1. Home
  2. National
  3. &
  4. International
  5. National
  6. News
  7. ವಿಶ್ವದಲ್ಲೇ ಅತೀ ಎತ್ತರದ ಶಿವನ ಪ್ರತಿಮೆ ಇಂದು ಲೋಕಾರ್ಪಣೆ – ಹೇಗಿದೆ ಗೊತ್ತಾ ಈ ಬಲಿಷ್ಠ ಪ್ರತಿಮೆ?

ವಿಶ್ವದಲ್ಲೇ ಅತೀ ಎತ್ತರದ ಶಿವನ ಪ್ರತಿಮೆ ಇಂದು ಲೋಕಾರ್ಪಣೆ – ಹೇಗಿದೆ ಗೊತ್ತಾ ಈ ಬಲಿಷ್ಠ ಪ್ರತಿಮೆ?

ವಿಶ್ವದಲ್ಲೇ ಅತೀ ಎತ್ತರದ ಶಿವನ ಪ್ರತಿಮೆ ಇಂದು ಲೋಕಾರ್ಪಣೆ – ಹೇಗಿದೆ ಗೊತ್ತಾ ಈ ಬಲಿಷ್ಠ ಪ್ರತಿಮೆ?
0

ನ್ಯೂಸ್ ಆ್ಯರೋ‌ : ವಿಶ್ವದಲ್ಲೇ ಅತೀ ಎತ್ತರದ ಶಿವನ ಪ್ರತಿಮೆ “ವಿಶ್ವಾಸ ಸ್ವರೂಪಂ’ ಇಂದು ಲೋಕಾರ್ಪಣೆಗೊಳ್ಳಲಿದೆ. ರಾಜಸ್ಥಾನದ ರಾಜಸ್‌ಮಂಡ್‌ ಜಿಲ್ಲೆಯ ನಾಥ್‌ದ್ವಾರ ಪಟ್ಟಣದಲ್ಲಿ ಈ ಪ್ರತಿಮೆ ತಲೆ ಎತ್ತಿದೆ. ಆಧ್ಯಾತ್ಮಿಕ ನಾಯಕ ಮೊರಾರಿ ಬಾಪು ಅವರು ಈ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದು, ಸಿಎಂ ಅಶೋಕ್‌ ಗೆಹ್ಲೋಟ್‌, ಸ್ಪೀಕರ್‌ ಸಿ.ಪಿ. ಜೋಷಿ ಮತ್ತಿತರರು ಭಾಗಿಯಾಗಲಿದ್ದಾರೆ.

ಪ್ರತಿಮೆ ಅನಾವರಣದ ಹಿನ್ನೆಲೆಯಲ್ಲಿ ಅ.29ರಿಂದ ನ.6ರವರೆಗೆ 9 ದಿನಗಳ ಕಾಲ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ’ ಎಂದು ತತ್‌ ಪದಮ್‌ ಸಂಸ್ಥಾನ ಟ್ರಸ್ಟಿ ಮತ್ತು ಮೀರಜ್‌ ಗ್ರೂಪ್ ಮುಖ್ಯಸ್ಥ ಮದನ್‌ ಪಾಲಿವಾಲ್‌ ತಿಳಿಸಿದ್ದಾರೆ.

ಧ್ಯಾನಸ್ಥ ರೂಪದಲ್ಲಿರುವ ಪ್ರತಿಮೆಯು ಉದಯ್‌ಪುರದಿಂದ 45 ಕಿಲೋಮೀಟರ್‌ ದೂರದಲ್ಲಿದ್ದು, ತತ್‌ ಪದಮ್‌ ಸಂಸ್ಥಾನ ಇದನ್ನು ನಿರ್ಮಿಸಿದೆ. ಈ ಪ್ರತಿಮೆಯು 20 ಕಿ.ಮೀ ದೂರದವರೆಗೆ ಗೋಚರಿಸುತ್ತದೆ. ಇದರ ನಿರ್ಮಾಣಕ್ಕೆ ಮೂರು ಸಾವಿರ ಟನ್‌ ಉಕ್ಕು ಮತ್ತು ಕಬ್ಬಿಣ, 2.5 ಲಕ್ಷ ಕ್ಯೂಬಿಕ್ ಟನ್‌ ಕಾಂಕ್ರಿಟ್‌ ಮತ್ತು ಮರಳು ಬಳಕೆಯಾಗಿದೆ.

ಈ ಯೋಜನೆಗೆ 2012 ಆಗಸ್ಟ್‌ನಲ್ಲಿ ಶಿಲಾನ್ಯಾಸ ನೆರವೇರಿಸಲಾಗಿತ್ತು. 250 ವರ್ಷ ಬಾಳಿಕೆ ಬರು ವಂತೆ ಮತ್ತು ಗಂಟೆಗೆ 250 ಕಿ.ಮೀ. ವೇಗದಲ್ಲಿ ಗಾಳಿ ಬೀಸಿದರೂ ತಡೆಯು ವಂಥ ಸಾಮರ್ಥ್ಯವಿರುವಂತೆ ಪ್ರತಿಮೆ ನಿರ್ಮಾಣಗೊಂಡಿದೆ.

ಪ್ರತಿಮೆಯ ಎತ್ತರ- 369 ಅಡಿ
ಪ್ರತಿಮೆಯ ಒಟ್ಟು ತೂಕ – 30,000 ಟನ್‌
ಬಳಕೆಯಾದ ಉಕ್ಕು, ಕಬ್ಬಿಣ – 3000 ಟನ್‌
ಬಳಸಲಾದ ಕಾಂಕ್ರೀಟ್‌- 2.5 ಲಕ್ಷ ಕ್ಯೂಬಿಕ್‌ ಟನ್‌
ಎಷ್ಟು ದೂರದಿಂದ ಪ್ರತಿಮೆ ಗೋಚರಿಸುತ್ತದೆ?- 20 ಕಿ.ಮೀ.
ಕಾಮಗಾರಿಗೆ ತಗುಲಿದ
ಅವಧಿ- 10 ವರ್ಷ
ಎಷ್ಟು ವರ್ಷ ಬಾಳಿಕೆ?- 250

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..