1. Home
  2. National
  3. &
  4. International
  5. National
  6. News
  7. ವಿಶ್ವದ ಎರಡನೇ ದುಬಾರಿ ಆಸ್ತಿಯಂತೆ ಉದ್ಯಮಿ ಮುಖೇಶ್ ಅಂಬಾನಿ ಅರಮನೆ: ಬಂಗಲೆ ನೋಡಿದರೆ ನಿಮಗೂ ಅಚ್ಚರಿ ಗ್ಯಾರಂಟಿ

ವಿಶ್ವದ ಎರಡನೇ ದುಬಾರಿ ಆಸ್ತಿಯಂತೆ ಉದ್ಯಮಿ ಮುಖೇಶ್ ಅಂಬಾನಿ ಅರಮನೆ: ಬಂಗಲೆ ನೋಡಿದರೆ ನಿಮಗೂ ಅಚ್ಚರಿ ಗ್ಯಾರಂಟಿ

ವಿಶ್ವದ ಎರಡನೇ ದುಬಾರಿ ಆಸ್ತಿಯಂತೆ ಉದ್ಯಮಿ ಮುಖೇಶ್ ಅಂಬಾನಿ ಅರಮನೆ: ಬಂಗಲೆ ನೋಡಿದರೆ ನಿಮಗೂ ಅಚ್ಚರಿ ಗ್ಯಾರಂಟಿ
0

ನ್ಯೂಸ್ ಆ್ಯರೋ : ದೇಶದ ಪ್ರಮುಖ ಉದ್ಯಮಿಗಳಲ್ಲಿ ಒಬ್ಬರಾಗಿರುವ ಮುಖೇಶ್ ಅಂಬಾನಿ ತಮ್ಮ ಉದ್ಯಮಕ್ಕೆ ಹಾಗೂ ಐಷಾರಾಮಿ ಜೀವನ ಶೈಲಿ ಸಂಬಂಧ ಯಾವತ್ತೂ ಸುದ್ದಿಯಲ್ಲಿರುವ ವ್ಯಕ್ತಿ. ಐಷಾರಾಮಿ ವಾಹನ, ಅತ್ಯದ್ಭುತ ಮನೆ, ದುಬಾರಿ ಆಸ್ತಿ , ಬೆಲೆಬಾಳುವ ವಸ್ತುಗಳು ಸೇರಿದಂತೆ ಅವರ ಮನೆಯಲ್ಲಿ ನಡೆಯುವ ಅದ್ಧೂರಿ ಕಾರ್ಯಕ್ರಮಗಳು ಎಲ್ಲರ ಗಮನ ಸೆಳೆಯುತ್ತಿರುತ್ತದೆ. ಹೀಗೇ ಎಲ್ಲದರಲ್ಲೂ ವಿಭಿನ್ನತೆಯನ್ನು ಕಾಯ್ದುಕೊಂಡಿರುವ ಅಂಬಾನಿ ಅವರ ಆಸ್ತಿಯೂ ಎಲ್ಲರ ಕಣ್ಮನ ಸೆಳೆಯುವುದರಲ್ಲಿ ಎರಡು ಮಾತಿಲ್ಲ.

ವಿಶ್ವದ ಎರಡನೇ ದುಬಾರಿ ಆಸ್ತಿ ‘ಆಂಟಿಲಿಯಾ’ ಮನೆ. ಹೌದು, ಬಕಿಂಗ್ಹ್ಯಾಮ್ ಅರಮನೆಯ ನಂತರ ವಿಶ್ವದ ಎರಡನೇ ಅತ್ಯಂತ ಅದ್ದೂರಿ ಆಸ್ತಿ ಎಂದು ಅಂದಾಜಿಸಲಾಗಿದೆ. ‘ಆಂಟಿಲಿಯಾʼ ಮನೆ ಮುಂಬೈನಲ್ಲಿ ಒಂದು ಅಪ್ರತಿಮ ಹೆಗ್ಗುರುತಾಗಿದೆ.


‘ಆಂಟಿಲಿಯಾʼ ಹೆಸರಿನ ಹಿಂದಿನ ರಹಸ್ಯ:

ಈ ಕಟ್ಟಡಕ್ಕೆ ಪೋರ್ಚುಗಲ್ ಮತ್ತು ಸ್ಪೇನ್ ಬಳಿಯ ಅಟ್ಲಾಂಟಿಕ್ ಸಾಗರದಲ್ಲಿರುವ ಪೌರಾಣಿಕ ದ್ವೀಪ ‘ಆಂಟಿಲಿಯಾʼ ಎಂದು ಹೆಸರನ್ನು ಇಡಲಾಗಿದೆ. 400,000 ಚದರ ಅಡಿ ಕಟ್ಟಡವನ್ನು ವಿನ್ಯಾಸಗೊಳಿಸಲು ಮತ್ತು ನಿರ್ಮಿಸಲು ಎರಡು ವಿಶ್ವಪ್ರಸಿದ್ಧ, ಯುಎಸ್7 ಮೂಲದ ಕಂಪನಿಗಳು ನೇಮಕಗೊಂಡಿದ್ದವು. 27-ಅಂತಸ್ತಿನ ಕಟ್ಟಡವನ್ನು ಪ್ರತಿಷ್ಠಿತ ಚಿಕಾಗೋ ಮೂಲದ ವಾಸ್ತುಶಿಲ್ಪಿಗಳಾದ ಪರ್ಕಿನ್ಸ್ ಮತ್ತು ವಿಲ್ ವಿನ್ಯಾಸಗೊಳಿಸಿದ್ದಾರೆ. ಇದನ್ನು ಆಸ್ಟ್ರೇಲಿಯಾ ಮೂಲದ ಲೈಟನ್ ಹೋಲ್ಡಿಂಗ್ಸ್ ಎಂಬ ಕಂಪೆನಿ ನಿರ್ಮಾಣವನ್ನು ಮಾಡಿದೆ.

ಮನೆ ನಿರ್ವಹಣೆಗೆ 600 ಮಂದಿ:

2006 ರಲ್ಲಿ ಪ್ರಾರಂಭವಾದ ಕಟ್ಟಡ ನಿರ್ಮಾಣ ಕಾರ್ಯ 2012 ರಲ್ಲಿ ಪೂರ್ಣಗೊಂಡಿತ್ತು. ಈ ಐಷಾರಾಮಿ ಮನೆಯನ್ನು ನೋಡಿಕೊಳ್ಳಲು 600 ಮಂದಿ ಇದ್ದಾರೆ.

‘ಆಂಟಿಲಿಯಾʼ ಮನೆಯ ವಿಶೇಷತೆ ಏನೂ ಗೊತ್ತಾ?

ವಾಸ್ತುಶಿಲ್ಪವು ಸೂರ್ಯ ಮತ್ತು ಕಮಲದಿಂದ ಪ್ರೇರಿತವಾಗಿದೆ. ಮನೆಯ ಬಹುಮುಖ್ಯ ವಿಶೇಷತೆ ಎಂದರೆ ಇದು 8 ತೀವ್ರತೆಯ ಭೂಕಂಪವನ್ನು ತಡೆದುಕೊಳ್ಳುವ ಶಕ್ತಿಯನ್ನು ಒಳಗೊಂಡಿದೆ. ಮೊದಲ 6 ಮಹಡಿಗಳು ವಾಹನ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ 168 ಕಾರುಗಳನ್ನು ಏಕಕಾಲದಲ್ಲಿ ನಿಲುಗಡೆ ಮಾಡಬಹುದು. ಪಾರ್ಕಿಂಗ್ ಲಾಟ್‌ನ ಮೇಲಿನ ಮಹಡಿಯಲ್ಲಿ 50 ಆಸನಗಳ ಸಿನಿಮಾ ಹಾಲ್ ಮತ್ತು ಅದರ ಮೇಲೆ ಹೊರಾಂಗಣ ಗಾರ್ಡನ್‌ ಇದೆ.

ಮನೆಯಲ್ಲಿ ಯಾವೆಲ್ಲ ಸೌಕರ್ಯವಿದೆ?

ಒಂದು ಮಹಡಿಯಿಂದ ಇನ್ನೊಂದು ಮಹಡಿಗೆ ಹೋಗಲು 9 ಲಿಫ್ಟ್‌ಗಳನ್ನು ಅಳವಡಿಸಲಾಗಿದೆ. 1 ಸ್ಪಾ ಮತ್ತು ದೇವಸ್ಥಾನ ಕೂಡ ಇದೆ. ಇದಲ್ಲದೇ ಯೋಗ ಸ್ಟುಡಿಯೋ, ಐಸ್ ಕ್ರೀಂ ರೂಮ್, ಮೂರು ಈಜುಕೊಳಗಳು ಮತ್ತು ಹೆಲಿಪ್ಯಾಡ್‌ಗಳ ವ್ಯವಸ್ಥೆಯನ್ನು ಮಾಡಲಾಗಿದೆ.

ಸ್ನೋ ರೂಂ: ಇನ್ನೂ ಬಿಸಿಲ ಬೇಗೆಯಿಂದ ಹೊರ ಬರಲು ಸ್ನೋ ರೂಂನ್ನು ನಿರ್ಮಿಸಿದ್ದಾರೆ.

ಪ್ರತಿ ಮಹಡಿಯೂ ವಿಭಿನ್ನತೆ:

ಪ್ರತಿಯೊಂದು ಮಹಡಿಯು ಕರಕುಶಲ ವಿನ್ಯಾಸಗಳನ್ನು ಒಳಗೊಂಡಂತೆ ವಿಶಿಷ್ಟವಾದ ಆಲೋಚನೆಯೊಂದಿಗೆ ನಿರ್ಮಾಣವಾಗಿದೆ.

ಮನೆಯ ಒಟ್ಟು ಬೆಲೆ ಎಷ್ಟು?

ಇನ್ನೂ ಈ ಮನೆಯ ಒಟ್ಟು ಬೆಲೆ ₹15,000 ಕೋಟಿ ಆಗಬಹುದು ಎಂದು ಅಂದಾಜಿಸಲಾಗಿದೆ.

ಮುಖೇಶ್ ಅಂಬಾನಿ ಅವರು ‘ಆಂಟಿಲಿಯಾʼ ಮನೆಗೆ ಪ್ರವೇಶಿಸುವ ಮೊದಲು ಮುಂಬೈನ ಭುಲೇಶ್ವರದಲ್ಲಿ ಎರಡು ಬೆಡ್‌ ರೂಂ ಇರುವ ಒಂದು ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದರು.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..