ಜಗತ್ತಿನ ಶ್ರೀಮಂತ ಕ್ರಿಕೆಟ್ ಮಂಡಳಿ ಬಿಸಿಸಿಐನಿಂದ ಕ್ರಾಂತಿಕಾರಿ ನಿರ್ಧಾರ – ಪುರುಷ ಮತ್ತು ಮಹಿಳಾ ಆಟಗಾರರಿಗೆ ಇನ್ನು ಮುಂದೆ ಸಮಾನ ವೇತನ

ನ್ಯೂಸ್ ಆ್ಯರೋ : ಕ್ರಿಕೆಟ್ ಜಗತ್ತಿನ ಎಲ್ಲಾ ದೇಶದ ಜನರ ಬಹಳ ಅಚ್ಚುಮೆಚ್ಚಿನ ಕ್ರೀಡೆ. ಈ ಕ್ರೀಡೆಯನ್ನು ಪುರುಷರಷ್ಟೇ, ಮಹಿಳೆಯರೂ ಕೂಡ ಇಷ್ಟಪಡುತ್ತಾರೆ.ಮೊದಮೊದಲು ಭಾರತದಲ್ಲಿ ಪುರುಷರು ಮಾತ್ರವೇ ಆಡುತಿದ್ದರೆ, ಈಗ ಮಹಿಳೆಯರೂ ಕೂಡ ನಾವೇನು ಪುರುಷರಿಗಿಂತ ಕಡಿಮೆ ಇಲ್ಲ ಎಂಬಂತೆ ಕ್ರಿಕೆಟ್ ಆಡುತ್ತಾರೆ. ಅಂತೆಯೇ ಭಾರತದಲ್ಲಿ ಕೂಡ ಮಹಿಳಾ ಕ್ರಿಕೆಟ್ ತಂಡವಿದೆ. ಆದರೆ ಅವರಿಗೆ ಪುರುಷ ಆಟಗಾರರಷ್ಟು ಸಂಭಾವನೆ ಇರಲಿಲ್ಲ.

ಇದೀಗ ಭಾರತೀಯ ಮಹಿಳಾ ಕ್ರಿಕೆಟ್ ಆಟಗಾರರಿಗೆ ಮತ್ತು ಪುರುಷ ಆಟಗಾರರಿಗೆ ಬಿಸಿಸಿಐ ಸಮಾನ ವೇತನವನ್ನು ಘೋಷಣೆ ಮಾಡಿದೆ. ಕ್ರೀಡೆಯಲ್ಲಿ ಲಿಂಗ ತಾರತಮ್ಯ ಹೋಗಲಾಡಿಸುವ ನಿಟ್ಟಿನಲ್ಲಿ ಈ ಐತಿಹಾಸಿಕ ನಿರ್ಧಾರ ಕೈಗೊಂಡಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ “ತಾರತಮ್ಯವನ್ನು ಹೋಗಲಾಡಿಸುವ BCCI ಯ ಮೊದಲ ಹೆಜ್ಜೆಯನ್ನು ಘೋಷಿಸಲು ನನಗೆ ಸಂತೋಷವಾಗಿದೆ. ನಾವು ನಮ್ಮ ಒಪ್ಪಂದದಡಿಯ ಮಹಿಳಾ ಕ್ರಿಕೆಟಿಗರಿಗೆ ವೇತನ ಇಕ್ವಿಟಿ ನೀತಿಯನ್ನು ಜಾರಿಗೆ ತರುತ್ತಿದ್ದೇವೆ. ನಾವು ಲಿಂಗ ಸಮಾನತೆಯ ಹೊಸ ಯುಗಕ್ಕೆ ಸಾಗುತ್ತಿರುವ ಈ ಸಂದರ್ಭದಲ್ಲಿ ಭಾರತೀಯ ಕ್ರಿಕೆಟ್‌ನಲ್ಲಿ ಪುರುಷ ಮತ್ತು ಮಹಿಳಾ ಕ್ರಿಕೆಟಿಗರಿಗೆ ಪಂದ್ಯ ಶುಲ್ಕ ಒಂದೇ ಆಗಿರುತ್ತದೆ” ಎಂದು ಶಾ ಟ್ವೀಟರ್ ನಲ್ಲಿ ಟ್ವಿಟ್ ಮಾಡಿದ್ದಾರೆ.
“ಮಹಿಳಾ ಕ್ರಿಕೆಟಿಗರಿಗೆ ಅವರ ಪುರುಷ ಸಹವರ್ತಿಗಳಿಗೆ ಸಮಾನವಾದ ಪಂದ್ಯ ಶುಲ್ಕವನ್ನು ನೀಡಲಾಗುತ್ತದೆ. ಟೆಸ್ಟ್ (ರೂ 15 ಲಕ್ಷಗಳು), ODI (ರೂ 6 ಲಕ್ಷಗಳು), T20I (ರೂ 3 ಲಕ್ಷಗಳು). ಈಕ್ವಿಟಿ ನಮ್ಮ ಮಹಿಳಾ ಕ್ರಿಕೆಟಿಗರಿಗೆ ನಮ್ಮ ಬದ್ಧತೆಯಾಗಿದೆ ಮತ್ತು ಅಪೆಕ್ಸ್ ಕೌನ್ಸಿಲ್ ಅವರ ಬೆಂಬಲಕ್ಕಾಗಿ, ನಾನು ಅವರಿಗೆ ಧನ್ಯವಾದ ಹೇಳುತ್ತೇನೆ”ಎಂದು ಅವರು ಹೇಳಿದ್ದಾರೆ.