1. Home
  2. Political
  3. News
  4. ಕೆ.ಎಲ್. ರಿಜಿಸ್ಟ್ರೇಶನ್! ಸ್ಕಾರ್ಪಿಯೋ ಕಾರು! – ಸಿಲ್ಲಿ ಓವರ್ ಟೇಕ್ ಗಲಾಟೆ ಪ್ರಚಾರಪ್ರಿಯ ಶಾಸಕರಿಗೆ ಕೊಡ್ತು ಪುಕ್ಕಟೆ ಮೈಲೇಜ್..!!

ಕೆ.ಎಲ್. ರಿಜಿಸ್ಟ್ರೇಶನ್! ಸ್ಕಾರ್ಪಿಯೋ ಕಾರು! – ಸಿಲ್ಲಿ ಓವರ್ ಟೇಕ್ ಗಲಾಟೆ ಪ್ರಚಾರಪ್ರಿಯ ಶಾಸಕರಿಗೆ ಕೊಡ್ತು ಪುಕ್ಕಟೆ ಮೈಲೇಜ್..!!

ಕೆ.ಎಲ್. ರಿಜಿಸ್ಟ್ರೇಶನ್! ಸ್ಕಾರ್ಪಿಯೋ ಕಾರು! – ಸಿಲ್ಲಿ ಓವರ್ ಟೇಕ್ ಗಲಾಟೆ ಪ್ರಚಾರಪ್ರಿಯ ಶಾಸಕರಿಗೆ ಕೊಡ್ತು ಪುಕ್ಕಟೆ ಮೈಲೇಜ್..!!
0

ನ್ಯೂಸ್ ಆ್ಯರೋ : ಕರಾವಳಿ ಭಾಗದಲ್ಲಿ ಸದ್ಯದ ಮಟ್ಟಿಗೆ ‘ಮೈಲೇಜ್’ ಇರುವ ಶಾಸಕರು ಯಾರೆಂದು ಕೇಳಿದ್ರೆ ಮೊದಲಿಗೆ ಬರುವ ಹೆಸರೇ ಹರೀಶ್ ಪೂಂಜಾ ಅವರದ್ದು. ಇದಕ್ಕೆ ಕಾರಣ ಅವರ ಡೈನಾಮಿಕ್ ಶೈಲಿಯ ರಾಜಕಾರಣ. ಕರಾವಳಿಯಲ್ಲಿನ ಬಿಜೆಪಿ ಶಾಸಕರು ಇಲ್ಲಿನ ಸಂಘದ ಪ್ರಮುಖರ ನೆರಳಿನಲ್ಲೇ ತಮ್ಮ ಅಧಿಕಾರವನ್ನು ಚಲಾಯಿಸಬೇಕೆಂಬ ವಿಚಾರ ಗುಟ್ಟಾಗಿ ಏನೂ ಉಳಿದಿಲ್ಲ. ಆದರೆ ಇದಕ್ಕೆ ಹರೀಶ್ ಪೂಂಜ ಅಪವಾದ. ಅವರು ತಮ್ಮ ಕ್ಷೇತ್ರದಲ್ಲಿ ತಮ್ಮದೇ ಆದ ಸ್ಟ್ರಾಂಗ್ ಕೆಡರ್ ಬೇಸ್ ಹೊಂದಿದ್ದಾರೆ, ತಮ್ಮದೇ ಆದ ಐಟಿ ಸೆಲ್ ಇಟ್ಕೊಂಡಿದ್ದಾರೆ. ತನ್ನ ಕ್ಷೇತ್ರದಲ್ಲಿ ಯಾವುದೇ ಯೋಜನೆ ಅನುಷ್ಠಾನಗೊಳಿಸುವ ಸಂದರ್ಭದಲ್ಲಿ ಅದಕ್ಕೆಷ್ಟು ಮತ್ತು ಹೇಗೆ ಪ್ರಚಾರ ಕೊಡಬೇಕೆಂಬ ಕಲೆಯೂ ಪೂಂಜರಿಗೆ ಚೆನ್ನಾಗಿ ಸಿದ್ದಿಸಿದೆ.

ಒಟ್ಟಿನಲ್ಲಿ ಯಂಗ್ ಶಾಸಕರಾಗಿರುವ ಪೂಂಜಾರಿಗೆ ತನ್ನ ಮುಂದೆ ಲಾಂಗ್ ಪೊಲಿಟಿಕಲ್ ಕೆರಿಯರ್ ಇದೆ ಎಂಬ ಸತ್ಯ ಅರಿವಾಗಿದೆ ಮತ್ತು ತನ್ನ ಇಮೇಜ್ ಹೆಚ್ಚಿಸಿಕೊಳ್ಳಲು ಏನೆಲ್ಲಾ ಮಾಡಬೇಕೋ ಅದನ್ನೆಲ್ಲಾ ತುಂಬಾ ಯೋಜಿತ ರೀತಿಯಲ್ಲೇ ಅವರು ಮಾಡ್ತಾ ಇದ್ದಾರೆ. ಅದಕ್ಕೆ ಅವರು ಒಂದು ಕಡೆ ಧರ್ಮಾಧಿಕಾರಿಗಳ ಕೃಪಾಶೀರ್ವಾದ, ಕಲ್ಲಡ್ಕ ಭಟ್ಟರ ಪೂರ್ಣ ಬೆಂಬಲ ಮತ್ತು ಈ ಭಾಗದ ದೊಡ್ಡ ಉದ್ಯಮಿಯೊಬ್ಬರ ಧನ ಬೆಂಬಲ ಸಹಿತ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಕೆಲವು ನಾಯಕರ ಕೃಪಾಕಟಾಕ್ಷವನ್ನೂ ಎಷ್ಟುಬೇಕೋ ಅಷ್ಟು ಸಂಪಾದಿಸಿಕೊಂಡಿದ್ದಾರೆ! ಹಾಗಾಗಿ ತನ್ನ ಕ್ಷೇತ್ರದಲ್ಲಿ 40% ಕಮಿಷನ್ ಆರೋಪ ಕೇಳಿಬಂದ ಸಂದರ್ಭದಲ್ಲೂ ಆ ಆರೋಪವನ್ನು ಸೈಡ್ ಲೈನ್ ಮಾಡುವಲ್ಲಿ ಪೂಂಜ ಯಶಸ್ವಿಯಾಗಿದ್ದರು.

ಹುಡುಕುತ್ತಿದ್ದ ಬಳ್ಳಿ ಕಾಲಿಗೆ ತೊಡರಿದಂತಾಯ್ತು – ಕಾರ್ ಚೇಸಿಂಗ್ ಪ್ರಕರಣ!

ಇಂತಿಪ್ಪ ಶಾಸಕ ಹರೀಶ್ ಪೂಂಜ ಅವರಿಗೆ ಅ.13ರ ರಾತ್ರಿ ನಡೆದ ಒಂದು ಘಟನೆ ಅವರ ಪೊಲಿಟಿಕಲ್ ಇಮೇಜಿಗೆ ಇನ್ನಷ್ಟು ಮೈಲೇಜ್ ಸಿಗುವಂತೆ ಮಾಡುತ್ತದೆ ಎಂದು ಸ್ವತಃ ಶಾಸಕ ಪೂಂಜ ಅವರಿಗೂ ತಿಳಿದಿರಲಿಕ್ಕಿಲ್ಲ! ಹೌದು, ಬೆಂಗಳೂರಿನಿಂದ ಮಂಗಳೂರಿಗೆ ಬಂದು ಅಲ್ಲಿಂದ ಬೆಳ್ತಂಗಡಿಗೆ ನಿನ್ನೆ ರಾತ್ರಿ ವಾಪಾಸಾಗುತ್ತಿದ್ದ ವೇಳೆ ಶಾಸಕರ ಕಾರನ್ನು ಕೇರಳ ನೊಂದಣಿಯ ಸ್ಕಾರ್ಪಿಯೋ ಒಂದು ಹಿಂಬಾಲಿಸಿ ಮುಸ್ಲಿಂ ಬಾಹುಳ್ಯವುಳ್ಳ ಫರಂಗಿಪೇಟೆ ಸಮೀಪ ಅವರ ಕಾರನ್ನು ಅಡ್ಡಗಟ್ಟಿ ಶಾಸಕರ ಕಾರು ಚಾಲಕನಿಗೆ ಆವಾಝ್ ಹಾಕಿದ ಘಟನೆಯೊಂದು ರಾತ್ರಿ ಬೆಳಗಾಗುವುದರೊಳಗೆ ದಕ್ಷಿಣ ಕನ್ನಡದಾದ್ಯಂತ ಸಂಚಲನ ಮೂಡಿಸಿತ್ತು!

ಹಿಂದು ಫೈರ್ ಬ್ರ್ಯಾಂಡ್ ಲೀಡರ್ ಇಮೇಜ್!

ಇತ್ತೀಚಿನ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಸಂದರ್ಭದಲ್ಲಿ ಕರಾವಳಿ ಭಾಗದ ಬಹುತೇಕ ಎಲ್ಲಾ ಕಮಲ ನಾಯಕರು ಇಲ್ಲಿನ ಕಾರ್ಯಕರ್ತರ ಆಕ್ರೋಶಕ್ಕೆ ಒಳಗಾಗಿದ್ದರು. ಆದರೆ ಶಾಸಕ ಪೂಂಜ ಅವರೂ ಅಲ್ಲೂ ‘ಹಿಂದು ಲೀಡರ್’ ಇಮೇಜನ್ನು ಹೆಚ್ಚಿಸಿಕೊಂಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಒಂದು ವಿಡಿಯೋ ಸಹ ಆ ಸಂದರ್ಭದಲ್ಲಿ ವೈರಲ್ ಆಗಿತ್ತು. ಹೀಗೆ ಅವಕಾಶ ಸಿಕ್ಕಾಗಲೆಲ್ಲಾ ಹರೀಶ್ ಪೂಂಜ ಅವರು ಹಿಂದು ನಾಯಕ ಎಂಬಂತೆ ತನ್ನನ್ನು ಬಿಂಬಿಸಿಕೊಳ್ಳುವ ಹಲವು ಹೇಳಿಕೆಗಳನ್ನು ನೀಡಿದ್ದರು ಮತ್ತು ಒಂದು ಕೋಮಿನ ವಿರುದ್ಧ ಅವಕಾಶ ಸಿಕ್ಕಾಗಲೆಲ್ಲಾ ‘ಮಾತಿನ ಚಾಟಿ’ ಬೀಸ್ತಾ ಇದ್ರು.

ಹೀಗೆ ಶಾಸಕ ಪೂಂಜ ಅವರು ಇಲ್ಲಿ ಒಂದು ಕೋಮಿನ ಸಿಟ್ಟಿಗೆ ಗುರಿಯಾಗಿದ್ದಾರೆ ಮತ್ತು ಅವರಿಗೆ ಮತಾಂಧ ಶಕ್ತಿಗಳಿಂದ ಅಪಾಯ ಎದುರಾಗಬಹುದೆಂಬ ಮಾತುಗಳೂ ಸಹ ಪೂಂಜ ಅಭಿಮಾನಿ ವಲಯದಲ್ಲಿ ಕೇಳಿಬರ್ತಿತ್ತು. ಅದಕ್ಕೆ ಪೂರಕವಾಗಿ ಅ.13ರ ಗುರುವಾರ ರಾತ್ರಿ ನಡೆದ ‘ಹೈವೇಯಲ್ಲಿ ಓವರ್ ಟೇಕ್ ಗಲಾಟೆ ಪೂರಕವಾಗಿಯೇ ಇತ್ತು. ಶಾಸಕರು ತಮ್ಮ ಸ್ನೇಹಿತರ ಇನ್ನೊಂದು ಕಾರಿನಲ್ಲಿ ಬರುತ್ತಿದ್ದ ಕಾರಣ ಅಪಾಯದಿಂದ ಪಾರಾದರು ಎಂಬ ಮಾತುಗಳೂ ಆರಂಭದಲ್ಲಿ ಕೇಳಿಬಂತು.

ಈ ಘಟನೆಯ ಅಸಲಿಯತ್ತು ಮತ್ತು ಶಾಸಕ ಪೂಂಜರ ‘ಇಮೇಜ್ ಬಿಲ್ಡಿಂಗ್’ ಪ್ರಯತ್ನ!

ಆದ್ರೆ ಈ ಘಟನೆಯನ್ನು ದಕ್ಷಿಣ ಕನ್ನಡ ಪೊಲೀಸರು ಗಂಭೀರವಾಗಿಯೇ ಪರಿಗಣಿಸಿದ್ರು ಮತ್ತು ಘಟನೆ ನಡೆದ 24 ಗಂಟೆಗಳ ಒಳಗೆ ಆರೋಪಿಯನ್ನು ಬಂಧಿಸುವ ಮೂಲಕ ಎಲ್ಲಾ ಗೊಂದಲಗಳಿಗೆ ಒಂದು ಹಂತದ ತೆರೆ ಎಳೆದಿದ್ದಾರೆ. ಅದರಂತೆ ಮಂಗಳೂರಿನ ಫಳ್ನೀರ್ ನಿವಾಸಿ ರಿಯಾಜ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ಆತ ಚಲಾಯಿಸುತ್ತಿದ್ದ ಕೆ.ಎಲ್. ನೋಂದಣಿಯ ಸ್ಕಾರ್ಪಿಯೋವನ್ನು ಸಹ ವಶಕ್ಕೆ ಪಡೆದುಕೊಂಡಿದ್ದಾರೆ.

ಆದರೆ, ದ.ಕ. ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಷ್ ಸೋನಾವಣೆ ನೀಡಿರುವ ಮಾಹಿತಿಯಂತೆ ಇದೊಂದು ಜಸ್ಟ್ ‘ಓವರ್ ಟೇಕ್’ ಗಲಾಟೆ ಎಂದು ಹೇಳಿಕೆ ನೀಡಿದ್ದಾರೆ ಮತ್ತು ವಶಪಡಿಸಿಕೊಂಡ ಗಾಡಿಯಲ್ಲಿ ಯಾವುದೇ ಮಾರಕಾಸ್ತ್ರಗಳೂ ಇರಲಿಲ್ಲ ಮಾತ್ರವಲ್ಲದೇ ಆರೋಪಿಗೆ ಯಾವುದೇ ಕ್ರಿಮಿನಲ್ ಹಿನ್ನಲೆ ಸಹ ಇಲ್ಲ ಎಂಬ ಮಾಹಿತಿಯನ್ನು ಸ್ವತಃ ಎಸ್ಪಿಯವರೇ ಸುದ್ದಿಗೋಷ್ಠಿಯಲ್ಲಿ ಖಚಿತಪಡಿಸಿದ್ದಾರೆ.

ಎಲೆಕ್ಷನ್ ಸಂದರ್ಭದಲ್ಲಿ ‘ಮೈಲೇಜ್’ಗೆ ಪ್ರಯತ್ನಿಸಿದರೇ ಶಾಸಕ ಪೂಂಜ!?

ಸಾಮಾಜಿಕ ಜಾಲತಾಣದ ಕೆಲ ಕಾಮೆಂಟ್’ಗಳು
ಸಾಮಾಜಿಕ ಜಾಲತಾಣದ ಕೆಲ ಕಾಮೆಂಟ್’ಗಳು
ಸಾಮಾಜಿಕ ಜಾಲತಾಣದ ಕೆಲ ಕಾಮೆಂಟ್’ಗಳು

ಆದರೆ ಒಟ್ಟಾರೆ ಘಟನೆಯನ್ನು ಶಾಸಕ ಪೂಂಜ ಮತ್ತು ಅವರ ಪಟಲಾಂ ಭರ್ಜರಿ ಪ್ರಚಾರಕ್ಕೆ ಬಳಸಿಕೊಂಡದ್ದಂತೂ ಸುಳ್ಳಲ್ಲ. ಕೆಲವೇ ಗಂಟೆಗಳಲ್ಲಿ ಹರೀಶ್ ಪೂಂಜ ಅವರು, ಟಿವಿ ಮಾಧ್ಯಮಗಳ ಜೊತೆಯೂ ಮಾತನಾಡಿ ‘ತಾನು ಜಿಹಾದಿಗಳ ಬೆದರಿಕೆಗಳಿಗೆಲ್ಲಾ ಜಗ್ಗುವುದಿಲ್ಲ..’ ಎಂದು ಹೇಳಿ ಈ ಘಟನೆಯನ್ನು ಕೋಮು ವಿಚಾರಗೊಳಿಸುವ ಪ್ರಯತ್ನ ಮಾಡಿದರು. ಇನ್ನು ಶಾಸಕರ ಪಟಲಾಂ ಅಂತೂ ಮನವಿ ಸಲ್ಲಿಸಿ ಶಾಸಕರಿಗೆ ‘ಎಕ್ಸ್ಟ್ರಾ ಪ್ರೊಟೆಕ್ಷನ್’ನ ಬೇಡಿಕೆಯನ್ನೂ ಇಟ್ಟರು. ಅಲ್ಲಿಗೆ ಈ ಘಟನೆಯನ್ನು ಪೊಲಿಟಿಕಲೈಸ್ ಮಾಡಿ ಪೂಂಜರಿಗೆ ಒಂದು ಸ್ಪೆಷಲ್ ಮೈಲೇಜ್ ನೀಡುವ ಎಲ್ಲಾ ಪ್ರಯತ್ನಗಳೂ ನಡೆಯಿತು. ಆದರೆ ಈ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆ ಇಟ್ಟ ದ.ಕ. ಪೊಲೀಸರು ಪ್ರಕರಣದ ನಿಜಾಂಶವನ್ನು ಬಯಲಿಗೆಳೆಯುವ ಮೂಲಕ ಎಲ್ಲಾ ಊಹಾಪೋಹಗಳಿಗೂ ತಾತ್ಕಾಲಿಕ ತೆರೆ ಎಳೆದಿದ್ದಾರೆ.

ಇತ್ತ, ಇದನ್ನೊಂದು ದೊಡ್ಡ ಕಮ್ಯುನಲ್ ಇಶ್ಯೂ ಮಾಡಿ ಒಂದಷ್ಟು ದಿನ ಪೊಲಿಟಿಕಲ್ ಮೈಲೇಜ್ ತಗೊಳೋ ಪ್ಲಾನ್ ಹಾಕಿಕೊಂಡಿದ್ದ ಬೆಳ್ತಂಗಡಿಯ ಜನಪ್ರಿಯ ಶಾಸಕರು ಮತ್ತು ಅವರ ಪಟಲಾಂ ಸದ್ಯಕ್ಕೆ ಗಪ್ ಚುಪ್ ಆಗಿದೆ! ಅಂದು ಪ್ರವೀಣ್ ನೆಟ್ಟಾರ್ ಅವರು‌ ಅಮಾನುಷವಾಗಿ ಕೊಲೆಯಾದಗಲೂ ಇದೇ KL ನಂಬರ್ ಭಾರೀ ಸುದ್ದಿಯಾಗಿತ್ತು. ನಿನ್ನೆಯೂ KL ನಂಬರ್ ನ ವಾಹನವೇ ಓವರ್ ಟೇಕ್ ಮಾಡಲೆತ್ನಿಸಿದ್ದು, ಇದರಿಂದ ಸುದ್ದಿಯಾಗಬಹುದು ಅಂದುಕೊಂಡಿದ್ದ ಶಾಸಕರು ಪುಕ್ಕಟೆ ಕೇಸ್ ಮಾಡಿಸಲು ಹೋಗಿ ಪೇಚಿಗೆ ಸಿಲುಕುವಂತಾಗಿದ್ದು ಮಾತ್ರ ವಿಪರ್ಯಾಸ..!!

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..