1. Home
  2. National
  3. &
  4. International
  5. National
  6. News
  7. ಮೋರ್ಬಿ ತೂಗುಸೇತುವೆ ದುರಂತದ ಹಿಂದೆ ಭ್ರಷ್ಟಾಚಾರದ ವಾಸನೆ – ದುರಸ್ತಿಗೆ 2 ಕೋಟಿಗೆ ಗುತ್ತಿಗೆ, ಬಳಕೆಯಾಗಿದ್ದು ಕೇವಲ 12 ಲಕ್ಷ…!!

ಮೋರ್ಬಿ ತೂಗುಸೇತುವೆ ದುರಂತದ ಹಿಂದೆ ಭ್ರಷ್ಟಾಚಾರದ ವಾಸನೆ – ದುರಸ್ತಿಗೆ 2 ಕೋಟಿಗೆ ಗುತ್ತಿಗೆ, ಬಳಕೆಯಾಗಿದ್ದು ಕೇವಲ 12 ಲಕ್ಷ…!!

ಮೋರ್ಬಿ ತೂಗುಸೇತುವೆ ದುರಂತದ ಹಿಂದೆ ಭ್ರಷ್ಟಾಚಾರದ ವಾಸನೆ – ದುರಸ್ತಿಗೆ 2 ಕೋಟಿಗೆ ಗುತ್ತಿಗೆ, ಬಳಕೆಯಾಗಿದ್ದು ಕೇವಲ 12 ಲಕ್ಷ…!!
0

ನ್ಯೂಸ್ ಆ್ಯರೋ : 135ಕ್ಕೂ ಹೆಚ್ಚು ಜನರನ್ನು ಬಲಿ ಪಡೆದು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ಗುಜರಾತ್‌ನ ಮೋರ್ಬಿ ತೂಗು ಸೇತುವೆಯ ದುರಂತಕ್ಕೆ ಅಜಂತಾ ಒರೆವಾ ಕಂಪೆನಿಯ ಭ್ರಷ್ಟಾಚಾರವೇ ಕಾರಣ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಪ್ರಾಥಮಿಕ ತನಿಖೆಯಲ್ಲಿ ಆಘಾತಕಾರಿ ವಿಷಯಗಳು ತಿಳಿದುಬಂದಿದ್ದು, ಇದೀಗ ಓರೆವಾ ಕಂಪೆನಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ. ‌

ಕಳೆದ ಮಾರ್ಚ್‌ ತಿಂಗಳಿನಲ್ಲಿ ಸೇತುವೆಯ ದುರಸ್ತಿ ಕಾರ್ಯಕ್ಕೆ ಓರೆವಾ ಕಂಪೆನಿಯ ಅಧ್ಯಕ್ಷ ಜಯಸುಖ್ ಪಟೇಲ್ ಅವರಿಗೆ 15 ವರ್ಷಕ್ಕೆ ನೀಡಲಾಗಿತ್ತು. ಆದರೆ ಓರೆವಾ ಬೇರೊಂದು ಕಂಪೆನಿಗೆ ಉಪ ಗುತ್ತಿಗೆ ನೀಡಿತ್ತು. ಅದಕ್ಕಾಗಿ ಮೋರ್ಬಿ ನಗರ ಪಾಲಿಕೆಯು ತೂಗು ಸೇತುವೆ ದುರಸ್ಥಿಗೆ ₹2ಕೋಟಿಯನ್ನು ಮಂಜೂರು ಮಾಡಿದೆ. 7 ತಿಂಗಳ ಅವಧಿಯಲ್ಲಿ ಕೇವಲ ₹12ಲಕ್ಷವನ್ನು ವಿನಿಯೋಗಿಸಿ ಸೇತುವೆಯ ದುರಸ್ಥಿ ಕಾರ್ಯವನ್ನು ನಾಮಾಕಾವಸ್ಥೆಗೆ ಮುಗಿಸಿ ಬಿಟ್ಟಿದ್ದಾರೆ. ಇದೀಗ ಪ್ರಾಥಮಿಕ ತನಿಖೆಯಲ್ಲಿ ಕಳಪೆ ಸಾಮರ್ಥ್ಯ ಮತ್ತು ಕಳಪೆ ಗುಣಮಟ್ಟವೇ ಅವಘಡಕ್ಕೆ ಕಾರಣ ಎನ್ನಲಾಗಿದೆ.

ಉಪ ಗುತ್ತಿಗೆ ಪಡೆದಿದ್ದ ದೇವಪ್ರಕಾಶ್ ಸೊಲ್ಯುಷನ್ಸ್ ಕಂಪೆನಿಯಿಂದ ದುರಸ್ತಿ ಕಾರ್ಯಕ್ಕೆ ವ್ಯಯಿಸಿದ್ದ ಮೊತ್ತದ ದಾಖಲೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆಯಲ್ಲಿ ಕೇವಲ 12 ಲಕ್ಷ ರೂ. ಮೊತ್ತವನ್ನಷ್ಟೇ ಖರ್ಚು ಮಾಡಿರುವುದು ತಿಳಿದುಬಂದಿದೆ.

ದೀಪಾವಳಿ ಹಾಗೂ ಹೊಸ ವರ್ಷಕ್ಕೆ ಹೆಚ್ಚಿನ ಪ್ರವಾಸಿಗರು ಸೇರುತ್ತಾರೆಂದು ತರಾತುರಿಯಲ್ಲಿ ತೂಗು ಸೇತುವೆಯನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತ ಮಾಡಲಾಗಿತ್ತು. ಆದರೆ ಅತಿಯಾದ ಜನ ದಟ್ಟಣೆಯಿಂದಾಗಿ ಸೇತುವೆ ಕುಸಿದು ಬಿದ್ದಿತ್ತು. ಈ ದೊಡ್ಡ ಅವಘಡಕ್ಕೆ ಅಜಂತಾ ಒರೆವಾ ಕಂಪೆನಿಯೇ ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..