1. Home
  2. National
  3. &
  4. International
  5. National
  6. News
  7. 18 ಮಂದಿಯನ್ನು ಭಯೋತ್ಪಾದಕರೆಂದು ಪಟ್ಟಿ ಮಾಡಿದ ಕೇಂದ್ರ – ಹಿಟ್ ಲಿಸ್ಟ್ ನಲ್ಲಿ ಭಟ್ಕಳದ ಇಬ್ಬರು ಉಗ್ರರು

18 ಮಂದಿಯನ್ನು ಭಯೋತ್ಪಾದಕರೆಂದು ಪಟ್ಟಿ ಮಾಡಿದ ಕೇಂದ್ರ – ಹಿಟ್ ಲಿಸ್ಟ್ ನಲ್ಲಿ ಭಟ್ಕಳದ ಇಬ್ಬರು ಉಗ್ರರು

18 ಮಂದಿಯನ್ನು ಭಯೋತ್ಪಾದಕರೆಂದು ಪಟ್ಟಿ ಮಾಡಿದ ಕೇಂದ್ರ – ಹಿಟ್ ಲಿಸ್ಟ್ ನಲ್ಲಿ ಭಟ್ಕಳದ ಇಬ್ಬರು ಉಗ್ರರು
0

ನ್ಯೂಸ್ ಆ್ಯರೋ : ತಿದ್ದುಪಡಿ ಮಾಡಲಾದ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ, 2019 ರ ಅಡಿಯಲ್ಲಿ 18 ಜನರನ್ನ ಭಯೋತ್ಪಾದಕರು ಎಂದು ಕೇಂದ್ರ ಗೃಹ ಸಚಿವಾಲಯವು ಘೋಷಿಸಿದೆ.

ಪಟ್ಟಿಯಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಸೈಯದ್ ಸಲಾಹುದ್ದೀನ್, ಇಂಡಿಯನ್ ಮುಜಾಹಿದ್ದೀನ್ ಸಂಸ್ಥಾಪಕರಾದ ರಿಯಾಜ್ ಮತ್ತು ಇಕ್ಬಾಲ್ ಭಟ್ಕಳ್ ಮತ್ತು ದರೋಡೆಕೋರ ದಾವೂದ್ ಇಬ್ರಾಹಿಂಗೆ ನಿಕಟವಾಗಿರುವ ಛೋಟಾ ಶಕೀಲ್ ಇದ್ದಾನೆ.

ಕೇಂದ್ರ ಸರ್ಕಾರವು 2019ರ ಸೆಪ್ಟೆಂಬರ್‌ನಲ್ಲಿ ನಾಲ್ವರನ್ನು ಮತ್ತು ಜುಲೈ 2020ರಲ್ಲಿ ಒಂಬತ್ತು ವ್ಯಕ್ತಿಗಳನ್ನು ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಭಯೋತ್ಪಾದಕರು ಎಂದು ಘೋಷಿಸಿತ್ತು.

ಈ ಬಗ್ಗೆ ಗೃಹ ಸಚಿವಾಲಯದ ವಕ್ತಾರರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, 1999ರಲ್ಲಿ ಇಂಡಿಯನ್ ಏರ್‌ಲೈನ್ಸ್ ವಿಮಾನ ಅಪಹರಣಕಾರರಾದ ಅಬ್ದುಲ್ ರವೂಫ್ ಅಸ್ಗರ್, ಇಬ್ರಾಹಿಂ ಅಥರ್ ಮತ್ತು ಯೂಸುಫ್ ಅಜರ್ ಕೂಡ ಈ ಪಟ್ಟಿಯಲ್ಲಿದ್ದಾರೆ. ಕೇಂದ್ರವು 2019ರ ಸೆಪ್ಟೆಂಬರ್‌ನಲ್ಲಿ ನಾಲ್ವರನ್ನ ಮತ್ತು ಜುಲೈ 2020 ರಲ್ಲಿ ಒಂಬತ್ತು ಜನರನ್ನ ಭಯೋತ್ಪಾದನಾ ವಿರೋಧಿ ಕಾಯ್ದೆಯಡಿಯಲ್ಲಿ ಭಯೋತ್ಪಾದಕರೆಂದು ಗೊತ್ತುಪಡಿಸಿತ್ತು. ಹೊಸ ಸೇರ್ಪಡೆಯೊಂದಿಗೆ 31 ಜನರನ್ನ ಭಯೋತ್ಪಾದಕರೆಂದು ಗುರುತಿಸಲಾಗಿದೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..