1. Home
  2. Political
  3. News
  4. ಶಾಸಕ ಹರೀಶ್ ಪೂಂಜಾ ಕೊಲೆ ಬೆದರಿಕೆ ಪ್ರಕರಣ – ತನಿಖೆಗಿಳಿದ ಸಿಐಡಿ ಪೋಲಿಸರ ತಂಡ, ಪ್ರಕರಣದ ಅಸಲಿ ಸತ್ಯ ಹೊರಬೀಳುತ್ತಾ..!?

ಶಾಸಕ ಹರೀಶ್ ಪೂಂಜಾ ಕೊಲೆ ಬೆದರಿಕೆ ಪ್ರಕರಣ – ತನಿಖೆಗಿಳಿದ ಸಿಐಡಿ ಪೋಲಿಸರ ತಂಡ, ಪ್ರಕರಣದ ಅಸಲಿ ಸತ್ಯ ಹೊರಬೀಳುತ್ತಾ..!?

ಶಾಸಕ ಹರೀಶ್ ಪೂಂಜಾ ಕೊಲೆ ಬೆದರಿಕೆ ಪ್ರಕರಣ – ತನಿಖೆಗಿಳಿದ ಸಿಐಡಿ ಪೋಲಿಸರ ತಂಡ, ಪ್ರಕರಣದ ಅಸಲಿ ಸತ್ಯ ಹೊರಬೀಳುತ್ತಾ..!?
0

ನ್ಯೂಸ್ ಆ್ಯರೋ : ಹಿಂದೂ ಫೈರ್ ಬ್ರ್ಯಾಂಡ್ ಖ್ಯಾತಿಯ ಬೆಳ್ತಂಗಡಿಯ ಬಿಜೆಪಿ ಶಾಸಕ ಹರೀಶ್ ಪೂಂಜಾ ಅವರ ಕಾರ್ ಹಿಂಬಾಲಿಸಿ ಕೊಲೆ ಬೆದರಿಕೆ ಮತ್ತು ಕೊಲೆಯತ್ನ ನಡೆಸಲಾಗಿದೆ‌ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿ.ಐ.ಡಿ. ತನಿಖೆ ಆರಂಭಗೊಂಡಿದೆ.

ರಾಜ್ಯದ ಸಿ.ಐ.ಡಿ.ಇನ್ಸ್‌ಪೆಕ್ಟರ್ ಶಿವರಾಜ್ ನೇತೃತ್ವದ ಓರ್ವ ಎಸ್.ಐ ಹಾಗೂ ಇಬ್ಬರು ಸಿಬ್ಬಂದಿಯನ್ನು ಒಳಗೊಂಡ ತಂಡ ನಿನ್ನೆಯೇ ಬಂಟ್ವಾಳಕ್ಕೆ ಬಂದಿಳಿದು ತನಿಖೆಯನ್ನು ಆರಂಭಿಸಿದೆ.

ಅಕ್ಟೋಬರ್‌ 13 ರಂದು ರಾತ್ರಿ ಶಾಸಕ ಹರೀಶ್ ಪೂಂಜಾ ಅವರು ಬೆಂಗಳೂರಿನಿಂದ ಮಂಗಳೂರಿಗೆ ಬಂದು ಅಲ್ಲಿಂದ ಬೆಳ್ತಂಗಡಿಗೆ ತೆರಳುವ ಸಂದರ್ಭದಲ್ಲಿ ಓರ್ವ ವ್ಯಕ್ತಿ ಕಾರನ್ನು ಬೆನ್ನಟ್ಟಿ ತಲವಾರು ಝಳಪಿಸಿ ಕೊಲೆ ಮಾಡಲು ಯತ್ನಿಸಿದ್ದ ಎಂದು ಆರೋಪಿಸಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿ ಫಳ್ನೀರ್ ನಿವಾಸಿ ರಿಯಾಜ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಬಳಿಕ ಸರಕಾರ ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಸಿ.ಐ.ಡಿ.ಪೋಲೀಸರಿಗೆ ಒಪ್ಪಿಸಿತ್ತು. ಅ.18 ರಂದು ಈ ಪ್ರಕರಣಕ್ಕೆ ಸಂಬಂಧಿಸಿದ ಫೈಲ್ ಗಳನ್ನು ಬಂಟ್ವಾಳ ಗ್ರಾಮಾಂತರ ಎಸ್.ಐ. ಹರೀಶ್ ‌ಅವರು ಬೆಂಗಳೂರು ‌ಕಚೇರಿಗೆ ಮುಟ್ಟಿಸಿದ್ದರು.

ಇದೀಗ ಸಿ.ಐ.ಡಿ.ಪೋಲೀಸರು ತನಿಖೆ ಆರಂಭಿಸಿದ್ದಾರೆ. ವಿವಿಧ ಆಯಾಮಗಳಲ್ಲಿ ತನಿಖೆ ಆರಂಭಿಸಿ ಆರೋಪಿಯನ್ನು ಸಿ.ಐ.ಡಿ. ನ್ಯಾಯಾಲಯಕ್ಕೆ ‌ಹಾಜರಾಗುವಂತೆ ನೋಟೀಸ್ ‌ಜಾರಿ ಮಾಡುವ ಸಾಧ್ಯತೆಗಳಿವೆ. ಈಗಾಗಲೇ ಈ ಪ್ರಕರಣದ ಬಗ್ಗೆ ಹಲವು ಅನುಮಾನಗಳು ಮೂಡಿದ್ದು, ಸಿಐಡಿ ತನಿಖೆಯ ಬಳಿಕ ಈ ಪ್ರಕರಣದ ಹಿಂದಿನ‌ ಅಸಲಿ ಸತ್ಯ ಬಯಲಿಗೆ ಬರಲಿದೆಯಾ ಕಾದು ನೋಡಬೇಕಿದೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..