1. Home
  2. Puttur
  3. ವಿಟ್ಲ : ಕಂಪ್ಯೂಟರ್ ಕ್ಲಾಸ್ ಗೆ ತೆರಳಿದ್ದ ಹಿಂದೂ ಯುವತಿ ಇಬ್ಬರು ಮುಸ್ಲಿಂ ಯುವಕರ ಜೊತೆ ಗುಡ್ಡೆಯಲ್ಲಿ ಪತ್ತೆ – ಪೋಲಿಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲು

ವಿಟ್ಲ : ಕಂಪ್ಯೂಟರ್ ಕ್ಲಾಸ್ ಗೆ ತೆರಳಿದ್ದ ಹಿಂದೂ ಯುವತಿ ಇಬ್ಬರು ಮುಸ್ಲಿಂ ಯುವಕರ ಜೊತೆ ಗುಡ್ಡೆಯಲ್ಲಿ ಪತ್ತೆ – ಪೋಲಿಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲು

ವಿಟ್ಲ : ಕಂಪ್ಯೂಟರ್ ಕ್ಲಾಸ್ ಗೆ ತೆರಳಿದ್ದ ಹಿಂದೂ ಯುವತಿ ಇಬ್ಬರು ಮುಸ್ಲಿಂ ಯುವಕರ ಜೊತೆ ಗುಡ್ಡೆಯಲ್ಲಿ ಪತ್ತೆ – ಪೋಲಿಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲು
0

ನ್ಯೂಸ್ ಆ್ಯರೋ : ವಿಟ್ಲ ಸಮೀಪದ ಇಡ್ಕಿದು ಗ್ರಾಮದ ನಿನ್ನಿಕಲ್ಲು ಎಂಬಲ್ಲಿ ಅನ್ಯ ಕೋಮಿನ ಯುವಕ ಯುವತಿಯೊಂದಿಗೆ ಇದ್ದ ಹಿಂದೂ ಯುವತಿಯ ಸಹಿತ ನಾಲ್ವರನ್ನು ವಿಟ್ಲ ಠಾಣಾ ಪೊಲೀಸರು ವಶಕ್ಕೆ ಪಡೆದ ಘಟನೆ ನ.20ರಂದು ನಡೆದಿದ್ದು, ಇದೀಗ ಹಿಂದೂ ಯುವತಿಯ ಪೋಷಕರು ನೀಡಿದ ದೂರಿನಂತೆ ಅನ್ಯಕೋಮಿನ ಅಪ್ರಾಪ್ತ ಬಾಲಕನ ಸಹಿತ ಇಬ್ಬರ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿದೆ.

ಕಂಪ್ಯೂಟರ್ ಕ್ಲಾಸಿಗೆ ಹೋಗುತ್ತಿದ್ದ
ಕಬಕ ಪರಿಸರದ ಇಬ್ಬರು ಅನ್ಯಕೋಮಿನ ಯುವಕರೊಂದಿಗೆ ಅದೇ ಪರಿಸರದ ಅನ್ಯಕೋಮಿನ ಯುವತಿಯ ಸಹಿತ ಓರ್ವ ಹಿಂದೂ ಯುವತಿ ಇಡ್ಕಿದು ಗ್ರಾಮದ ಅಳಕೆಮಜಲು ಸಮೀಪದ ನಿನ್ನಿಕಲ್ಲಿನಲ್ಲಿರುವ ಪಾರ್ಕ್ ಗೆ ಬಂದಿದ್ದರು.

ಅನ್ಯಕೋಮಿನ ಯುವತಿ, ಯುವಕರೊಂದಿಗೆ ಹಿಂದೂ ಯುವತಿ ಇರುವ ಬಗ್ಗೆ ಗಮನಿಸಿದ ಸ್ಥಳೀಯರು ವಿಟ್ಲ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಠಾಣಾ ಸಿಬ್ಬಂದಿಗಳು ನಾಲ್ವರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಲಾಗಿದೆ ಎಂದು ವಿಟ್ಲ ಠಾಣಾ ಪೊಲೀಸರು ತಿಳಿಸಿದ್ದರು.

ಆ ಬಳಿಕ ನಡೆದ ಬೆಳವಣಿಗೆಯಲ್ಲಿ ಹಿಂದೂ ಯುವತಿಯ ಪೋಷಕರು ನೀಡಿದ ದೂರಿನಂತೆ ಇದೀಗ ಅನ್ಯಕೋಮಿನ ಅಪ್ರಾಪ್ತ ಬಾಲಕ ಸಹಿತ ಮಹಮ್ಮದ್‌ ಶಾಕೀರ್‌ ಎಂಬಾತನ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿದೆ.

ಹಿಂದೂ ಯುವತಿಯ ಪೋಷಕರು ನೀಡಿದ ದೂರಿನಲ್ಲೇನಿದೆ?
ನನ್ನ ಅಪ್ರಾಪ್ತ ವಯಸ್ಸಿನ ಮಗಳು ನ.20ರಂದು ಕಬಕ ಗ್ರಾಮ ಪಂಚಾಯತ್ ನ ಸಭಾಂಗಣದಲ್ಲಿ ಸರಕಾರದ ವತಿಯಿಂದ ನಡೆಸುವ ಕಂಪ್ಯೂಟರ್ ಶಿಕ್ಷಣ ಪಡೆಯಲು ತೆರಳಿದ್ದಳು. ಅಲ್ಲಿಂದ ಆಕೆಯನ್ನು ಮಹಮ್ಮದ್‌ ಶಾಕೀರ್‌ ಹಾಗೂ ಇನ್ನೊಬ್ಬ ಅಪ್ರಾಪ್ತ ಬಾಲಕ ಪುಸಲಾಯಿಸಿ ಅಪಹರಣ ಮಾಡಿ ಇಡ್ಕಿದು ಗ್ರಾಮದ ನಿನ್ನಿಕಲ್ಲು ಎಂಬಲ್ಲಿಗೆ ಯಾವುದೋ ಉದ್ದೇಶದಿಂದ ಕರೆದುಕೊಂಡು ಹೋಗಿದ್ದರು.

ಸಾಯಂಕಾಲ 5.30ರ ಸುಮಾರಿಗೆ ನನ್ನ ಮಗಳು ಮನೆಗೆ ಕರೆ ಮಾಡಿ ನನ್ನನ್ನು ಅಪಹರಣ ಮಾಡಿ ನಿನ್ನಿಕಲ್ಲು ಎಂಬಲ್ಲಿಗೆ ಕರೆದುಕೊಂಡು ಹೋಗಿದ್ದಾರೆ ಎಂದು ತಿಳಿಸಿದ್ದಳು. ಆಕೆ ನೀಡಿದ ಮಾಹಿತಿಯಂತೆ ನಾನು ನಿನ್ನಿಕಲ್ಲು ಎಂಬಲ್ಲಿನ ಎತ್ತರದ ಗುಡ್ಡ ಪ್ರದೇಶದ ಕಡೆಗೆ ಹೋಗಿ ನೋಡಿದಾಗ ಅಲ್ಲಿ ಇಬ್ಬರು ಹುಡುಗರು ನನ್ನ ಮಗಳೊಂದಿಗೆ ಇರುವುದನ್ನು ಗಮನಿಸಿ ಆಕೆಯನ್ನು ಕರೆದಾಗ ಅಲ್ಲಿದ್ದ ಇಬ್ಬರು ಯುವಕರು ಓಡಿ ಪರಾರಿಯಾಗಿದ್ದಾರೆ ಎಂದು ಬಾಲಕಿಯ ಪೋಷಕರು ವಿಟ್ಲ ಠಾಣೆಗೆ ನೀಡಿದ‌ ದೂರಿನಲ್ಲಿ ತಿಳಿಸಿದ್ದಾರೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..