1. Home
  2. National
  3. &
  4. International
  5. International
  6. News
  7. ವಿಶ್ವದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್‌ರ ರಂಗೀನ್ ಬದುಕು ಹೇಗಿದೆ ಗೊತ್ತಾ? – ಮಸ್ಕ್ ಬದುಕಲ್ಲಿ ಬಂದು ಹೋದ ಚೆಲುವೆಯರ ಲಿಸ್ಟ್ ಲೆಕ್ಕಕ್ಕೇ ಸಿಗ್ತಿಲ್ಲ, ಆತನಿಗೆ ಇರೋ ಪ್ರಿಯತಮೆಯರೆಷ್ಟು?

ವಿಶ್ವದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್‌ರ ರಂಗೀನ್ ಬದುಕು ಹೇಗಿದೆ ಗೊತ್ತಾ? – ಮಸ್ಕ್ ಬದುಕಲ್ಲಿ ಬಂದು ಹೋದ ಚೆಲುವೆಯರ ಲಿಸ್ಟ್ ಲೆಕ್ಕಕ್ಕೇ ಸಿಗ್ತಿಲ್ಲ, ಆತನಿಗೆ ಇರೋ ಪ್ರಿಯತಮೆಯರೆಷ್ಟು?

ವಿಶ್ವದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್‌ರ ರಂಗೀನ್  ಬದುಕು ಹೇಗಿದೆ ಗೊತ್ತಾ? – ಮಸ್ಕ್ ಬದುಕಲ್ಲಿ ಬಂದು ಹೋದ ಚೆಲುವೆಯರ ಲಿಸ್ಟ್ ಲೆಕ್ಕಕ್ಕೇ ಸಿಗ್ತಿಲ್ಲ, ಆತನಿಗೆ ಇರೋ ಪ್ರಿಯತಮೆಯರೆಷ್ಟು?
0

ನ್ಯೂಸ್‌ ಆ್ಯರೋ: ಉದ್ಯಮದ ಮೈಲುಗಲ್ಲು ಹಾಗೂ ವೈಯುಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ಸದಾ ಸುದ್ದಿಯಲ್ಲಿರುವ ವ್ಯಕ್ತಿ ಟ್ವಿಟರ್‌ನ ಹೊಸ ಮಾಲೀಕ ಎಲಾನ್ ಮಸ್ಕ್‌. ಅವರ ವೈವಾಹಿಕ ಜೀವನ ಬಹಳ ಸ್ವಾರಸ್ಯಕರವಾಗಿದ್ದು, ತಮ್ಮ ಪ್ರೇಯಸಿಯರ ವಿಷಯದಲ್ಲೂ ಆಗಾಗ ಸುದ್ದಿಯಾಗುತ್ತಾರೆ. ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿಯ ರಂಗೀನ್ ಬದುಕು ಹೇಗಿದೆ ಗೊತ್ತಾ?

ಎಲಾನ್‌ ಮಸ್ಕ್‌ ಒಟ್ಟು ಐದು ಯುವತಿಯರೊಂದಿಗೆ ಸಂಬಂಧ ಹೊಂದಿದ್ದರು. ಅಲ್ಲದೆ, ಈಗಾಗಲೇ ಮೂರು ಬಾರಿ ವಿವಾಹವಾಗಿದ್ದಾರೆ. ಆದರೆ, ವೈವಾಹಿಕ ಜೀವನ ಹಳಿಗೆ ಬಂದಿಲ್ಲ. ಮಸ್ಕ್‌ ಅವರ ಮೊದಲ ಪತ್ನಿ ಜಸ್ಟಿನ್ ವಿಲ್ಸನ್. ಸುಮಾರು 7 ವರ್ಷಗಳ ಕಾಲ ಆಕೆಯೊಂದಿಗೆ ಡೇಟಿಂಗ್‌ ಮಾಡಿದ್ದ ಮಸ್ಕ್‌ 2000ರಲ್ಲಿ ಮದುವೆಯಾದರು. ಇಬ್ಬರಿಗೂ ಕಾಲೇಜಿನಿಂದಲೇ ಪರಿಚಯವಿತ್ತು. ಆದರೆ, ಇವರ ದಾಂಪತ್ಯ ಹೆಚ್ಚು ಕಾಲ ಉಳಿಯಲಿಲ್ಲ. 2008ರಲ್ಲಿ ಈ ಜೋಡಿ ವಿಚ್ಛೇದನ ಪಡೆದಿದ್ದು, ಇವರಿಗೆ ಐವರು ಮಕ್ಕಳಿದ್ದಾರೆ.

ಬಳಿಕ ಮಸ್ಕ್‌ ಅವರು ನಟಿ ತಲಲಾ ರಿಲೇ ಅವರನ್ನು 2010ರಲ್ಲಿ ವರಿಸಿದರು. ಅಮೆರಿಕದ ಈ ನಟಿ ಸಾಕಷ್ಟು ಸಿನೆಮಾ ಹಾಗೂ ಟಿವಿ ಸಿರೀಸ್‌ಗಳಲ್ಲಿ ಬಣ್ಣ ಹಚ್ಚಿದ್ದಾರೆ. 2012ರಲ್ಲಿ ಅವರಿಗೆ ವಿಚ್ಛೇದನ ನೀಡಿದ ಮಸ್ಕ್‌, 2013ರಲ್ಲಿ ಮತ್ತೆ ಅವರು ಒಂದಾದರು. ಎರಡನೇ ಚಾನ್ಸ್‌ ಪಡೆದರೂ 2016ರಲ್ಲಿ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿ, ಮತ್ತೆ ಬೇರ್ಪಟ್ಟರು.

ಇದರ ಬೆನ್ನಲ್ಲೇ ಮಸ್ಕ್‌ ಅವರು ಅಂಬರ್ ಹರ್ಡ್ ಜತೆ ಡೇಟಿಂಗ್‌ ಶುರು ಮಾಡಿದ್ದರು. ಆದರೆ, 2017ರಲ್ಲಿ ಇಬ್ಬರೂ ದೂರವಾಗಿದ್ದಾರೆ. ನಂತರ ಎಲೊನ್‌ ಬದುಕಿನಲ್ಲಿ ಸಾಕಷ್ಟು ಯುವತಿಯರು ಬಂದು ಹೋಗಿದ್ದಾರೆ. ಆದರೆ ಆತ ಯಾರನ್ನೂ ಮದುವೆಯಾಗಲಿಲ್ಲ. 2018ರಲ್ಲಿ ಸಂಗೀತಗಾರ್ತಿ ಗ್ರಿಮ್ಸ್ ಜೊತೆ ಡೇಟಿಂಗ್ ಮಾಡಲು ಪ್ರಾರಂಭಿಸಿದರು. ಆದರೆ, ಮದುವೆಗೂ ಮುನ್ನವೇ ಆಕೆ ಮಗುವಿಗೆ ಜನ್ಮ ನೀಡಿದ್ದಾಳೆ. ಮಗುವಿಗೆ ನೀಡಿದ್ದ ‘X A-12’ ಎಂಬ ಹೆಸರು ಕೂಡ ಸಾಕಷ್ಟು ಸುದ್ದಿ ಮಾಡಿತ್ತು. ನಂತರ ಅವರು ಕ್ಯಾಲಿಫೋರ್ನಿಯಾ ಕಾನೂನನ್ನು ಪಾಲಿಸಲು ‘X AE A-XII’ ಎಂದು ಹೆಸರನ್ನು ಬದಲಾಯಿಸಿಕೊಂಡರು. 2021ರಲ್ಲಿ ಇಬ್ಬರೂ ಬೇರ್ಪಟ್ಟರು. ಆದರೆ, ಅದೇ ವರ್ಷ ಡಿಸೆಂಬರ್‌ನಲ್ಲಿ ಇಬ್ಬರೂ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದಿದ್ದಾರೆ ಎಂಬ ಸುದ್ದಿಯೂ ಹರಿದಾಡಿತ್ತು.

ಎಲಾನ್‌ ಮಸ್ಕ್‌ ಅವರು ಶಿವೋನ್ ಜಿಲ್ಲಿಸ್ ಜೊತೆಗೂ ಸಂಬಂಧ ಹೊಂದಿದ್ದರು. ಇಬ್ಬರು ಮಕ್ಕಳನ್ನು ಇವರು ಹೊಂದಿದ್ದಾರೆ. ಪ್ರಸ್ತುತ ಎಲಾನ್‌ ಮಸ್ಕ್ ಅವರು ಆಸ್ಟ್ರೇಲಿಯಾದ ನಟಿ ನತಾಶಾ ಬ್ಯಾಸೆಟ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವರದಿಗಳಿವೆ. ಆಸ್ಟಿನ್ ಬಟ್ಲರ್ ಅವರ ಮುಂಬರುವ ಚಿತ್ರ ಎಲ್ವಿಸ್ ಬಯೋಪಿಕ್‌ನಲ್ಲಿ ಬ್ಯಾಸೆಟ್ ಕಾಣಿಸಿಕೊಳ್ಳಲಿದ್ದಾರೆ. ಎಲೆನ್ ಮತ್ತು ಬ್ಯಾಸೆಟ್ ತಮ್ಮ ಸಂಬಂಧದ ಬಗ್ಗೆ ಇನ್ನೂ ದೃಢಪಡಿಸಿಲ್ಲ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..