1. Home
  2. Political
  3. News
  4. ಗೋವಾ ಸಿಎಂ ಮಾಂಸಾಹಾರ ಸೇವಿಸಿ ಕೃಷ್ಣ ದರ್ಶನ ಆರೋಪ – ಡಾ. ಕೃಷ್ಣ ಪ್ರಸಾದ್ ನೀಡಿದ ಸ್ಪಷ್ಟನೆಯೇನು?

ಗೋವಾ ಸಿಎಂ ಮಾಂಸಾಹಾರ ಸೇವಿಸಿ ಕೃಷ್ಣ ದರ್ಶನ ಆರೋಪ – ಡಾ. ಕೃಷ್ಣ ಪ್ರಸಾದ್ ನೀಡಿದ ಸ್ಪಷ್ಟನೆಯೇನು?

ಗೋವಾ ಸಿಎಂ ಮಾಂಸಾಹಾರ ಸೇವಿಸಿ ಕೃಷ್ಣ ದರ್ಶನ ಆರೋಪ – ಡಾ. ಕೃಷ್ಣ ಪ್ರಸಾದ್ ನೀಡಿದ ಸ್ಪಷ್ಟನೆಯೇನು?
0

ನ್ಯೂಸ್ ಆ್ಯರೋ : ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಉಡುಪಿ ಜಿಲ್ಲೆಯ ಭೇಟಿ‌ ಸಂದರ್ಭದಲ್ಲಿ ಮಾಂಸಾಹಾರ ಸೇವಿಸಿ ಶ್ರೀಕೃಷ್ಣ ಮಠ ದೇವಾಲಯ ಭೇಟಿ ನೀಡಿದ್ದರು ಎಂಬ ಕಾಂಗ್ರೆಸ್ ಮುಖಂಡ ರಮೇಶ್ ಕಾಂಚನ್ ಹೇಳಿಕೆಗೆ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರ ಹಾಗು ಗೋವಾ ಸಿಎಂ ಆಪ್ತ ಡಾ.ಕೃಷ್ಣ ಪ್ರಸಾದ್ ಕೂಡ್ಲು ಸ್ಪಷ್ಟನೆ ನೀಡಿದ್ದಾರೆ.

ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಅವರು ನಮ್ಮ ಆಸ್ಪತ್ರೆಯ ಅತ್ಯಾಧುನಿಕ ಸೌಲಭ್ಯವಾದ ಜೈಸ್ ಅಡ್ವಾನ್ಸ್ ಕ್ಯಾಟರಾಕ್ಟ್ ಸರ್ಜರಿ ಡಿಜಿಟಲ್ ಸಿಸ್ಟಮ್ ಸೇವೆಯ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ಈ‌ ಸಂದರ್ಭದಲ್ಲಿ ಉಡುಪಿ ಶಾಸ‌ಕ ಕೆ.ರಘುಪತಿ ಭಟ್ ಮತ್ತು ನನ್ನ ಜೊತೆ ಉಡುಪಿಯ ಪ್ರವಾಸಿ ಬಂಗಲೆಯಲ್ಲಿ ಶುದ್ಧ ಸಸ್ಯಾಹಾರ ಊಟವನ್ನು ಮಧ್ಯಾಹ್ನ ಸೇವಿಸಿ ಬಳಿಕ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ್ದಾರೆ ಎಂದು ಹೇಳಿದರು.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..