1. Home
  2. National
  3. &
  4. International
  5. National
  6. News
  7. ಹೊಸದಾಗಿ ಖರೀದಿಸಿದ ಹೆಲಿಕಾಪ್ಟರ್ ಅನ್ನು ದೇವಾಲಯಕ್ಕೆ ತಂದು ಪೂಜೆ ಮಾಡಿಸಿದ ಉದ್ಯಮಿ – ಪೂಜಾ ಸಮಯದ ವಿಡಿಯೋ ವೈರಲ್…

ಹೊಸದಾಗಿ ಖರೀದಿಸಿದ ಹೆಲಿಕಾಪ್ಟರ್ ಅನ್ನು ದೇವಾಲಯಕ್ಕೆ ತಂದು ಪೂಜೆ ಮಾಡಿಸಿದ ಉದ್ಯಮಿ – ಪೂಜಾ ಸಮಯದ ವಿಡಿಯೋ ವೈರಲ್…

ಹೊಸದಾಗಿ ಖರೀದಿಸಿದ ಹೆಲಿಕಾಪ್ಟರ್ ಅನ್ನು ದೇವಾಲಯಕ್ಕೆ ತಂದು ಪೂಜೆ ಮಾಡಿಸಿದ ಉದ್ಯಮಿ – ಪೂಜಾ ಸಮಯದ ವಿಡಿಯೋ ವೈರಲ್…
0

ನ್ಯೂಸ್ ಆ್ಯರೋ : ತೆಲಂಗಾಣದ ಉದ್ಯಮಿಯೊಬ್ಬರು ತಾವು ಖರೀದಿಸಿದ ಹೆಲಿಕಾಪ್ಟರ್‌ ಅನ್ನು ದೇವಸ್ಥಾನಕ್ಕೆ ತಂದು ಪೂಜೆ ಮಾಡಿರುವ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಉದ್ಯಮಿ ಬೋಯಿನಪಲ್ಲಿ ಶ್ರೀನಿವಾಸ ರಾವ್ ಅವರ ಮನೆ

ಖರೀದಿಸಿದ ಹೊಸ ವಸ್ತು, ಯಂತ್ರ ಅಥವಾ ವಾಹನಕ್ಕೆ ಪೂಜೆ ಸಲ್ಲಿಸುವುದು ಭಾರತೀಯ ಪದ್ಧತಿ. ಯಾವುದೇ ಅಡ್ಡಿ, ಆತಂಕ ಹಾಗೂ ಅಪಾಯ ಬರದಿರಲೆಂದು ಹೊಸ ವಾಹನಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ನಮ್ಮ ದೇಶದಲ್ಲಿ ದ್ವಿಚಕ್ರ ವಾಹನ, ತ್ರಿಚಕ್ರ ವಾಹನ, ಕಾರು, ಬಸ್​ ಹಾಗೂ ಲಾರಿಗಳಿಗೆ ಪೂಜೆ ಸಲ್ಲಿಸುವುದನ್ನು ಸಾಮಾನ್ಯವಾಗಿ ನೋಡಿದ್ದೇವೆ. ಆದರೆ, ಹೆಲಿಕಾಪ್ಟರ್​​ಗೆ ಪೂಜೆ ಇಲ್ಲಿಸಿ ತೆಲಂಗಾಣದ ಉದ್ಯಮಿ ಬೋಯಿನಪಲ್ಲಿ ಶ್ರೀನಿವಾಸ ರಾವ್ ಅವರು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಹೆಲಿಕಾಪ್ಟರ್​ಗೆ ವಾಹನ ಪೂಜೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರ ಹುಬ್ಬೇರಿಸಿದೆ.

ಶ್ರೀನಿವಾಸ್ ರಾವ್ ಅವರ ಹಿನ್ನೆಲೆ

ಇವರು ಪ್ರತಿಮಾ ಗ್ರೂಪ್​ ಕಂಪನಿಯ ಮಾಲೀಕರು. ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಮೂಲಸೌಕರ್ಯ ಕಂಪನಿ ಇದಾಗಿದೆ. ಹೈದರಾಬಾದ್​ನಿಂದ ಸುಮಾರು 100 ಕಿ. ಮೀ ದೂರದ ಯಾದಾದ್ರಿಯಲ್ಲಿರುವ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಏರ್​ಬಸ್​ ಎಸಿಎಚ್​-135 ನಂಬರ್​ನ ಹೊಸ ಹೆಲಿಕಾಪ್ಟರ್ ಮೂಲಕ ತೆರಳಿದ ಶ್ರೀನಿವಾಸ್​ ರಾವ್​, ತಮ್ಮ ಕುಟುಂಬಸ್ಥರ ಸಮ್ಮುಖದಲ್ಲಿ ವಾಹನ ಪೂಜೆ ಮಾಡಿಸಿದ್ದಾರೆ.

ದೇವಸ್ಥಾನದ ಮೂವರು ಅರ್ಚಕರು ಸೇರಿ ಹೆಲಿಕಾಪ್ಟರ್​ಗೆ ಪೂಜೆ ಸಲ್ಲಿಸಿದ್ದಾರೆ. ಈ ಹೆಲಿಕಾಪ್ಟರ್​​ ಬರೋಬ್ಬರಿ 5.7 ಮಿಲಿಯನ್​ ಡಾಲರ್​ ಮೌಲ್ಯದ್ದಾಗಿದ್ದು, ಪೂಜೆಯ ವಿಡಿಯೋ ವೈರಲ್ ಆಗಿದೆ.