1. Home
  2. National
  3. &
  4. International
  5. National
  6. News
  7. ಸಾಲದ ಸುಳಿಯಲ್ಲಿದ್ದವ್ರು ಏಕಾಏಕಿ ಲಕ್ಷಾಧಿಪತಿಗಳಾದ್ರು…!! – ಬ್ಯಾಂಕ್ ನೋಟಿಸ್ ಬಂದ ಕೆಲವೇ ಗಂಟೆಗಳಲ್ಲಿ ಹೊಡೆಯಿತು 70 ಲಕ್ಷ ರೂಪಾಯಿ ಲಾಟರಿ..!!

ಸಾಲದ ಸುಳಿಯಲ್ಲಿದ್ದವ್ರು ಏಕಾಏಕಿ ಲಕ್ಷಾಧಿಪತಿಗಳಾದ್ರು…!! – ಬ್ಯಾಂಕ್ ನೋಟಿಸ್ ಬಂದ ಕೆಲವೇ ಗಂಟೆಗಳಲ್ಲಿ ಹೊಡೆಯಿತು 70 ಲಕ್ಷ ರೂಪಾಯಿ ಲಾಟರಿ..!!

ಸಾಲದ ಸುಳಿಯಲ್ಲಿದ್ದವ್ರು ಏಕಾಏಕಿ ಲಕ್ಷಾಧಿಪತಿಗಳಾದ್ರು…!! – ಬ್ಯಾಂಕ್ ನೋಟಿಸ್ ಬಂದ ಕೆಲವೇ ಗಂಟೆಗಳಲ್ಲಿ ಹೊಡೆಯಿತು 70 ಲಕ್ಷ ರೂಪಾಯಿ ಲಾಟರಿ..!!
0

ನ್ಯೂಸ್ ಆ್ಯರೋ : ಅದೃಷ್ಟ ಅನ್ನೋದು ಯಾವಾಗ ಕೈ ಹಿಡಿಯುತ್ತೊ, ಬಿಡುತ್ತೊ ಅಂತ ಊಹೆ ಮಾಡೋದಕ್ಕೂ ಸಾಧ್ಯವಿಲ್ಲ. ಕೆಲವೊಮ್ಮೆ ನಾವು ಕನಸಲ್ಲೂ ಅಂದುಕೊಳ್ಳದ್ದು ಕಣ್ಣ ಮುಂದೆ ನಡೆದು ಹೋಗುತ್ತೆ. ಅಲ್ಲಾಗಿರುವುದು ಅದೇ. ಇನ್ನೇನೊ ಮನೆ ಮಾರಿ ಬೀದಿಗೆ ಬರುತ್ತೇವೆ ಅಂತ ಕಂಗಾಲಾಗಿದ್ದ ಕುಟುಂಬ ಕಣ್ಮುಚ್ಚಿ ಬಿಡೋದ್ರೊಳಗೆ ಲಕ್ಷಾಧಿಪತಿಗಳಾಗಿದ್ದಾರೆ.

ಹೌದು. ಕೇರಳದ ಮೀನು ಮಾರಾಟಗಾರರಾದ ಪೂಕುಂಞು ಬ್ಯಾಂಕ್ ಸಾಲ ತೀರಿಸಲಾಗದೆ ಒದ್ದಾಡುತ್ತಿದ್ದರು. ಸಾಲ ಮರುಪಾವತಿ ಮಾಡಲು ಸಾಧ್ಯವಾಗದೇ ಇದ್ದಾಗ ಬ್ಯಾಂಕ್‌ನಿಂದ ಜಪ್ತಿ ನೋಟಿಸ್ ಬಂದಿತ್ತು. ಬರೋಬ್ಬರಿ 9 ಲಕ್ಷ ಸಾಲ ತೀರಿಸಬೇಕಾಗಿತ್ತು. ಇಲ್ಲದಿದ್ದಲ್ಲಿ ಬ್ಯಾಂಕ್’ನವರು ಬಿಡುವುದಿಲ್ಲ. ಮನೆ-ಆಸ್ತಿ ಮಾರಾಟವೊಂದೇ ಉಳಿದಿದ್ದ ದಾರಿ. ಆದ್ರೆ ಪವಾಡವೇ ಎಂಬಂತೆ ಬ್ಯಾಂಕ್’ನಿಂದ ಜಪ್ತಿ ನೋಟಿಸ್ ಬಂದ ಕೆಲವೇ ಗಂಟೆಗಳಲ್ಲಿ ಲಾಟರಿ ಹೊಡೆದಿದೆ. ರಾಜ್ಯ ಸರ್ಕಾರದ ಬರೋಬ್ಬರಿ 70 ಲಕ್ಷ ರೂಪಾಯಿ ಅಕ್ಷಯ ಲಾಟರಿ ಗೆದ್ದಿದ್ದಾರೆ.

ಬ್ಯಾಂಕ್ ನೋಟಿಸ್ ಬಂದ ತಲೆ ಬಿಸಿಯಲ್ಲಿರುವಾಗಲೇ ಭಾಗ್ಯ ದೇವತೆ ಬಂದು ಅವರ ಮನೆಯ ಕದ ತಟ್ಟಿದ್ದಾಳೆ. ಬರೋಬ್ಬರಿ 70 ಲಕ್ಷ ರೂಪಾಯಿ ಲಾಟರಿ ಹೊಡೆದಿದೆ. ಅಕ್ಟೋಬರ್ 12 ರಂದು ಪೂಕುಂಞು ಅವರು ಮೀನು ಸಂಗ್ರಹಿಸಲು ತೆರಳುತ್ತಿದ್ದಾಗ ಲಾಟರಿ ಖರೀದಿಸಿದ್ದರಂತೆ. ಲಾಟರಿಯ ವಿಜೇತ ಸಂಖ್ಯೆಯನ್ನು ಘೋಷಿಸಿದಾಗ, ಮೊದಲ ಬಹುಮಾನ ಪೂಕುಂಞು ಹೆಸರಿಗೆ ಬಂದಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಪೂಕುಂಞು, ಮೊದಲು ಎಲ್ಲಾ ಸಾಲಗಳನ್ನು ತೀರಿಸುವುದಾಗಿ ಹೇಳಿದ್ದಾರೆ. ಉಳಿದ ಹಣದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಗುರಿ ಹೊಂದಿದ್ದಾರೆ. ಒಟ್ನಲ್ಲಿ ಲಾಟರಿ ಹೊಡೆದು ಪೂಕುಂಞು ಕುಟುಂಬದ ಅದೃಷ್ಟವೇ ಬದಲಾಗಿದೆ. ಸಾಲದ ಸುಳಿಯಲ್ಲಿ ಸಿಲುಕಿದ್ದವರು ಈಗ ಲಕ್ಷಾಧಿಪತಿಯಾಗಿದ್ದಾರೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..