1. Home
  2. National
  3. &
  4. International
  5. National
  6. News
  7. ಚೀನದಲ್ಲಿ ಮತ್ತೆ ಕೋವಿಡ್‌ ಹೊಸ ರೂಪಾಂತರದಲ್ಲಿ ಅಟ್ಟಹಾಸ – ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದಿನಿಂದ ಮುನ್ನೆಚ್ಚರಿಕಾ ಕ್ರಮ

ಚೀನದಲ್ಲಿ ಮತ್ತೆ ಕೋವಿಡ್‌ ಹೊಸ ರೂಪಾಂತರದಲ್ಲಿ ಅಟ್ಟಹಾಸ – ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದಿನಿಂದ ಮುನ್ನೆಚ್ಚರಿಕಾ ಕ್ರಮ

ಚೀನದಲ್ಲಿ ಮತ್ತೆ ಕೋವಿಡ್‌ ಹೊಸ ರೂಪಾಂತರದಲ್ಲಿ ಅಟ್ಟಹಾಸ – ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದಿನಿಂದ ಮುನ್ನೆಚ್ಚರಿಕಾ ಕ್ರಮ
0

ನ್ಯೂಸ್‌ ಆ್ಯರೋ : ಜಗತ್ತನ್ನು ತಲ್ಲಣಗೊಳಿಸಿದ್ದ ಕೋವಿಡ್‌ 19 ಪ್ರಕರಣ ಮತ್ತೆ ಚೀನಾದಲ್ಲಿ ವೇಗವಾಗಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇದೀಗ ಭಾರತದ ಸರ್ಕಾರ ಎಚ್ಚೆತ್ತುಕೊಂಡಿದೆ. ಹೀಗಾಗಿ, ಡಿಸೆಂಬರ್ 24ರಿಂದ ಅಂತರರಾಷ್ಟ್ರೀಯ ವಿಮಾನಗಳಿಂದ ಬರುವ ಪ್ರಯಾಣಿಕರಿಗೆ ಕೋವಿಡ್‌ ಪರೀಕ್ಷೆಯನ್ನು ನಡೆಸಲು ನಿರ್ಧರಿಸಲಾಗಿದೆ.

ಚೀನಾದ ಹೊರತಾಗಿ ಕೊರೊನಾದ ಹೊಸ ರೂಪಾಂತರವು ಜಪಾನ್ ಮತ್ತು ಅಮೆರಿಕದಲ್ಲಿಯೂ ತನ್ನ ಪರಿಣಾಮವನ್ನು ತೋರಿಸುತ್ತಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಭಾರತೀಯ ವೈದ್ಯಕೀಯ ಸಂಘ ಸಲಹೆ ನೀಡಿದ್ದು, ಅದರಂತೆ ಕೇಂದ್ರ ಸರ್ಕಾರ ಮುನ್ನೆಚ್ಚರಿಕೆ ಕ್ರಮಕ್ಕೆ ಮುಂದಾಗಿದೆ.

ಪ್ರತಿ ವಿಮಾನದಿಂದ ಶೇ 2ರಷ್ಟು ಪ್ರಯಾಣಿಕರನ್ನು ಪರೀಕ್ಷಿಸಲಾಗುವುದು. ವಿಶ್ವದ ವಿವಿಧ ದೇಶಗಳಲ್ಲಿ ಕೋವಿಡ್‌ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿರುವ ಕಾರಣ ಕೇಂದ್ರ ಆರೋಗ್ಯ ಸಚಿವಾಲಯವು ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಪತ್ರ ಬರೆದಿದೆ. ಪರೀಕ್ಷೆಯ ನಂತರ ಯಾರಾದರೂ ಕೋವಿಡ್ ಪಾಸಿಟಿವ್ ಎಂದು ಕಂಡುಬಂದರೆ, ಮಾದರಿಯನ್ನು ಜೀನೋಮಿಕ್ ಪರೀಕ್ಷೆಗೆ ಕಳುಹಿಸಬೇಕು ಎಂದು ಸೂಚಿಸಲಾಗಿದೆ. 

ಸ್ಯಾಂಪಲ್ ನೀಡಿದ ನಂತರವೇ ಏರ್‌ಪೋರ್ಟ್ ನಿಂದ ಪ್ರಯಾಣಿಕರು ಹೊರಬರಬೇಕು. ಹೊರ ದೇಶಗಳಿಂದ ಬರುವ ಪ್ರತಿಯೊಂದು ವಿಮಾನ ಯಾತ್ರಿಕರ ಪರಿಶೀಲನೆಯನ್ನು ಆಯಾ ವಿಮಾನಯಾನ ಸಂಸ್ಥೆಗಳು ನೋಡಿಕೊಳ್ಳುತ್ತವೆ. ರಾಂಡಂ ಪರೀಕ್ಷೆಗೆ ಒಳಪಟ್ಟ ನಂತರವೇ ಪ್ರಯಾಣಿಕರಿಗೆ ವಿಮಾನ ನಿಲ್ದಾಣದಿಂದ ಹೊರಹೋಗಲು ಅನುಮತಿ ನೀಡಲಾಗುತ್ತದೆ.

ಮುಂಬರುವ ದಿನಗಳಲ್ಲಿ ಚೀನಾದಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡುವ ಸಾಧ್ಯತೆ ಇದೆ. ಪ್ರತಿದಿನ 10 ಲಕ್ಷ ಜನರು ಸೋಂಕಿಗೆ ಒಳಗಾಗುತ್ತಾರೆ, ಸಾವಿನ ಸಂಖ್ಯೆ 5 ಸಾವಿರ ತಲುಪಬಹುದು ಎಂಬ ಮುನ್ಸೂಚನೆ ನೀಡಲಾಗಿದೆ.

ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ನೀಡಿದ ಅಪ್‌ಡೇಟ್ ಪ್ರಕಾರ, ದೇಶದಲ್ಲಿ 185 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಸಕ್ರಿಯ ಪ್ರಕರಣಗಳು 3,400ರಷ್ಟು ಇವೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..