1. Home
  2. Puttur
  3. ಪುತ್ತೂರು : ಗೋಡೌನ್ ನಲ್ಲಿದ್ದ ಭಾರೀ ಪ್ರಮಾಣದ ಪಟಾಕಿ ಸ್ಫೋಟ – ಮಾಲಕ ಕರುಣಾಕರ ರೈ ವಿರುದ್ಧ ಗಂಭೀರ ಪ್ರಕರಣ ದಾಖಲು

ಪುತ್ತೂರು : ಗೋಡೌನ್ ನಲ್ಲಿದ್ದ ಭಾರೀ ಪ್ರಮಾಣದ ಪಟಾಕಿ ಸ್ಫೋಟ – ಮಾಲಕ ಕರುಣಾಕರ ರೈ ವಿರುದ್ಧ ಗಂಭೀರ ಪ್ರಕರಣ ದಾಖಲು

ಪುತ್ತೂರು : ಗೋಡೌನ್ ನಲ್ಲಿದ್ದ ಭಾರೀ ಪ್ರಮಾಣದ ಪಟಾಕಿ ಸ್ಫೋಟ – ಮಾಲಕ ಕರುಣಾಕರ ರೈ ವಿರುದ್ಧ ಗಂಭೀರ ಪ್ರಕರಣ ದಾಖಲು
0

ನ್ಯೂಸ್‌ ಆ್ಯರೋ : ಪುತ್ತೂರಿನ ಪಟಾಕಿ ಗೋಡೌನ್ ನಲ್ಲಿ ಪಟಾಕಿ ಸ್ಫೋಟಕ್ಕೆ ಸಂಬಂಧಿಸಿದಂತೆ ಕಟ್ಟಡದ ಮಾಲಕ, ಪುತ್ತೂರಿನ ಅಶ್ವಿನಿ ಬಾರ್ & ರೆಸ್ಟೋರೆಂಟ್ ಪಾಲುದಾರ ಕರುಣಾಕರ ರೈ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಪೊಲೀಸರು ಸೆಕ್ಷನ್ 9B ಅಡಿ ಸೊಮೊಟೋ ಪ್ರಕರಣ ದಾಖಲಿಸಿದ್ದಾರೆ.

ಸೆಕ್ಷನ್ 9ಬಿ ಅಡಿ ಕರುಣಾಕರ್ ರೈ ವಿರುದ್ಧ ಸ್ಫೋಟಕ ದಾಸ್ತಾನು ಗಂಭೀರ ಪ್ರಕರಣ ದಾಖಲಿಸಿಕೊಂಡಿರುವ ಪುತ್ತೂರು ಪೊಲೀಸರು ತನಿಖೆ ಕೈಗೆತ್ತಿಕೊಳ್ಳಲಿದ್ದಾರೆ.

ಪುತ್ತೂರು ದರ್ಬೆಯ ಅಶ್ವಿನಿ ಹೋಟೆಲ್ ಮಾಲಕರಾದ ಕರುಣಾಕರ ರೈ ಮಾಲಿಕತ್ವದ ದರ್ಬೆಯ ಆರಾಧ್ಯ ಕಾಂಪ್ಲೆಕ್ಸ್ ನ ನೆಲಮಹಡಿಯಲ್ಲಿದ್ದ ಗೋಡೌನ್ ನಲ್ಲಿ ಪಟಾಕಿ ಶೇಖರಿಸಿಟ್ಟಿದ್ದು, ಸಂಜೆ 6 ಗಂಟೆ ವೇಳೆಗೆ ಪಟಾಕಿ ಸ್ಪೋಟ ಸಂಭವಿಸಿತ್ತು.

ಪಟಾಕಿ ಸಿಡಿಯುವ ಶಬ್ದಕ್ಕೆ ದರ್ಬೆ ಸುತ್ತಮುತ್ತಲಿನ ಎಲ್ಲರೂ ಬೆಚ್ಚಿಬಿದ್ದಿದ್ದಾರೆ. ಆ ಕಟ್ಟಡದಲ್ಲಿರುವ ಎಲ್ಲಾ ಅಂಗಡಿಯವರು ಬಂದ್ ಮಾಡಿ ಹೊರ ಬಂದಿದ್ದಾರೆ. ದರ್ಬೆಯಲ್ಲಿ ಪಟಾಕಿ ಮಾರುವವರಿಗೆ ಸೇರಿದ ಪಟಾಕಿ ಎನ್ನಲಾಗಿದೆ. ಆದರೆ ಕರುಣಾಕರ ರೈ ತನ್ನ ಮನೆಯ ಉಪಯೋಗಕ್ಕೆ ಇಟ್ಟ ಪಟಾಕಿ ಎಂದು ಸ್ಥಳೀಯ ಪತ್ರಿಕೆಗೆ ಹೇಳಿಕೆ ನೀಡಿದ್ದರು.

ಕಟ್ಟಡದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಈ ಘಟನೆ ನಡೆದಿದೆಯ ಅಥವ ಬೆಂಕಿ ಆಕಸ್ಮಿಕ ನಡೆದಿದೆಯಾ ಎನ್ನುವ ಬಗ್ಗೆ ತನಿಖೆಯಿಂದ ತಿಳಿದುಬರಬೇಕಿದೆ. ಆದರೆ ಮಾಧ್ಯಮ ವರದಿ ಆಧರಿಸಿ ರಾಜ್ಯ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪುತ್ತೂರು ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಪುತ್ತೂರು ಅಗ್ನಿಶಾಮಕ ದಳದವರು ಬೆಂಕಿ ನಂದಿಸಿದ ನಂತರ ಅಲ್ಲಿದ್ದ ಪಟಾಕಿಯನ್ನು ಪಿಕಪ್ ನಲ್ಲಿ ಬೇರೆ ಕಡೆ ಸಾಗಿಸಲಾಗಿದೆ ಎನ್ನಲಾಗುತ್ತಿದ್ದು, ಪೋಲಿಸರ ತನಿಖೆಯಿಂದ ಸತ್ಯಾಂಶ ಹೊರಬೀಳಲಿದೆ‌.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..