1. Home
  2. National
  3. &
  4. International
  5. National
  6. News
  7. RSS ಮುಖ್ಯಸ್ಥ ಮೋಹನ್ ಭಾಗವತ್ ರಾಷ್ಟ್ರಪಿತ ಹೇಳಿಕೆ – ಇಮಾಮ್ ಮುಖ್ಯಸ್ಥನಿಗೆ ತಲೆಕಡಿದು ಕೊಲೆಗೈಯ್ಯುವ ಬೆದರಿಕೆ

RSS ಮುಖ್ಯಸ್ಥ ಮೋಹನ್ ಭಾಗವತ್ ರಾಷ್ಟ್ರಪಿತ ಹೇಳಿಕೆ – ಇಮಾಮ್ ಮುಖ್ಯಸ್ಥನಿಗೆ ತಲೆಕಡಿದು ಕೊಲೆಗೈಯ್ಯುವ ಬೆದರಿಕೆ

RSS ಮುಖ್ಯಸ್ಥ ಮೋಹನ್ ಭಾಗವತ್  ರಾಷ್ಟ್ರಪಿತ ಹೇಳಿಕೆ – ಇಮಾಮ್ ಮುಖ್ಯಸ್ಥನಿಗೆ ತಲೆಕಡಿದು ಕೊಲೆಗೈಯ್ಯುವ ಬೆದರಿಕೆ
0

ನ್ಯೂಸ್ ಆ್ಯರೋ‌ : ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ‘ರಾಷ್ಟ್ರಪಿತ’ ಎಂದು ಬಣ್ಣಿಸಿದ್ದ ಅಖಿಲ ಭಾರತ ಇಮಾಮ್ ಸಂಘಟನೆ ಮುಖ್ಯಸ್ಥ ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ ಅವರಿಗೆ ಜೀವ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಲಾಗಿದೆ.

ಸೆಪ್ಟೆಂಬರ್ 23 ರಂದು ಇಂಗ್ಲೆಂಡಿನಿಂದ ಫೋನ್ ಕರೆ ಬಂದಿದೆ. ಕರೆಯಲ್ಲಿ ತಲೆ ಕಡಿದು ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಕುರಿತು ತಿಲಕ್ ಮಾರ್ಗ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. “ನಾನು ನನ್ನ ಮಾತನ್ನು ಹಿಂತೆಗೆದುಕೊಳ್ಳುವುದಿಲ್ಲ. ನಾನು ಮತಾಂಧರಿಗೆ ಹೆದರುವುದಿಲ್ಲ” ಎಂದು ಇಲ್ಯಾಸಿ ಇದೇ ವೇಳೆ ಹೇಳಿದ್ದಾರೆ.

ಯಾರೇ ಬೆದರಿಕೆ ಹಾಕಿದರೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಮೋಹನ್ ಭಾಗವತ್ ಅವರನ್ನು ‘ರಾಷ್ಟ್ರಪಿತ’ ಮತ್ತು ‘ರಾಷ್ಟ್ರ ಋಷಿ’ ಎಂದು ಬಣ್ಣಿಸಿದ ನನ್ನ ಮಾತನ್ನು ನಾನು ಹಿಂದಕ್ಕೆ ಪಡೆದುಕೊಳ್ಳುವುದಿಲ್ಲ. ಇದರ ಪರಿಣಾಮ ಏನೇ ಇದ್ದರೂ ಎದುರಿಸುತ್ತೇನೆ ಎಂದಿದ್ದಾರೆ. ಬೆದರಿಕೆಯ ಕುರಿತು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಮೇಲಿನ ನಿಷೇಧದ ಕುರಿತು ಇಲ್ಯಾಸಿ ಸ್ವಾಗತಿಸಿದ್ದಾರೆ.

ಇನ್ನೂ ಈ ಹಿಂದೆ ದೆಹಲಿಯಲ್ಲಿ ಡಾ.ಇಲ್ಯಾಸಿ ಸೇರಿದಂತೆ ಹಲವು ಮುಸ್ಲಿಂ ಬುದ್ಧಿಜೀವಿಗಳನ್ನು ಆರ್​ಎಸ್​ಎಸ್​ ಮುಖ್ಯಸ್ಥರು ಭೇಟಿ ಮಾಡಿದ್ದರು. ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ಡಾ.ಇಲ್ಯಾಸಿ ಅವರು, “ನನ್ನ ಆಹ್ವಾನದ ಮೇರೆಗೆ ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್ ಅವರು ಭೇಟಿ ಮಾಡಿದ್ದಾರೆ. ಅವರು ರಾಷ್ಟ್ರಪಿತ ಮತ್ತು ರಾಷ್ಟ್ರ ಋಷಿ ಇದ್ದಂತೆ. ಅವರ ಭೇಟಿಯಿಂದ ಉತ್ತಮ ಸಂದೇಶ ಹೊರ ಬಂದಿದೆ” ಎಂದು ಮೋಹನ್ ಭಾಗವತ್ ರ ಗುಣಗಾನ ಮಾಡಿದ್ದರು.

“ನಾವು ದೇವರನ್ನು ಆರಾಧಿಸುವ ವಿಧಾನಗಳು ವಿಭಿನ್ನವಾಗಿರಬಹುದು. ಆದರೆ ಧರ್ಮವೆಂದರೆ ಮಾನವೀಯತೆ. ಅದರ ನಂತರ ಎಲ್ಲವೂ. ಧರ್ಮಗಳು ಯಾವುದೇ ಇದ್ದರೂ ದೇಶ ಮೊದಲು ಎಂಬುದು ನಮ್ಮೆಲ್ಲರ ನಂಬಿಕೆ” ಎಂದು ಉಮರ್ ಅಹ್ಮದ್ ಇಲ್ಯಾಸಿ ಅವರು ಹೇಳಿದ್ದರು.

ರಾಷ್ಟ್ರೀಯ ಸ್ವಯಂಸೇವಕ ಸಂಘ ಸರಸಂಘಚಾಲಕರಾದ ಮೋಹನ್​ ಭಾಗವತ್​ ಅವರು ಈ ಹಿಂದೆ ಅವರು ಕೋಮು ಸೌಹಾರ್ದತೆ ಗಟ್ಟಿಗೊಳಿಸಲು ಮಧ್ಯ ದೆಹಲಿಯ ಕಸ್ತೂರ್ಬಾ ಗಾಂಧಿ ಮಾರ್ಗದಲ್ಲಿರುವ ಮಸೀದಿಯಲ್ಲಿ ಡಾ.ಉಮರ್ ಅಹ್ಮದ್ ಇಲ್ಯಾಸಿ ಸೇರಿದಂತೆ ಧಾರ್ಮಿಕ ಮುಖಂಡರನ್ನು ಭೇಟಿ ಮಾಡಿದ್ದರು. ಬಳಿಕ ಉತ್ತರ ದೆಹಲಿಯ ಆಜಾದ್‌ಪುರದಲ್ಲಿರುವ ಮದರಸಾ ತಜ್ವೀದುಲ್ ಕುರಾನ್‌ಗೆ ಭೇಟಿ ನೀಡಿದ್ದರು.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..