ್ದಾರೆ.
ವಾಷಿಂಗ್ಟನ್ ನಲ್ಲಿ ಅಲ್ಲಿನ ಸ್ಟೇಟ್ ಸೆಕ್ರೆಟರಿ ಆಂಟೋನಿ ಬ್ಲಿಂಕೆನ್ ಜೊತೆಗಿನ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಜೈಶಂಕರ್ ಅವರು ನೀಡಿರುವ ಈ ಹೇಳಿಕೆ ಇಂಡೋ-ಯುಸ್ ದ್ವಿಪಕ್ಷೀಯ ಬಾಂಧವ್ಯಕ್ಕೊಂದು ಹೊಸ ಭಾಷ್ಯ ಎಂದೇ ವಿಶ್ಲೇಷಿಸಲಾಗುತ್ತಿದೆ. ‘ನಿಜವಾಗಿಯೂ ಹೇಳಬೇಕಂದ್ರೆ, ಎರಡು ದೇಶಗಳ ನಡುವಿನ ಸಂಬಂಧಕ್ಕೆ ಸುದೀರ್ಘ ಇತಿಹಾಸವಿದ್ದು, ಈ ಸಂಬಂಧ ಗಟ್ಟಿಗೊಳ್ಳುವಲ್ಲಿ ನಾನು ಅತಿಯಾದ ಆತ್ಮವಿಶ್ವಾಸದಿಂದಲೇ ಇದ್ದೆ’ ಎಂದು ಜೈಶಂಕರ್ ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ. ಮತ್ತೂ ಮುಂದುವರಿದು ಹೇಳಿರುವ ಅವರು ನಾಲ್ಕು ದಶಕಗಳ ನನ್ನ ರಾಜತಾಂತ್ರಿಕ ಜೀವನದಲ್ಲಿ ನನಗೆ ಅತೀ ಹೆಚ್ಚಿನ ಸವಾಲು ಎದುರಾಗಿದ್ದು ಇಂಡೋ-ಯುಸ್ ಸಂಬಂಧವನ್ನು ಸುಧಾರಿಸುವಲ್ಲಿ’ ಎಂದವರು ಹೇಳಿಕೊಂಡಿದ್ದಾರೆ.
ಭಾರತ ಮತ್ತು ಅಮೆರಿಕಾ ನಡುವಿನ ಸಂಬಂಧದ ರೂಟ್ ಮ್ಯಾಪ್ ಹೇಗಿದೆ ಎಂದು ನೀವು ಕೇಳಿದ್ರೆ, ಅದು ಹಿಂದೆಂದಿಗಿಂತಲೂ ಹೆಚ್ಚು ನಿಕಟವಾಗಿದ ಮತ್ತು ಕ್ರಿಯಾಶೀಲವಾಗಿದೆ ಮತ್ತು ಸಾಂಪ್ರದಾಯಿಕ ಸಂಬಂಧಗಳನ್ನು ಮೀರಿ ಅಮೆರಿಕಾವು ಭಾರತದ ಜೊತೆ ಬಹು ಆಯಾಮದ ಸಂಬಂಧ ಅಭಿವೃದ್ಧಿಗೊಂಡಿದೆ ಎಂದು ಜೈಶಂಕರ್ ಅವರು ಹೇಳಿದ್ದಾರೆ. ಇದಕ್ಕೊಂದು ಉತ್ತಮ ಉದಾಹರಣೆಯೆಂದರೆ ಆಸ್ಟ್ರೇಲಿಯಾ, ಜಪಾನ್, ಭಾರತ ಮತ್ತು ಅಮೆರಿಕಾ ಸೇರಿಕೊಂಡು ರಚಿಸಿರುವ ಕ್ವಾಡ್ ಒಕ್ಕೂಟ ಎಂದು ಅವರ ಪ್ರತಿಪಾದನೆಯಾಗಿದೆ.
ಜೈಶಂಕರ್ ಅವರ ಹೇಳಿಕೆಗೆ ಸಹಮತ ವ್ಯಕ್ತಪಡಿಸಿದ ಬ್ಲಿಂಕೆನ್ ಮಾತನಾಡಿ, ಜಗತ್ತಿನ ಅತೀ ದೊಡ್ಡ ಎರಡು ಪ್ರಜಾಪ್ರಭುತ್ವ ದೇಶಗಳಾಗಿರುವ ಭಾರತ ಮತ್ತು ಅಮೆರಿಕಾ ಈ ಎರಡು ದೇಶಗಳು ಮುಂದಿನ ಶತಮಾನದ ಭವಿಷ್ಯವನ್ನು ರೂಪಿಸುವಲ್ಲಿ ಹೆಚ್ಚಿನ ಸಾಮರ್ಥ್ಯ ಮತ್ತು ಜವಾಬ್ದಾರಿಗಳನ್ನು ಹೊಂದಿವೆ ಎಂದು ಹೇಳಿದ್ದಾರೆ.