1. Home
  2. Political
  3. News
  4. ಕರ್ನಾಟಕದ ರಾಜ್ಯದ ರಾಜ್ಯಭಾರ ಯುವಕನ ಕೈಗೆ ; ಗೊರವಪ್ಪ ನಾಗಪ್ಪ ಉರ್ಮಿ ಭವಿಷ್ಯ – ಈತನ ಭವಿಷ್ಯ ಸುಳ್ಳಾಗಿದ್ದೇ ಇಲ್ಲ…!!

ಕರ್ನಾಟಕದ ರಾಜ್ಯದ ರಾಜ್ಯಭಾರ ಯುವಕನ ಕೈಗೆ ; ಗೊರವಪ್ಪ ನಾಗಪ್ಪ ಉರ್ಮಿ ಭವಿಷ್ಯ – ಈತನ ಭವಿಷ್ಯ ಸುಳ್ಳಾಗಿದ್ದೇ ಇಲ್ಲ…!!

ಕರ್ನಾಟಕದ ರಾಜ್ಯದ ರಾಜ್ಯಭಾರ ಯುವಕನ ಕೈಗೆ ; ಗೊರವಪ್ಪ ನಾಗಪ್ಪ ಉರ್ಮಿ ಭವಿಷ್ಯ – ಈತನ ಭವಿಷ್ಯ ಸುಳ್ಳಾಗಿದ್ದೇ ಇಲ್ಲ…!!
0

ನ್ಯೂಸ್‌‌ ಆ್ಯರೋ‌ : ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕಿನ ದೇವರಗುಡ್ಡದಲ್ಲಿ ದಸರಾ ಹಬ್ಬದ ಸಮಯದಲ್ಲಿ ನಡೆಯುವ ಮಾಲತೇಶ ದೇವರ ಕಾರ್ಣಿಕೋತ್ಸವ ಮಹತ್ವ ಪಡೆದುಕೊಂಡಿದೆ. ಬಿಲ್ಲನ್ನೇರಿ ಗೊರವಪ್ಪ ನಾಗಪ್ಪ ಉರ್ಮಿ ಕಾರ್ಣಿಕ ನುಡಿದ್ದು, ಇದನ್ನು ವರ್ಷದ ಭವಿಷ್ಯವಾಣಿ ಎಂದು ನಂಬಲಾಗುತ್ತದೆ.

ಲಕ್ಷಾಂತರ ಭಕ್ತರ ಸಮೂಹದಲ್ಲಿ ಬಿಲ್ಲನ್ನೇರಿದ ಗೊರವಪ್ಪ ನಾಗಪ್ಪ ಉರ್ಮಿ ‘ಆಕಾಶದ ಗುಡ್ಡಕ್ಕಲೆ ಶಿಶು ಏರಿತಲೇ ಪರಾಕ್’ ಎಂದು ಭವಿಷ್ಯ ನುಡಿದಿದ್ದಾರೆ. ಸಧ್ಯ ಈ ಭವಿಷ್ಯ ವಾಣಿಯನ್ನು ಹಲವು ರೀತಿಯಲ್ಲಿ ವಿಶ್ಲೇಷಿಸಲಾಗುತ್ತಿದೆ.

ಈ ವರ್ಷದ ಭವಿಷ್ಯವಾಣಿಯ ಪ್ರಕಾರ ರಾಜ್ಯದ ಸಣ್ಣ ರೈತರಿಗೂ ಉತ್ತಮ ಬೆಳೆ ಹಾಗೂ ಆದಾಯ ಸಿಗಲಿದೆ ಎಂದು ಹೇಳಲಾಗುತ್ತಿದೆ. ಯುವ ರಾಜಕಾರಣಿಗಳಿಗೆ ಹೆಚ್ಚಿನ ಅವಕಾಶ ದೊರೆಯಲಿದೆ. ಅಲ್ಲದೆ ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಯುವಕನಿಗೆ ದೊರೆಯುವ ಸಾಧ್ಯತೆ ಇದೆ ಎಂದು ಕಾರ್ಣಿಕ ವಿಶ್ಲೇಷಿಸಿದ ಕುರಿತು ದೇವರಗುಡ್ಡ ದೇವಸ್ಥಾನದ ಪ್ರಧಾನ ಅರ್ಚಕರು ಗೂರುಜಿ ಸಂತೋಷ ಭಟ್ ಹೇಳಿದ್ದಾರೆ.

ಗೊರವಪ್ಪ ನುಡಿಯುವ ಕಾರ್ಣಿಕ ವಾಣಿ ಬಗ್ಗೆ ಜನರಿಗೆ ಹಿಂದಿನಿಂದಲೂ ಅಪರಾರ ನಂಬಿಕೆ ಇದೆ. ಕಳೆ ಎರಡು ವರ್ಷಗಳಿಂದ ಕೊರೋನಾ ಕಾರಾಣದಿಂದ ಕಾರ್ಣಿಕೋತ್ಸವಕ್ಕೆ ಹೆಚ್ಚಿನ ಜನ ಸೇರದಂತೆ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಂಡಿತ್ತು. ಈ ಬಾರಿ ಕೋವಿಡ್ ನಿರ್ಬಂಧಗಳು ಇಲ್ಲದಿದ್ದ ಕಾರಣ ಲಕ್ಷಾಂತರ ಭಕ್ತರ ನಡುವೆ ಕಾರ್ಣಿಕೋತ್ಸವ ಅದ್ಧೂರಿಯಾಗಿ ಜರುಗಿದೆ.

ದೇವರಗುಡ್ಡದಂತೆ ಶ್ರೀ ಕ್ಷೇತ್ರ ಮೈಲಾರದಲ್ಲಿ ಗೊರವಯ್ಯ ನುಡಿಯುವ ಕಾರ್ಣಿಕ ನುಡಿ ಕೂಡ ರಾಜ್ಯದಲ್ಲಿ ಮಹತ್ವ ಪಡೆದುಕೊಂಡಿದೆ. ಕಳೆದ ಫೆಬ್ರವರಿಯಲ್ಲಿ ನಡೆದ ಕಾರ್ಣಿಕೋತ್ಸವದಲ್ಲಿ ‘ಮಳೆ ಬೆಳೆ ಸಂಪಾಯಿತಲೇ ಪರಾಕ್’ ಎಂದು ಭವಿಷ್ಯ ನುಡಿದಿದ್ದರು.

ಅಲ್ಲದೆ ಸಮ್ಮಿಶ್ರ ಸರ್ಕಾರ ರಚನೆಯಾದಾಗ ‘ಕಬ್ಬಿಣದ ಸರಪಳಿ ಹರಿತಲೇ ಪರಾಕ್’ ಎಂದು ಕಾರ್ಣಿಕ ಭವಿಷ್ಯ ನುಡಿದ್ದರು. ರಾಜಕೀಯವಾಗಿ ಸಂಬಂಧಗಳು ಕೆಟ್ಟುಹೋಗಬಹುದು. ವೈಮನಸ್ಸು ಬರಬಹುದು. ಈ ಸರ್ಕಾರ ಮುರಿದುಬಿದ್ದು ಚುನಾವಣೆ ಬರಬಹುದೆಂಬ ಮುನ್ಸೂಚನೆ ಇದೆ ಎಂದು ವೆಂಕಪ್ಪಯ್ಯ ಒಡೆಯವರ್ ಅಂದು ಕಾರ್ಣಿಕರ ನುಡಿಯನ್ನು ವಿಶ್ಲೇಷಿಸಿದ್ದರು. ಅದರಂತೆ ಮೈತ್ರಿಪಕ್ಷಗಳ ಕೊಂಡಿ ಕಳಚಿ ಸಮ್ಮಿಶ್ರ ಸರ್ಕಾರ ಪತನಗೊಂಡಿತ್ತು.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..