1. Home
  2. Religious
  3. 27 ವರ್ಷಗಳ ಬಳಿಕ ದೀಪಾವಳಿಯಂದೇ ಸೂರ್ಯಗ್ರಹಣ – ಯಾವ ರಾಶಿಯವರಿಗೆಲ್ಲ ಇದು ಅಶುಭ ಗೊತ್ತಾ..‌!?

27 ವರ್ಷಗಳ ಬಳಿಕ ದೀಪಾವಳಿಯಂದೇ ಸೂರ್ಯಗ್ರಹಣ – ಯಾವ ರಾಶಿಯವರಿಗೆಲ್ಲ ಇದು ಅಶುಭ ಗೊತ್ತಾ..‌!?

27 ವರ್ಷಗಳ ಬಳಿಕ ದೀಪಾವಳಿಯಂದೇ ಸೂರ್ಯಗ್ರಹಣ – ಯಾವ ರಾಶಿಯವರಿಗೆಲ್ಲ ಇದು ಅಶುಭ ಗೊತ್ತಾ..‌!?
0

ನ್ಯೂಸ್ ಆ್ಯರೋ : ದೀಪಾವಳಿ ಎಂದಾಕ್ಷಣ ನೆನಪಾಗುವುದು ಉರಿಯುವ ದೀಪ, ಪೂಜೆ, ಪಟಾಕಿ ಸದ್ದು, ಜೊತೆಗೆ ಕಣ್ಣು ಹಾಯಿಸಿದಲ್ಲೆಲ್ಲಾ ಕಾಣುವ, ಕಣ್ಣಿಗೆ ಮುದ ನೀಡುವ ಗೂಡು ದೀಪಗಳು. ಹಬ್ಬದ ವಾತಾವರಣ ಕತ್ತಲೆಯಿಂದ ಬೆಳಕಿನೆಡೆಗೆ. ಅಜ್ಞಾನದಿಂದ ಜ್ಞಾನದೆಡೆಗೆ ಸಾಗುತ್ತಾ, ಸದಾ ಉರಿಯುತ್ತಾ ಎಲ್ಲರ ಪಾಲಿನ ಬೆಳಕಾಗಬೇಕು ಎಂಬ ಸಂದೇಶ ಸಾರುತ್ತದೆ.

ಆದರೆ ಬೆಳಕಿನ ಹಬ್ಬದ ಬೆನ್ನತ್ತಿ ಗ್ರಹಣವೂ ಬಂದಿದ್ದು, ದೀಪಾವಳಿಯ ಸಂಭ್ರಮದ ಸುತ್ತ ಸೂರ್ಯಗ್ರಹಣದ ಛಾಯೆ ಸುತ್ತುವರಿದಿದೆ.

ಹೌದು.. 2022ರ ಎರಡನೇ ಸೂರ್ಯಗ್ರಹಣ ಅ.25 ರಂದು ಅಂದರೆ ದೀಪಾವಳಿಯಂದೇ ಸಂಭವಿಸಲಿದ್ದು, ಇದು ಭಾರತದ ಮೊದಲ ಸೂರ್ಯಗ್ರಹಣವಾಗಲಿದೆ. ವರ್ಷದ ಮೊದಲ ಸೂರ್ಯಗ್ರಹಣ ಏಪ್ರಿಲ್ 30 ರಂದು ಸಂಭವಿಸಿತು. ಆದರೆ, ಭಾರತದಲ್ಲಿ ಕಾಣಿಸಿಕೊಂಡಿರಲಿಲ್ಲ. ಈ ಸೂರ್ಯಗ್ರಹಣವು ದೀಪಾವಳಿಯ ದಿನದಂದೇ ಗೋಚರವಾಗಲಿದ್ದು, ಬಹಳ ಮಹತ್ವದಾದ ಈ ಗ್ರಹಣವು 4 ಗಂಟೆ 3 ನಿಮಿಷಗಳ ಕಾಲ ಇರಲಿದೆ. ಈ ಸಮಯದಲ್ಲಿ ಸೂರ್ಯನು ತುಲಾ ರಾಶಿಯಲ್ಲಿರಲಿದ್ದು, 27 ವರ್ಷಗಳ ನಂತರ, ದೀಪಾವಳಿಯಂದು ಸೂರ್ಯ ಗ್ರಹಣ ಸಂಭವಿಸುತ್ತಿರುವುದು ವಿಶೇಷ.

ಕಾರ್ತಿಕ ಅಮಾವಾಸ್ಯೆಯಂದು ದೀಪಾವಳಿಯನ್ನು ಆಚರಿಸಲಾಗುತ್ತಿದ್ದು, ಈ ಬಾರಿ ಕಾರ್ತಿಕ ಅಮಾವಾಸ್ಯೆಯ ದಿನಾಂಕ ಅಂದರೆ ದೀಪಾವಳಿ ಅಕ್ಟೋಬರ್ 24 ಮತ್ತು 25 ರಂದು ಎರಡು ದಿನಗಳಲ್ಲಿದೆ. ಬೆಳಕಿನ ಹಬ್ಬದಂದು ಗೋಚರಿಸಲಿರುವ ಈ ಸೂರ್ಯಗ್ರಹಣ ಎಲ್ಲಾ 12 ರಾಶಿಚಕ್ರಗಳ ಮೇಲೆ ಪರಿಣಾಮ ಬೀರಲಿದ್ದು, ಪ್ರಮುಖವಾಗಿ 6 ​​ರಾಶಿಗಳ ಮೇಲೆ ಅಹಿತಕರ ಪರಿಣಾಮಗಳನ್ನು ಉಂಟುಮಾಡುತ್ತದೆ.

ಈ ದಿನದಂದು ಯಾವ ರಾಶಿಯವರ ಮೇಲೆ ಏನೆಲ್ಲಾ ಸಮಸ್ಯೆ ಉಂಟಾಗಲಿದೆ ಎಂಬ ಮಾಹಿತಿ ಇಲ್ಲಿದೆ.

ವೃಷಭ ರಾಶಿ : ಈ ರಾಶಿಯವರು ಗ್ರಹಣ ಕಾಲದಲ್ಲಿ ಆರೋಗ್ಯದ ಕಡೆ ವಿಶೇಷ ಗಮನ ಹರಿಸಬೇಕು. ಒತ್ತಡಕ್ಕೆ ಒಳಗಾಗಬೇಡಿ. ನಿಮ್ಮ ಮನಸ್ಸು ಯಾವುದೋ ವಿಷಯದ ಬಗ್ಗೆ ಗೊಂದಲಕ್ಕೊಳಗಾಗಬಹುದು. ಹಣಕಾಸಿನ ತೊಂದರೆಗಳನ್ನು ಎದುರಿಸಬೇಕಾಗಬಹುದು.

ತುಲಾ ರಾಶಿ : ತುಲಾ ರಾಶಿಯವರಿಗೆ ಸೂರ್ಯಗ್ರಹಣ ಹೆಚ್ಚು ಪರಿಣಾಮ ಬೀರಲಿದ್ದು, ಈ ಗ್ರಹಣವು ನಿಮ್ಮ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಹಣಕಾಸಿನ ನಷ್ಟವನ್ನು ಅನುಭವಿಸುವ ಸಾಧ್ಯತೆ ಇದ್ದು,. ವಾಹನ ಚಲಾಯಿಸುವಾಗ ಜಾಗರೂಕರಾಗಿರಿ.

ಮಿಥುನ ರಾಶಿ : ಗ್ರಹಣ ಕಾಲದಲ್ಲಿ ಮಿಥುನ ರಾಶಿಯವರು ತಮ್ಮ ಹಣಕಾಸಿನ ಬಗ್ಗೆ ಕಾಳಜಿ ವಹಿಸುವುದು ಅತ್ಯಗತ್ಯ. ಈ ಸಮಯದಲ್ಲಿ ವೆಚ್ಚಗಳು ತೀವ್ರವಾಗಿ ಹೆಚ್ಚಾಗಬಹುದು ಮತ್ತು ಆದಾಯದಲ್ಲಿ ಇಳಿಕೆ ಕಂಡುಬರಬಹುದು. ಸಂಗಾತಿಯೊಂದಿಗೆ ಘರ್ಷಣೆಯ ಸೂಚನೆಗಳಿವೆ.

ಕನ್ಯಾ ರಾಶಿ : ಈ ಸಮಯದಲ್ಲಿ ಕನ್ಯಾ ರಾಶಿಯ ವ್ಯಕ್ತಿಯೂ ಎಚ್ಚರದಿಂದಿರಬೇಕು. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಕುಟುಂಬ ಜೀವನಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಈ ರಾಶಿಯವರು ಎದುರಿಸಬೇಕಾಗಬಹುದು.

ವೃಶ್ಚಿಕ : ಈ ರಾಶಿಯವರಿಗೆ ಆರ್ಥಿಕ ಸಂಕಷ್ಟ ಎದುರಾಗಬಹುದು. ಧನಹಾನಿಯಾಗುವ ಸೂಚನೆಗಳಿದ್ದು, ಗ್ರಹಣ ಕಾಲದಲ್ಲಿ ಹಣದ ವಿಷಯಗಳಿಗೆ ವಿಶೇಷ ಗಮನ ಕೊಡಿ. ಹೂಡಿಕೆ ಮಾಡುವುದನ್ನು ತಪ್ಪಿಸಿ.

ಮಕರ : ಸೂರ್ಯಗ್ರಹಣವು ಮಕರ ರಾಶಿಯವರ ಆರೋಗ್ಯದ ಮೇಲೆ ಹೆಚ್ಚಿನ ಪ್ರಭಾವ ಬೀರಲಿದ್ದು, ಈ ಹಂತದಲ್ಲಿ ನೀವು ತಾಳ್ಮೆಯಿಂದಿರಬೇಕು. ಮನಸ್ಸಿಗೆ ಏನಾದರೂ ತೊಂದರೆಯಾಗಬಹುದು. ಗ್ರಹಣ ಪೂರ್ಣವಾಗುವವರೆಗೆ ಎಚ್ಚರದಿಂದಿರಿ.

ಗ್ರಹಣ ಏಕೆ ಉಂಟಾಗುತ್ತದೆ?

ಗ್ರಹಣಗಳು ಅಪರೂಪವೇನಲ್ಲ. ಪ್ರತಿ 6 ತಿಂಗಳಿಗೊಮ್ಮೆ ಉಂಟಾಗುತ್ತವೆ. ಅದರಲ್ಲಿ ಸೂರ್ಯ ಗ್ರಹಣವಾದರೆ ಭೂಮಿಯ ಕೆಲವೇ ಪ್ರದೇಶಕ್ಕೆ ಸೀಮಿತವಾದರೆ ಚಂದ್ರ ಗ್ರಹಣ ಅರ್ಧ ಭೂಮಿಗೆ ಗೋಚರಿಸಬಹುದು. ಪ್ರಖ್ಯಾತ ಖಗೋಳ ಶಾಸ್ತ್ರಜ್ಞ ಪ್ರೊ. ಜಯಂತ್‌ ವಿ. ನಾರ್ಲೀಕರ್‌ ತಮ್ಮ ‘ಸೆವೆನ್‌ ವಂಡರ್ಸ್‌ ಆಫ್‌ ಕಾಸ್ಮಸ್‌’ ಎಂಬ ಪುಸ್ತಕದಲ್ಲಿ ಭೂಮಿಯಲ್ಲಿ ನಡೆಯುವ ಈ ಗ್ರಹಣಗಳು ಒಂದು ವಿಸ್ಮಯವೇ ಎಂದು ಹೇಳಿದ್ದಾರೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..