ನ್ಯೂಸ್ ಆ್ಯರೋ : ವಿಟ್ಲದ ಗುಡ್ಡೆಯೊಂದರಲ್ಲಿ ನಿನ್ನೆಯಷ್ಟೇ ಹಿಂದೂ ಯುವತಿ ಮುಸ್ಲಿಂ ಯುವಕರೊಂದಿಗೆ ಗುಡ್ಡೆಯಲ್ಲಿ ಪತ್ತೆಯಾದ ಘಟನೆಯ ಬೆನ್ನಲ್ಲೇ ಪುತ್ತೂರಿನ ಯುವತಿ ಬೆಂಗಳೂರಿನ ಯುವಕನನ್ನು ಮದುವೆಯಾದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮದುವೆ ದಾಖಲೆಯ ಫೋಟೋ ವೈರಲ್ ಆಗಿದೆ. ಅಲ್ಲದೇ ಇದು ಮತ್ತೊಂದು ವ್ಯವಸ್ಥಿತ ಲವ್ ಜಿಹಾದ್ ಎಂಬ ಕೂಗು ಎದ್ದಿದೆ.
ಪುತ್ತೂರಿನ ಹಿಂದೂ ಯುವತಿಯೊಂದಿಗೆ ಬೆಂಗಳೂರಿನ ಮುಸ್ಲಿಂ ವ್ಯಕ್ತಿಯ ಮದುವೆ ಪುತ್ತೂರಿನ ದರ್ಬೆ ನಿವಾಸಿ ಅಕ್ಷತಾ (34) ಎಂಬಾಕೆ ಬೆಂಗಳೂರಿನ ನ್ಯಾಣಪ್ಪನಹಳ್ಳಿ ನಿವಾಸಿ ಶೇಕ್ ಮಹಮ್ಮದ್ ಸಲೀಂ (44) ಎಂಬಾತನನ್ನು ನವೆಂಬರ್ 9ರಂದು ಮದುವೆಯಾಗಿದ್ದಾರೆ.
ಈ ಬಗ್ಗೆ ಬೊಮ್ಮನಹಳ್ಳಿ ರಿಜಿಸ್ಟರ್ ಕೇಂದ್ರದಲ್ಲಿ ವಿವಾಹ ನೋಂದಣಿಯಾಗಿದೆ. ಸದ್ಯ ಈ ನೋಟಿಸ್ ಎಲ್ಲೆಡೆ ಹರಿದಾಡುತ್ತಿದ್ದು ವ್ಯಾಪಕ ವಿರೋಧ ವ್ಯಕ್ತವಾಗಿದೆ.ಹಾಗೂ ಜನರು ಇನ್ನೊಂದು ಫ್ರಿಡ್ಜ್ ರೆಡಿ ಮಾಡಿ ಎಂಬ ಬರಹ ಬರೆದು ವೈರಲ್ ಮಾಡುತ್ತಿದ್ದಾರೆ.
ಆದರೆ 9 ತಾರೀಖಿನಂದು ರಿಜಿಸ್ಟರ್ ಮದುವೆಯಾಗಿದ್ದರೂ ನಿಯಮದಂತೆ ಯಾರಾದಾದರೂ ವಿರೋಧವಿದ್ದರೆ 30 ದಿನಗಳ ಕಾಲಾವಕಾಶ ನೀಡಲಾಗಿದೆ. ಸದ್ಯ ಈ ಮದುವೆ ದಾಖಲೆಯ ಫೋಟೋ ವೈರಲ್ ಆಗುತ್ತಿದ್ದು, ಈ ಮದುವೆಯ ಕಥೆ ಏನಾಗಲಿದೆಯೋ ಕಾದು ನೋಡಬೇಕಿದೆ.
News Arrowಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..