1. Home
  2. Puttur
  3. ಉಪ್ಪಿನಂಗಡಿ‌ : ಎಟಿಎಂ ಹಣ ಸಾಗಿಸುವ ವಾಹನ ಮತ್ತು ಅಟೋ ನಡುವೆ ಢಿಕ್ಕಿ – ಅಟೋ ಚಾಲಕ ಸ್ಥಳದಲ್ಲೇ ದುರ್ಮರಣ

ಉಪ್ಪಿನಂಗಡಿ‌ : ಎಟಿಎಂ ಹಣ ಸಾಗಿಸುವ ವಾಹನ ಮತ್ತು ಅಟೋ ನಡುವೆ ಢಿಕ್ಕಿ – ಅಟೋ ಚಾಲಕ ಸ್ಥಳದಲ್ಲೇ ದುರ್ಮರಣ

ಉಪ್ಪಿನಂಗಡಿ‌ : ಎಟಿಎಂ ಹಣ ಸಾಗಿಸುವ ವಾಹನ ಮತ್ತು ಅಟೋ ನಡುವೆ ಢಿಕ್ಕಿ – ಅಟೋ ಚಾಲಕ ಸ್ಥಳದಲ್ಲೇ ದುರ್ಮರಣ
0

ನ್ಯೂಸ್ ಆ್ಯರೋ : ಎಟಿಎಂ ನ‌ ಹಣ ಸಾಗಿಸುವ ವಾಹನ ಹಾಗೂ ಅಟೋ ರಿಕ್ಷಾ ನಡುವೆ ಢಿಕ್ಕಿ ಸಂಭವಿಸಿ ಅಟೋ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಉಪ್ಪಿನಂಗಡಿ ಬಳಿಯ ನೆಕ್ಕಿಲಾಡಿ ಬಳಿ ನಡೆದಿದೆ.

ಮೃತ ರಿಕ್ಷಾ ಚಾಲಕನನ್ನು ಉಪ್ಪಿನಂಗಡಿಯ ಸುಭಾಶ್ ನಗರ ನಿವಾಸಿ, ವಾಸು ಪೂಜಾರಿ (50ವರ್ಷ) ಎಂದು ಗುರುತಿಸಲಾಗಿದೆ.

ಎಟಿಎಂ ವಾಹನ ಉಪ್ಪಿನಂಗಡಿಯಿಂದ ಮಂಗಳೂರು ಕಡೆಗೆ ಸಾಗುತ್ತಿದ್ದರೆ, ಅಟೋ ರಿಕ್ಷಾ ಉಪ್ಪಿನಂಗಡಿ ಕಡೆಗೆ ತೆರಳುತ್ತಿತ್ತು. ಘಟನೆಯಲ್ಲಿ ಅಟೋ ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದೆ.

ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮೃತ ವಾಸು ಪೂಜಾರಿ ಅವರು ಪತ್ನಿ, ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗನನ್ನು ಅಗಲಿದ್ದಾರೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..