ಐಷಾರಾಮಿ ಪ್ರೈವೆಟ್ ಜೆಟ್ ಖರೀದಿಸಿದ ಟ್ವಿಟರ್ ಮಾಲೀಕ ಎಲಾನ್ ಮಸ್ಕ್ – ದುಬಾರಿ ಜೆಟ್ ನ ಬೆಲೆ ಎಷ್ಟು ಕೋಟಿ ಗೊತ್ತಾ…!?

ನ್ಯೂಸ್ ಆ್ಯರೋ : ಟೆಸ್ಲಾ ಮಂಗಳನ ಅಂಗಳಕ್ಕೆ ಜನರನ್ನು ಸಾಗಿಸುವ ಮಹಾತ್ವಾಕಾಂಕ್ಷೆ ಹೊಂದಿರುವ ಸ್ಪೇಸ್‌ಎಕ್ಸ್ ಕಂಪನಿ ಒಡೆಯ ಎಲಾನ್ ಮಸ್ಕ್ ಆಸ್ತಿ ಮೌಲ್ಯ 273 ಬಿಲಿಯನ್ ಡಾಲರ್. ಸದ್ಯಕ್ಕೆ ಜಗತ್ತಿನಲ್ಲಿ ಈತನಷ್ಟು ಶ್ರೀಮಂತರು ಮತ್ತೊಬ್ಬರಿಲ್ಲ. ಈ ವಿಶ್ವದ ನಂಬರ್ ಒನ್ ಶ್ರೀಮಂತ ಎಲಾನ್ ಮಸ್ಕ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ನಿರಂತರವಾಗಿ ಸದ್ದು ಮಾಡುತ್ತಿದ್ದು, ಇತ್ತೀಚೆಗಷ್ಟೇ 44 ಬಿಲಿಯನ್ ಡಾಲರ್ ವ್ಯಯಿಸಿ ಟ್ವಿಟ್ಟರ್ ಕಂಪನಿಯನ್ನು ಖರೀದಿಸುವ ಮೂಲಕ ಟ್ರೆಂಡ್ ನಲ್ಲಿದ್ದಾರೆ.
ಇಷ್ಟೆಲ್ಲಾ ಬೆಳವಣಿಗೆ ನಡುವೆ ಎಲಾನ್ ಮಸ್ಕ್ ಮತ್ತೊಂದು ವಿಷಯಕ್ಕಾಗಿ ಸುದ್ದಿಯಲ್ಲಿದ್ದು, ತಮಗಾಗಿ ಲಕ್ಸುರಿ ಪ್ರೈವೇಟ್ ಜೆಟ್ ಅನ್ನು ಖರೀದಿಸಿದ್ದಾರೆ.
ಹೌದು.. ಈ ಕುರಿತಾಗಿ ಅಸ್ಟೋನಿಯಾ ವರದಿ ಮಾಡಿದ್ದು, ಐಷಾರಾಮಿ ವಿಮಾನ ಗಲ್ಫ್‌ಸ್ಟ್ರೀಮ್ G700 ಕೊಳ್ಳುವುದಕ್ಕೆ ಆರ್ಡರ್ ನೀಡಿದ್ದಾರೆ. 2023ರಲ್ಲಿ ಡೆಲಿವರಿ ಗಲ್ಫ್‌ಸ್ಟ್ರೀಮ್ G700 ಆಗಲಿದ್ದು, G700 ಖಾಸಗಿ ವಿಮಾನವು ಇತಿಹಾಸದಲ್ಲಿ ಅತಿ ವಿಶಾಲವಾದ ಕ್ಯಾಬಿನ್ ಅನ್ನು ಹೊಂದಿದೆ. ಇದರಲ್ಲಿ 19 ಆಸನಗಳು ಇರಲಿದ್ದು, 51,000 ಅಡಿ ಎತ್ತರದಲ್ಲಿ ಇದು ಹಾರಾಟ ನಡೆಸಲಿದೆ. ಗಲ್ಫ್ G700 ಖಾಸಗಿ ವಿಮಾನದ ಮೂಲ ಬೆಲೆ 78 ಕೋಟಿ ಅಮೆರಿಕನ್ ಡಾಲರ್ ಆಗಿದ್ದು, ಭಾರತದ ಮೌಲ್ಯದಲ್ಲಿ 646 ಕೋಟಿ ರೂ. ವೆಚ್ಚ ತಗುಲಲಿದೆ.
19 ಆಸನಗಳ ಜೆಟ್ 28x 21 ಇಂಚು ಅಳತೆಯ 20 ಅಂಡಾಕಾರದ ಕಿಟಕಿಗಳೊಂದಿಗೆ ಬರುತ್ತದೆ. ಇದು ಎರಡು ಶೌಚಾಲಯಗಳು, ಕ್ಯಾಬಿನ್ ಮತ್ತು ನಾಲ್ಕು ವಾಸಿಸುವ ಪ್ರದೇಶಗಳನ್ನು ಹೊಂದಿದೆ. ಇವುಗಳಲ್ಲಿ ಪ್ರಯಾಣಿಕರು ಊಟ ಮಾಡುವಾಗ ವಿಶ್ರಾಂತಿ ಮತ್ತು ಕೆಲಸ ಮಾಡಬಹುದು. ಗಲ್ಫ್‌ಸ್ಟ್ರೀಮ್ G700 ಆನಂದದಾಯಕ ನಿದ್ರೆಗಾಗಿ ಪೂರ್ಣ ಗಾತ್ರದ ಐಷಾರಾಮಿ ಹಾಸಿಗೆಗಳನ್ನು ಹೊಂದಿದೆ. ಊಟದ ವಿಭಾಗವು ಮೈಕ್ರೋವೇವ್, ಓವನ್ ಇತ್ಯಾದಿಗಳನ್ನು ಹೊಂದಿದೆ. ವೈ-ಫೈ ವ್ಯವಸ್ಥೆಯೊಂದಿಗೆ ವಿಮಾನದ ಅನುಭವವು ಉತ್ತಮವಾಗಿರುತ್ತದೆ.
G700 ಜೆಟ್ ವಿಮಾನವನ್ನು ಅಮೆರಿಕದ ವಿಮಾನ ಕಂಪನಿ ಗಲ್ಫ್‌ಸ್ಟ್ರೀಮ್ ಏರೋಸ್ಪೇಸ್ ತಯಾರಿಸಿದ್ದು, ಇದುವರೆಗೆ ನಿರ್ಮಿಸಲಾದ ಅತಿದೊಡ್ಡ ಜೆಟ್ ವಿಮಾನಗಳಲ್ಲಿ ಒಂದಾಗಿದೆ. ಗಲ್ಫ್‌ಸ್ಟ್ರೀಮ್‌ನ ವೆಬ್‌ಸೈಟ್ ಪ್ರಕಾರ, ಇದು ರೋಲ್ಸ್ ರಾಯ್ಸ್‌ನಿಂದ ಹೊಸ ಹೈ-ಥ್ರಸ್ಟ್ ಪವರ್‌ಟ್ರೇನ್‌ಗಳಿಂದ ಚಾಲಿತವಾಗಲಿದ್ದು, ಕಂಪನಿಯು ಅಕ್ಟೋಬರ್ 2019 ರಲ್ಲಿ ಸಿಮೆಟ್ರಿ ಫ್ಲೈಟ್ ಡೆಕ್‌ನೊಂದಿಗೆ ವಿಮಾನವನ್ನು ಪರಿಚಯಿಸಿತು.
ಸದ್ಯಕ್ಕೆ ಎಲಾನ್ ಮಸ್ಕ್ ಬಳಿ ನಾಲ್ಕು ಖಾಸಗಿ ಗಲ್ಫ್‌ಸ್ಟ್ರೀಮ್ ವಿಮಾನಗಳಿದ್ದು, ಅವರ ಮೊದಲ ಖಾಸಗಿ ವಿಮಾನ ಡಸಾಲ್ಟ್ 900B. ಮಸ್ಕ್ ಅವರ ಎಲ್ಲ ವಿಮಾನಗಳು ಫಾಲ್ಕನ್ ಲ್ಯಾಂಡಿಂಗ್ ಎಲ್‌ಎಲ್‌ಸಿ ಬಳಿ ನೋಂದಣಿ ಆಗಿದೆ. ಇದೊಂದು ಶೆಲ್ ಕಂಪನಿ, ಸ್ಪೇಸ್ ಎಕ್ಸ್ ಜತೆ ಒಪ್ಪಂದ ಮಾಡಿಕೊಂಡಿದೆ ಎಂದು ಬಿಜಿನೆಸ್ ಇನ್‌ಸೈಡರ್ ವರದಿ ಮಾಡಿದೆ.