ನ್ಯೂಸ್ ಆ್ಯರೋ : ತನ್ನ ಕರೆಗೆ ಸ್ನೇಹಿತ ಬರಲಿಲ್ಲವೆಂದು ಮನನೊಂದು 16 ವರ್ಷದ ವಿದ್ಯಾರ್ಥಿನಿಯೊಬ್ಬಳು ತನ್ನದೇ ವಯಸ್ಸಿನ ಇನ್ನಿಬ್ಬರು ಆತ್ಮೀಯ ಸ್ನೇಹಿತೆಯರ ಜತೆ ವಿಷ ಸೇವನೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ. ಘಟನೆಯಲ್ಲಿ ಇಬ್ಬರು ವಿದ್ಯಾರ್ಥಿನಿಯರು ಸಾವನ್ನಪ್ಪಿದ್ದು, ಮತ್ತೋರ್ವಳ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ಏನಿದು ಪ್ರಕರಣ?
ಆತ್ಮಹತ್ಯೆಗೆ ಶರಣಾಗಿರುವ ಮೂವರು ವಿದ್ಯಾರ್ಥಿನಿಯರು ಸಹಪಾಠಿಗಳಾಗಿದ್ದು, ಆತ್ಮೀಯ ಸ್ನೇಹಿತರಾಗಿದ್ದರು. ಮೃತರ ಪೈಕಿ ಓರ್ವ ವಿದ್ಯಾರ್ಥಿನಿಗೆ ಇಂದೋರ್‌ನಲ್ಲಿ ಒಬ್ಬ ಸ್ನೇಹಿತನಿದ್ದ. ಆತ ಕಳೆದ ಕೆಲ ದಿನಗಳಿಂದ ಆಕೆಯ ಫೋನ್‌ಗೆ ಸ್ಪಂದಿಸುತ್ತಿರಲಿಲ್ಲ. ಇದರಿಂದ ಮನನೊಂದ ಆಕೆ ತನ್ನ ಸ್ನೇಹಿತರ ಜತೆ ಸೇರಿಕೊಂಡ ಆತನನ್ನು ನೇರವಾಗಿ ಭೇಟಿಯಾಗಲು ಹೋಗಿದ್ದಾಲೆ. ಶುಕ್ರವಾರ ಬೆಳಿಗ್ಗೆ ಶಾಲೆಗೆ ಹೋಗದೆ ಆತ್ಮೀಯ ಇಬ್ಬರು ಸ್ನೇಹಿತೆಯರ ಜೊತೆ 100 ಕಿ.ಮೀ. ದೂರದ ಇಂದೋರ್‌ಗೆ ಬಸ್ ಮೂಲಕ ತೆರಳಿದ್ದಾಳೆ.
ಸ್ನೇಹಿತ ಸಿಗದಿದ್ದರೆ ತನ್ನಿಬ್ಬರು ಆತ್ಮೀಯ ಸ್ನೇಹಿತೆಯರ ಜೊತೆ ವಿಷ ಸೇವಿಸಿ ಆತ್ಮಹತ್ಯೆ ಶರಣಾಗುವ ಬಗ್ಗೆ ನಿರ್ಧಾರಿಸಿದ್ದಾಳೆ. ಭವಾರ್‌ಕೌನ್ ಪ್ರದೇಶದ ಉದ್ಯಾನವನದಲ್ಲಿ ಸ್ನೇಹಿತನ ಬರುವಿಕೆಗಾಗಿ ಮೂವರು ಕಾಯುತ್ತಿದ್ದರು. ಆತ ಬಾರದೆ ಇದ್ದಾಗ ಮನನೊಂದು ವಿಷ ಸೇವಿಸಿದ್ದಾಳೆ.
ಮತ್ತೊಬ್ಬಳು ತನ್ನ ಮನೆಯಲ್ಲಿ ಸಮಸ್ಯೆಯ ನೆಪವೊಡ್ಡಿ ಅಲ್ಲೇ ವಿಷ ಸೇವಿಸಿದ್ದಾಳೆ. ಉಳಿದ ಕೊನೆಯ ಸ್ನೇಹಿತೆ ಆತ್ಮೀಯರನ್ನು ಕಳೆದುಕೊಳ್ಳುತ್ತಿರುವ ದುಃಖದಲ್ಲಿ ವಿಷ ಸೇವಿಸಿದ್ದಾಳೆ. ಈಕೆಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
News Arrowಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..