1. Home
  2. Sports
  3. News
  4. T20 WC : ಇಂಗ್ಲೆಂಡ್ ವಿರುದ್ಧ ಮುಗ್ಗರಿಸಿದ ಟೀಂ ಇಂಡಿಯಾ – ಪಾಂಡ್ಯ ಸಾಹಸ ವ್ಯರ್ಥ, 10 ವಿಕೆಟ್ ಗಳಿಂದ ಗೆದ್ದ ಆಂಗ್ಲರು ಫೈನಲ್ ಗೆ ಲಗ್ಗೆ

T20 WC : ಇಂಗ್ಲೆಂಡ್ ವಿರುದ್ಧ ಮುಗ್ಗರಿಸಿದ ಟೀಂ ಇಂಡಿಯಾ – ಪಾಂಡ್ಯ ಸಾಹಸ ವ್ಯರ್ಥ, 10 ವಿಕೆಟ್ ಗಳಿಂದ ಗೆದ್ದ ಆಂಗ್ಲರು ಫೈನಲ್ ಗೆ ಲಗ್ಗೆ

T20 WC : ಇಂಗ್ಲೆಂಡ್ ವಿರುದ್ಧ ಮುಗ್ಗರಿಸಿದ ಟೀಂ ಇಂಡಿಯಾ – ಪಾಂಡ್ಯ ಸಾಹಸ ವ್ಯರ್ಥ, 10 ವಿಕೆಟ್ ಗಳಿಂದ ಗೆದ್ದ ಆಂಗ್ಲರು ಫೈನಲ್ ಗೆ ಲಗ್ಗೆ
0

ನ್ಯೂಸ್ ಆ್ಯರೋ : ಇಂದು ನಡೆದ ಟಿ20 ವಿಶ್ವಕಪ್’ನ 2ನೇ ಸೆಮಿಫೈನಲ್ ಸೆಣಸಾಟದಲ್ಲಿ ಭಾರತ ತಂಡವನ್ನು ಮಣಿಸಿ ಇಂಗ್ಲೆಂಡ್ ಫೈನಲ್’ಗೆ ಲಗ್ಗೆ ಇಟ್ಟಿದೆ. ಭಾರತ ನೀಡಿದ 169 ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡ ವಿಕೆಟ್ ನಷ್ಟವಿಲ್ಲದೆ 170 ರನ್ ಗಳಿಸಿ ವಿಜಯದ ಪತಾಕೆ ಹಾರಿಸಿ, ಫೈನಲ್ ಹಂತಕ್ಕೆ ತೇರ್ಗಡೆಯಾಯಿತು.

ಆರಂಭಿಕ ಆಟಗಾರರಾಗಿ ಆಗಮಿಸಿದ ಅಲೆಕ್ಸ್ ಹೇಲ್ಸ್ ಮತ್ತು ಜೋಸ್ ಬಟ್ಲರ್ ಜೋಡಿ ಶತಕದ ಜೊತೆಯಾಟದಿಂದಾಗಿ ಇಂಗ್ಲೆಂಡ್ ಗೆಲುವಿನ ಪ್ರಮುಖ ರೂವಾರಿಗಳಾಗಿ ಹೊರಹೊಮ್ಮಿದರು.

ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತದ ಆಟಗಾರರು, ನಿಗದಿತ 20 ಓವರ್’ನಲ್ಲಿ 6 ವಿಕೆಟ್ ನಷ್ಟಕ್ಕೆ 168 ರನ್ ಸಂಪಾದಿಸಿ ಗಮನ ಸೆಳೆದಿದ್ದರು.

ಇಂಗ್ಲೆಂಡ್ ತಂಡದ ಅಭೂತಪೂರ್ವ ಈ ಗೆಲುವಿನೊಂದಿಗೆ ನವೆಂಬರ್ 13ರಂದು ನಡೆಯುವ ಫೈನಲ್ ಹಣಾಹಣಿಯಲ್ಲಿ ಇಂಗ್ಲೆಂಡ್ ತಂಡ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಅತ್ತ ಹೀನಾಯವಾಗಿ ಸೋತ ರೋಹಿತ್ ಪಡೆ ಕೂಟದಿಂದಲೇ ನಿರ್ಗಮಿಸಿದೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..