1. Home
  2. National
  3. &
  4. International
  5. International
  6. News
  7. ‘ಬಾಬಾ ವಂಗಾ’ರ ಭವಿಷ್ಯವಾಣಿಯಲ್ಲಿ 2023ರ ರಹಸ್ಯಗಳು: ಜ್ಯೋತಿಷಿಯ ಮಾತು ಕೇಳಿ ಬೆಚ್ಚಿದ ಜನತೆ

‘ಬಾಬಾ ವಂಗಾ’ರ ಭವಿಷ್ಯವಾಣಿಯಲ್ಲಿ 2023ರ ರಹಸ್ಯಗಳು: ಜ್ಯೋತಿಷಿಯ ಮಾತು ಕೇಳಿ ಬೆಚ್ಚಿದ ಜನತೆ

‘ಬಾಬಾ ವಂಗಾ’ರ ಭವಿಷ್ಯವಾಣಿಯಲ್ಲಿ 2023ರ ರಹಸ್ಯಗಳು: ಜ್ಯೋತಿಷಿಯ ಮಾತು ಕೇಳಿ ಬೆಚ್ಚಿದ ಜನತೆ
0

ನ್ಯೂಸ್ ಆ್ಯರೋ: ತಮ್ಮ ಭವಿಷ್ಯವಾಣಿಗಳಿಂದಲೇ ಪ್ರಪಂಚದಾದ್ಯಂತ ಪ್ರಸಿದ್ಧರಾಗಿರುವ ಬಾಬಾ ವಂಗಾ ಅವರು 2023ರ ವರ್ಷದ ಬಗ್ಗೆ ಭವಿಷ್ಯವಾಣಿ ನುಡಿದಿದ್ದು, ಅದರ ಅನುಸಾರ ಗಂಭೀರ ಘಟನೆಗಳಾಗುವ ಮುನ್ಸೂಚನೆಯನ್ನು ನೀಡಿದ್ದಾರೆ.‌ ಇವರು ಈ ಹಿಂದೆ ನುಡಿದ ಅನೇಕ ಭವಿಷ್ಯವಾಣಿಗಳು ನಿಜವೆಂದು ಸಾಭೀತಾಗಿರುವುದರಿಂದ, ಮತ್ತಷ್ಟೂ ಕುತೂಹಲವನ್ನು ಹೆಚ್ಚಿಸಿದೆ.

2023ರ ಬಗ್ಗೆ ಅವರು ನುಡಿದ ಭವಿಷ್ಯವಾಣಿಯಂತೆ ಇದೀಗ ಈ ಪ್ರಪಂಚದ ಅಂತ್ಯ ಅಥವಾ ಬೃಹತ್ ವಿನಾಶದ ಮುನ್ಸೂಚನೆಗಳ ಬಗ್ಗೆ ಭಯದ ವಾತಾವರಣವಿದೆ.

ಬಾಬಾ ವಂಗಾ ಅವರ ಭವಿಷ್ಯವಾಣಿ ಪ್ರಕಾರ 2023 ರಲ್ಲಿ ಸಂಭವಿಸುವ ಗಂಭೀರ ಘಟನೆಗಳಾವುವು?

  1. ಬಾಬಾ ವಂಗಾ ಅವರ ಭವಿಷ್ಯವಾಣಿಯ ಪ್ರಕಾರ, ಒಂದು ದೊಡ್ಡ ದೇಶವು ಜೈವಿಕ ಶಸ್ತ್ರಾಸ್ತ್ರಗಳಿಂದ ಜನರ ಮೇಲೆ ದಾಳಿ ಮಾಡುತ್ತದೆ.
  2. 2023ರಲ್ಲಿ ಸೌರ ಚಂಡಮಾರುತ ಅಥವಾ ಸೌರ ಸುನಾಮಿ ಸಂಭವಿಸುತ್ತದೆ. ಇದು ಗ್ರಹದ ಕಾಂತೀಯ ಗುರಾಣಿಯನ್ನು ತೀವ್ರವಾಗಿ ಹಾನಿಗೊಳಿಸುತ್ತದೆ ಎಂದು ನುಡಿದಿದ್ದಾರೆ.
  3. ಬಾಬಾ ವಂಗಾ ಅವರ ನುಡಿದ ಮಾತಿನಂತೆ, 2023 ರಲ್ಲಿ ಇಡೀ ಜಗತ್ತು ಕತ್ತಲೆಯಲ್ಲಿ ಮುಳುಗಳಿಂದು, ಭೂಮಿಯ ಮೇಲೆ ದಾಳಿಗಳು ನಡೆಯಬಹುದು ಮತ್ತು ಲಕ್ಷಾಂತರ ಜನರು ಸಾವನ್ನಪ್ಪುತ್ತಾರೆ ಎಂದಿದ್ದಾರೆ.
  4. ಪರಮಾಣು ವಿದ್ಯುತ್ ಸ್ಥಾವರದಲ್ಲಿ ಸ್ಫೋಟ ಸಂಭವಿಸಬಹುದು. ಇದರಿಂದಾಗಿ ವಿಷಕಾರಿ ಮೋಡಗಳು ಏಷ್ಯಾ ಖಂಡವನ್ನು ಆವರಿಸುತ್ತವೆ. ಇದರ ಪರಿಣಾಮದಿಂದ ಅನೇಕ ದೇಶಗಳಿಗೆ ಗಂಭೀರ ಕಾಯಿಲೆಗಳು ಕಾಣಿಸುತ್ತದೆ.
  5. 2023 ರ ಹೊತ್ತಿಗೆ, ಮಾನವರು ಪ್ರಯೋಗಾಲಯಗಳಲ್ಲಿ ಜನಿಸುತ್ತಾರೆ. ಇಲ್ಲಿಂದ ಜನರ ಪಾತ್ರ ಮತ್ತು ಚರ್ಮದ ಬಣ್ಣ ನಿರ್ಧರಿಸಲಾಗುತ್ತದೆ. ಇದರರ್ಥ ಜನನ ಪ್ರಕ್ರಿಯೆಯು ಸಂಪೂರ್ಣವಾಗಿ ನಿಯಂತ್ರಿಸಲ್ಪಡುತ್ತದೆ.

ಬಾಬಾ ವಂಗಾ ಅವರ ಹಿನ್ನೆಲೆ

111 ವರ್ಷಗಳ ಹಿಂದೆ ಅಂದರೆ(1911) ಬಲ್ಗೇರಿಯಾದಲ್ಲಿ ಬಾಬಾ ವಂಗಾ ಜನಿಸಿದರು. ತನ್ನ 12ನೇ ವಯಸ್ಸಿನಲ್ಲಿ ಕಣ್ಣುಗಳನ್ನು ಕಳೆದುಕೊಂಡಿದ್ದರು. 1996 ರಲ್ಲಿ ಸಾಯುವ ಮೊದಲು, ಈಕೆ ಅನೇಕ ಭವಿಷ್ಯವಾಣಿಗಳನ್ನು ಹೇಳಿದ್ದಳು. ಸಾವಿಗೂ ಮೊದಲು ಬಾಬಾ ವಂಗಾ ಅವರು 2022 ಮತ್ತು ನಂತರ ಅನೇಕ ವರ್ಷಗಳ ಕಾಲ ನಡೆಯುವ ಪ್ರಮುಖ ಘಟನೆಗಳ ಬಗ್ಗೆ ಅವರು ಭವಿಷ್ಯವಾಣಿ ನುಡಿದಿದ್ದಾರೆ.

2022 ರಲ್ಲಿ ನುಡಿದ ಭವಿಷ್ಯವಾಣಿಯಾದರೇನು?

ಬಾಬಾ ವಂಗಾ ಅವರು 2022ರಲ್ಲಿ ನುಡಿದಿದ್ದ 2 ಭವಿಷ್ಯವಾಣಿಗಳು ನಿಜವಾಗಿದೆ. . ಬಾಬಾ ವಂಗಾ ಅವರು ಕೆಲವು ದೇಶಗಳಲ್ಲಿ ನೀರಿನ ಸಮಸ್ಯೆಗಳ ಬಗ್ಗೆ ಭವಿಷ್ಯ ನುಡಿದಿದ್ದರು ಮತ್ತು 2022 ರಲ್ಲಿ ಕೆಲವು ದೇಶಗಳಲ್ಲಿ ಪ್ರವಾಹದಿಂದಾಗಿ ಪರಿಸ್ಥಿತಿ ಹದಗೆಡುತ್ತದೆ. ಪೋರ್ಚುಗಲ್ ಮತ್ತು ಇಟಲಿಯಲ್ಲಿ ಅನೇಕ ಪ್ರದೇಶಗಳಲ್ಲಿ ಬರಗಾಲವಿದೆ. ಅದೇ ಸಮಯದಲ್ಲಿ, ಆಸ್ಟ್ರೇಲಿಯಾ ಮತ್ತು ಏಷ್ಯಾದ ದೇಶಗಳು 2022 ರಲ್ಲಿ ತೀವ್ರ ಪ್ರವಾಹವನ್ನು ಎದುರಿಸಿದವು.

ಆ ನಿಟ್ಟಿನಲ್ಲಿ ಇದೀಗ 2023ರಕ್ಕೆ ಬಾಬಾ ವಂಗಾ ಅವರು ನುಡಿದ ಭವಿಷ್ಯವಾಣಿಗಳು ಭಾರೀ ಕುತೂಹಲವನ್ನು ಮೂಡಿಸಿದ್ದು, ಜನರಲ್ಲಿ ಭಯವನ್ನು ಉಂಟುಮಾಡಿದೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..