ನ್ಯೂಸ್ ಆ್ಯರೋ : ಚಿತ್ರದುರ್ಗದ ಚಳ್ಳಕೆರೆ ನಗರದಲ್ಲಿ ‘ಸಿದ್ರಾಮುಲ್ಲಾನ ಉಗ್ರಭಾಗ್ಯ ಹಾಗೂ ಲೀಲೆಗಳನ್ನು ತಿಳಿಯಲು ಸ್ಕ್ಯಾನ್ ಮಾಡಿ’ ಎಂಬ ಕ್ಯೂ ಆರ್ ಕೋಡ್ ಹೊಂದಿದ ಪೋಸ್ಟರ್ ಅಂಟಿಸಲಾಗಿದ್ದು ಅದರಲ್ಲಿ ಸಿದ್ದರಾಮಯ್ಯ ಅವರ ಭಾವಚಿತ್ರದೊಂದಿಗೆ ‘ಪಿಎಫ್‌ಐ ಭಾಗ್ಯ’ ಎಂದು ಕೂಡಾ ಆ ಪೋಸ್ಟರ್‌ನಲ್ಲಿ ಉಲ್ಲೇಖ ಮಾಡಲಾಗಿದೆ.
ಭಾರತ್ ಜೋಡೊ ಯಾತ್ರೆ ಸಾಗುವ ಮಾರ್ಗದಲ್ಲಿ ಉದ್ದಕ್ಕೂ ಈ ಪೋಸ್ಟರ್‌ಗಳು ರಾರಾಜಿಸುತ್ತಿವೆ.
ಸಿದ್ದರಾಮಯ್ಯ ಅವರು ಟಿಪ್ಪು ಸುಲ್ತಾನ್ ಪೇಟ ಧರಿಸಿ ಕೈಯಲ್ಲಿ ಖಡ್ಗ ಹಿಡಿದ ಚಿತ್ರ ಪೋಸ್ಟರ್ ಗಳಲ್ಲಿದೆ. ರಾಹುಲ್ ಗಾಂಧಿ ನಡೆಸುತ್ತಿರುವ ಭಾರತ್ ಜೋಡೊ ಯಾತ್ರೆಯ ಪ್ರಚಾರಕ್ಕೆ ಅಳವಡಿಸಿದ ಫ್ಲೆಕ್ಸ್, ಬ್ಯಾನರ್ ಅಡಿಯಲ್ಲಿ ಈ ಪೋಸ್ಟರ್‌ಗಳು ಕಾಣಿಸಿಕೊಂಡಿವೆ.
ಸೋಮವಾರ ರಾತ್ರಿ ಇವುಗಳನ್ನು ಅಂಟಿಸಿರುವ ಸಾಧ್ಯತೆ ಇದೆ. ಪೇಸಿಎಂ ಪೋಸ್ಟರ್‌ಗೆ ಪ್ರತಿಯಾಗಿ ಬಿಜೆಪಿ ಈ ಪೋಸ್ಟರ್ ಅಭಿಯಾನ ಮಾಡಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.
News Arrowಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..