1. Home
  2. Religious
  3. ಸತ್ತವರ‌ ಆತ್ಮದ ಬಗ್ಗೆ ಗರುಡ ಪುರಾಣ ಹೇಳೋದೇನು? – ಪಿತೃ ಪಕ್ಷದ ಆಚರಣೆಗಳ ಬಗ್ಗೆ ನಿಮಗೆಷ್ಟು ಗೊತ್ತು..? ಇಲ್ಲಿದೆ ಡಿಟೇಲ್ಸ್

ಸತ್ತವರ‌ ಆತ್ಮದ ಬಗ್ಗೆ ಗರುಡ ಪುರಾಣ ಹೇಳೋದೇನು? – ಪಿತೃ ಪಕ್ಷದ ಆಚರಣೆಗಳ ಬಗ್ಗೆ ನಿಮಗೆಷ್ಟು ಗೊತ್ತು..? ಇಲ್ಲಿದೆ ಡಿಟೇಲ್ಸ್

ಸತ್ತವರ‌ ಆತ್ಮದ ಬಗ್ಗೆ ಗರುಡ ಪುರಾಣ ಹೇಳೋದೇನು? – ಪಿತೃ ಪಕ್ಷದ ಆಚರಣೆಗಳ ಬಗ್ಗೆ ನಿಮಗೆಷ್ಟು ಗೊತ್ತು..? ಇಲ್ಲಿದೆ ಡಿಟೇಲ್ಸ್
0

ನ್ಯೂಸ್ ಆ್ಯರೋ‌ : ಹಿಂದೂ ಧರ್ಮದಲ್ಲಿ ಧಾರ್ಮಿಕ ನಂಬಿಕೆಗಳು, ಆಚರಣೆಗಳು, ಹಬ್ಬ-ಹರಿದಿನಗಳಿಗೆ ಮಹತ್ವದ ಸ್ಥಾನವಿದೆ. ಪ್ರತಿ ತಿಂಗಳು ಒಂದೊಂದು ವಿಶೇಷ ಆಚರಣೆಗಳಿರುತ್ತವೆ. ಈಗ ಪಿತೃ ಪಕ್ಷ ಆರಂಭವಾಗಿದ್ದು, ಪೂರ್ವಜರನ್ನು ಸಂತೃಪ್ತಿ ಪಡಿಸಲು, ಅವರ ಆಶೀರ್ವಾದ ಪಡೆಯಲು ಜನರು ಶ್ರಾದ್ಧ, ತರ್ಪಣ ಮತ್ತು ಪಿಂಡ ದಾನ ಇತ್ಯಾದಿಗಳನ್ನು ಮಾಡುತ್ತಾರೆ.

ಈ ವರ್ಷ ಸೆಪ್ಟೆಂಬರ್ 10ರಿಂದ ಪಿತೃ ಪಕ್ಷ ಆರಂಭವಾಗಿದ್ದು, ಸೆಪ್ಟೆಂಬರ್ 25ರವರೆಗೆ ಮುಂದುವರಿಯುತ್ತದೆ. ಪ್ರತಿವರ್ಷ ಪಿತೃ ಪಕ್ಷವು ಭಾದ್ರಪದ ಮಾಸದ ಹುಣ್ಣಿಮೆಯಿಂದ ಪ್ರಾರಂಭವಾಗಿ ಅಶ್ವಿನಿ ಮಾಸದ ಅಮಾವಾಸ್ಯೆಯಂದು ಕೊನೆಗೊಳ್ಳುತ್ತದೆ. ಪಿತೃ ಪಕ್ಷದ ಈ 15 ದಿನಗಳಲ್ಲಿ ಜನರು ತಮ್ಮ ಪೂರ್ವಜರ ಆಶೀರ್ವಾದ ಪಡೆಯಲು ಶ್ರಾದ್ಧ ಆಚರಣೆಗಳನ್ನು ಮಾಡುತ್ತಾರೆ.

ಹಿಂದೂ ಧರ್ಮದಲ್ಲಿ ಪಿತೃ ಪಕ್ಷಕ್ಕೆ ಅದರದ್ದೇ ಆದ ಮಹತ್ವವಿದೆ. ಈ ಸಮಯದಲ್ಲಿ ಶುಭ ಕಾರ್ಯಗಳು ನಡೆಯುವುದಿಲ್ಲ. ಗೃಹ ಪ್ರವೇಶ, ಹೊಸ ಮನೆ ಅಥವಾ ವಾಹನ ಖರೀದಿ, ಪೂಜಾ ಕಾರ್ಯಗಳು ನಡೆಯುವುದಿಲ್ಲ. ಈ 15 ದಿನಗಳು ಪೂರ್ವಜರಿಗೆ ಮೀಸಲಿಡಲಾಗಿದೆ. ನಂಬಿಕೆಗಳ ಪ್ರಕಾರ ಪಿತೃ ಪಕ್ಷವು ಜಾತಕದಲ್ಲಿ ಪಿತೃ ದೋಷವನ್ನು ತೆಗೆದುಹಾಕಲು ಅತ್ಯುತ್ತಮ ಸಮಯವೆಂದು ಹೇಳಲಾಗುತ್ತದೆ.

ಪಿತೃ ಪಕ್ಷದಲ್ಲಿ ಬ್ರಾಹ್ಮಣರಿಗೆ ಅನ್ನ ನೀಡಬೇಕೆಂಬ ಕಾನೂನಿದೆ. ನೀವು ಆಹಾರವನ್ನು ದಾನ ಮಾಡಿದರೆ, ಹಸಿದವರಿಗೆ ಆಹಾರ ನೀಡಿದರೆ, ಅದರ ಪುಣ್ಯವು ನಿಮಗೂ ದಕ್ಕಲಿದೆ. ಇನ್ನು ಶ್ರಾದ್ಧ ದಿನ ಸ್ನಾನ ಮಾಡಿದ ನಂತರ ಪೂಜಾ ಸ್ಥಳದಲ್ಲಿ ಕುಳಿತು ನಿಮ್ಮ ಪೂರ್ವಜರನ್ನು ಸ್ಮರಿಸಬೇಕು. ಪೂರ್ವಜರಿಗೆ ಸಾತ್ವಿಕ ಆಹಾರವನ್ನು ಅರ್ಪಿಸಿ. ಹಸುಗಳು, ನಾಯಿಗಳು, ಕಾಗೆಗಳು ಅಥವಾ ಇರುವೆಗಳಿಗೆ ಪಿಂಡ ದಾನವನ್ನು ಅರ್ಪಿಸಬೇಕು.

ನಿಮಗೆ ಗೊತ್ತಿದ್ಯೊ ಇಲ್ವೋ ಪಿತೃ ಪಕ್ಷದ ಸಮಯದಲ್ಲಿ ಕನಸಿನಲ್ಲಿ ಕುಟುಂಬದ ಸದಸ್ಯರು ಕಾಣಿಸಿಕೊಳ್ಳುವುದು ವಿಶೇಷ ರೀತಿಯ ಮುನ್ಸೂಚನೆಯಂತೆ. ಕನಸಿನಲ್ಲಿ ಪೂರ್ವಜರು ಸಂತೋಷವಾಗಿರುವಂತೆ ಕಂಡುಬಂದರೆ ಅವರ ಆತ್ಮಕ್ಕೆ ಶಾಂತಿ ಸಿಕ್ಕಿದೆ ಎನ್ನುವುದರ ಸಂಕೇತವಂತೆ.

ಒಂದು ವೇಳೆ ನಿಮ್ಮ ಪೂರ್ವಜರು ಕನಸಿನಲ್ಲಿ ಅನಾರೋಗ್ಯ ಅಥವಾ ತೊಂದರೆಯಲ್ಲಿ ಇರುವಂತೆ ಕಂಡುಬಂದರೆ, ಅವರ ಆತ್ಮಕ್ಕೆ ಶಾಂತಿ ಸಿಕ್ಕಿಲ್ಲ ಎಂದರ್ಥ. ಹಾಗಾದಲ್ಲಿ ನಿಮಗೆ ಗೊತ್ತಿರುವ ಪಂಡಿತ ಸಲಹೆಯ ಪ್ರಕಾರ ತರ್ಪಣ, ಶ್ರಾದ್ಧ ಅಥವಾ ದಾನ ಇತ್ಯಾದಿಗಳನ್ನು ಮಾಡಬೇಕಾಗುತ್ತದೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..