1. Home
  2. Religious
  3. ನಾಳೆ ವರ್ಷದ ಕೊನೆಯ ಚಂದ್ರಗ್ರಹಣ – ಯಾವೆಲ್ಲ ರಾಶಿಯವರಿಗೆ ಕೆಟ್ಟ ಪರಿಣಾಮ ಬೀರಲಿದೆ ಗೊತ್ತಾ…!?

ನಾಳೆ ವರ್ಷದ ಕೊನೆಯ ಚಂದ್ರಗ್ರಹಣ – ಯಾವೆಲ್ಲ ರಾಶಿಯವರಿಗೆ ಕೆಟ್ಟ ಪರಿಣಾಮ ಬೀರಲಿದೆ ಗೊತ್ತಾ…!?

ನಾಳೆ ವರ್ಷದ ಕೊನೆಯ ಚಂದ್ರಗ್ರಹಣ – ಯಾವೆಲ್ಲ ರಾಶಿಯವರಿಗೆ ಕೆಟ್ಟ ಪರಿಣಾಮ ಬೀರಲಿದೆ ಗೊತ್ತಾ…!?
0

ನ್ಯೂಸ್ ಆ್ಯರೋ : ಕಾರ್ತಿಕ ಪೂರ್ಣಿಮೆಯ ದಿನವಾದ ನಾಳೆ ಚಂದ್ರಗ್ರಹಣ ಸಂಭವಿಸಲಿದ್ದು ಮಧ್ಯಾಹ್ನ 2.39ಕ್ಕೆ ಪ್ರಾರಂಭವಾಗುವ ಗ್ರಹಣ ಸಂಜೆ 6.19ರ ವರೆಗೆ ಇರಲಿದೆ. ಈ ಬಾರಿ ಸುಮಾರು ನಾಲ್ಕು ಗಂಟೆಗಳ ಕಾಲ ಗ್ರಹಣ ಸಂಭವಿಸಲಿದ್ದು, ಚಂದ್ರಗ್ರಹಣವಾಗಿರುವುದರಿಂದ ಚಂದ್ರನ ಕನಿಷ್ಠ ಭಾಗ ಮಾತ್ರ ಪರಿಣಾಮ ಬೀರಲಿದೆ.

ಚಂದ್ರಗ್ರಹಣದ ಪರಿಣಾಮ ಸಾಮಾಜಿಕವಾಗಿ, ಭೌಗೋಳಿಕವಾಗಿ ಮತ್ತು ವೈಯಕ್ತಿಕ ಸಮಸ್ಯೆಗಳನ್ನು ಕಾಣಿಸಿಕೊಳ್ಳುತ್ತದೆ. ಇನ್ನೂ ಗ್ರಹಣದ ಅವಧಿಯಲ್ಲಿ ದಾನ ಮತ್ತು ಆಧ್ಯಾತ್ಮಿಕ ಅಭ್ಯಾಸಕ್ಕೆ ಬಳಸಿಕೊಳ್ಳುವುದು ಉತ್ತಮ. ಆಧ್ಯಾತ್ಮಿಕ ದೃಷ್ಟಿಯಿಂದ ಈ ಬಾರಿ ಕಾರ್ತಿಕ ಪೂರ್ಣಿಮೆಯ ದಿನ ಬಹಳ ವಿಶೇಷವಾಗಿರಲಿದ್ದು, ಆರಾಧನೆ, ಸಾಧನೆ, ದಾನ ಇತ್ಯಾದಿಗಳಿಗೆ ಈ ವರ್ಷದಲ್ಲಿ ಶುಭವಾಗಲಿದೆ.

ಜ್ಯೋತಿಷಿ ವಿಭೋರ್ ಇಂದುಸುತ್ ಅವರ ಪ್ರಕಾರ, ‘ಈ ಚಂದ್ರಗ್ರಹಣವು ಖಗ್ರಾಸ ಚಂದ್ರಗ್ರಹಣವಾಗಿದ್ದು, ಈ ಚಂದ್ರಗ್ರಹಣವು ಅಪರಾಹ್ನ 2:39 ಕ್ಕೆ ಪ್ರಾರಂಭವಾಗಲಿದೆ ಮತ್ತು ಸಂಜೆ 6.19 ರವರೆಗೆ ಇರುತ್ತದೆ, ಅಂದರೆ ಸುಮಾರು ನಾಲ್ಕು ಗಂಟೆಗಳ ಗ್ರಹಣ ಗೋಚರಿಸಲಿದೆ. ಚಂದ್ರಗ್ರಹಣವು ಮಧ್ಯಾಹ್ನ ಪ್ರಾರಂಭವಾಗುತ್ತದೆ ಆದರೆ ಭಾರತದಲ್ಲಿ ಚಂದ್ರೋದಯವು ಸಂಜೆ ಸಂಭವಿಸಲಿದೆ. ಅಂದರೆ ಸುಮಾರು ನಾಲ್ಕು ಗಂಟೆಗಳ ಗ್ರಹಣ ಗೋಚರಿಸಲಿದ್ದು, ಭಾರತದಲ್ಲಿ ಸಂಜೆ 5.30 ರಿಂದ 6.20 ರ ಸುಮಾರಿಗೆ ಸ್ಪಷ್ಟವಾಗಿ ಗೋಚರಿಸುತ್ತದೆ’ ಎಂದಿದ್ದಾರೆ.

ಚಂದ್ರಗ್ರಹಣ ಸೂತಕವಿರುವುದರಿಂದ ನಾಳೆ ಬೆಳಿಗ್ಗೆ 8.29ರಿಂದ ಇಡೀ ದಿನ ದೇವಸ್ಥಾನಗಳನ್ನು ಮುಚ್ಚಲಾಗುತ್ತದೆ. ಸಂಜೆ 6.19ರ ನಂತರ ಗ್ರಹಣ ಮೋಕ್ಷದ ನಂತರ ದೇವಸ್ಥಾನದ ಬಾಗಿಲು ತೆರೆಯುತ್ತದೆ.

ಏನೆಲ್ಲಾ ಸಮಸ್ಯೆಗಳು ಉದ್ಭವಿಸುತ್ತದೆ?

ಚಂದ್ರಗ್ರಹಣದಿಂದಾಗಿ ಹೆಚ್ಚಿನವರಲ್ಲಿ ಮಾನಸಿಕ ಒತ್ತಡ, ಕಿರಿಕಿರಿ, ಖಿನ್ನತೆಯಂತಹ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆಗಳಿವೆ.ಮಾನಸಿಕ ಖಿನ್ನತೆಗೊಳಗಾದವರು ಈ ಸಮಯದಲ್ಲಿ ಹೆಚ್ಚಿನ ಕಾಳಜಿ ವಹಿಸುವುದು ಸೂಕ್ತ.

ಯಾವೆಲ್ಲ ರಾಶಿಯವರಿಗೆ ಕಂಟಕವಿದೆ?

1.ಮೇಷ:

ಈ ರಾಶಿಯವರು ಚಂದ್ರಗ್ರಹಣದ ಸಮಯದಲ್ಲಿ ಜಾಗರೂಕರಾಗಿರಬೇಕು. ಗಾಯದ ಸಮಸ್ಯೆಗಳಿಂದ ಬಳಲುತ್ತಿರಬಹುದು. ಸಂಧಿವಾತದಂತಹ ಸಮಸ್ಯೆಗಳಿರುವವರು ನೋವು ಹೆಚ್ಚಾಗಬಹುದು. ಈ ನಿಟ್ಟಿನಲ್ಲಿ ಎಚ್ಚರ ವಹಿಸುವುದು ಉತ್ತಮ.

2.ವೃಷಭ:

ಈ ರಾಶಿಯವರಿಗೆ ಕುಟುಂಬದ ವಿಷಯದಲ್ಲಿ ಸಮಸ್ಯೆಗಳನ್ನು ಎದುರಿಸಬಹುದು. ದಾಂಪತ್ಯದಲ್ಲಿ ಕಲಹ ಉಂಟಾಗಬಹುದು. ಹಣಕಾಸಿನ ವಿಷಯಗಳಿಗೆ ಕುಟುಂಬ ಸದಸ್ಯರೊಂದಿಗೆ ವಿವಾದಗಳು ಉಂಟಾಗಬಹುದು. ಈ ಸಮಯವನ್ನು ಬುದ್ಧಿವಂತಿಕೆಯಿಂದ ಹಾಗೂ ತಾಳ್ಮೆಯಿಂದ ನಿರ್ವಹಿಸಬೇಕು.

3. ಕನ್ಯಾ:

ಈ ರಾಶಿಯವರಿಗೆ ಆರ್ಥಿಕ ಸಂಕಷ್ಟ ಎದುರಾಗುವ ಮುನ್ಸೂಚನೆಯಿದೆ. ಆದಾಯಕ್ಕಿಂತ ಖರ್ಚು ಹೆಚ್ಚಾಗಿ, ಅವರು ಶಾರೀರಿಕ ಸಮಸ್ಯೆಗಳನ್ನೂ ಎದುರಿಸುವ ದೋಷಗಳು ಗೋಚರಿಸುತ್ತದೆ.

4.ಮಕರ:

ಈ ರಾಶಿಯವರಿಗೆ ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚಿನ ಒತ್ತಡವಿರುತ್ತದೆ. ಹಣಕಾಸಿನ ಸಮಸ್ಯೆಗಳನ್ನು ಎದುರು ನೋಡುತ್ತಾರೆ. ಶಾರೀರಿಕ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಅವಶ್ಯಕ.

ಗ್ರಹಣ ಸಂದರ್ಭದಲ್ಲಿ ಏನು ಮಾಡಬಾರದು?

  • ಚಂದ್ರ ಗ್ರಹಣದ ಸೂತಕದ ಸಂದರ್ಭದಲ್ಲಿ ಆಹಾರ ಸೇವನೆ ಒಳ್ಳೆಯದಲ್ಲ.
  • ಗರ್ಭಿಣಿ ಮಹಿಳೆಯರು ಮನೆಯಿಂದ ಹೊರಗೆ ಬರಬಾರದು.
  • ಅಡುಗೆ ಮಾಡಿ, ಆಹಾರ ಸೇವನೆಯನ್ನು ಗ್ರಹಣದ ವೇಳೆ ಮಾಡಬಾರದು.
News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..