1. Home
  2. Sports
  3. News
  4. T20 WC : ವಿಶ್ವಕಪ್ ಗೆದ್ದ ಸಂಭ್ರಮಾಚರಣೆಯ ವೇಳೆ ಅದಿಲ್ ರಶೀದ್, ಮೊಯಿನ್ ಅಲಿಯನ್ನು ಹೊರಕಳಿಸಿದ ನಾಯಕ ಬಟ್ಲರ್ – ವೈರಲ್ ಆಯ್ತು ವಿಡಿಯೋ, ಕಾರಣವೇನು ಗೊತ್ತಾ…!?

T20 WC : ವಿಶ್ವಕಪ್ ಗೆದ್ದ ಸಂಭ್ರಮಾಚರಣೆಯ ವೇಳೆ ಅದಿಲ್ ರಶೀದ್, ಮೊಯಿನ್ ಅಲಿಯನ್ನು ಹೊರಕಳಿಸಿದ ನಾಯಕ ಬಟ್ಲರ್ – ವೈರಲ್ ಆಯ್ತು ವಿಡಿಯೋ, ಕಾರಣವೇನು ಗೊತ್ತಾ…!?

T20 WC : ವಿಶ್ವಕಪ್ ಗೆದ್ದ ಸಂಭ್ರಮಾಚರಣೆಯ ವೇಳೆ ಅದಿಲ್ ರಶೀದ್, ಮೊಯಿನ್ ಅಲಿಯನ್ನು ಹೊರಕಳಿಸಿದ ನಾಯಕ ಬಟ್ಲರ್ – ವೈರಲ್ ಆಯ್ತು ವಿಡಿಯೋ, ಕಾರಣವೇನು ಗೊತ್ತಾ…!?
0

ನ್ಯೂಸ್ ಆ್ಯರೋ : ಏಕದಿನ ವಿಶ್ವಕಪ್ ಗೆದ್ದ ಬಳಿಕ ಇದೀಗ ಟಿ -20 ವಿಶ್ವಕಪ್ ಕೂಡ ಗೆದ್ದಿರುವ ಇಂಗ್ಲೆಂಡ್ ನಿಗದಿತ ಓವರ್ ಗಳ ಸಾಮ್ರಾಟನಾಗಿ ಮೆರೆದಿದೆ. ಈ ಮಧ್ಯೆ ಪಾಕ್ ವಿರುದ್ಧ ಫೈನಲ್ ನಲ್ಲಿ ಗೆದ್ದ ಇಂಗ್ಲೆಂಡ್ ತಂಡ ಸಂಭ್ರಮಾಚರಣೆಯಲ್ಲಿ ತೊಡಗಿಕೊಂಡಿದ್ದ ವೇಳೆ ನಾಯಕ ಜೋಸ್ ಬಟ್ಲರ್ ಅವರು ತಂಡದ ಸಹ ಆಟಗಾರರಾದ ಮೊಯಿನ್ ಅಲಿ ಹಾಗೂ ಆದಿಲ್ ರಶೀದ್ ಅವರನ್ನು ಸಂಭ್ರಮಾಚರಣೆಯಿಂದ ಹೊರ ಹೋಗುವಂತೆ ಹೇಳಿರುವ ವಿಡಿಯೋ ವೈರಲ್ ಆಗಿದೆ.

ಪಾಕ್ ವಿರುದ್ಧ ಫೈನಲ್ ಪಂದ್ಯದಲ್ಲಿ 5 ವಿಕೆಟ್‌ಗಳ ಭರ್ಜರಿ ಜಯದೊಂದಿಗೆ ಇಂಗ್ಲೆಂಡ್ 2 ನೇ ಬಾರಿ ಟಿ 20 ವಿಶ್ವಕಪ್‌ಗೆ ಮುತ್ತಿಕ್ಕಿತು. ಈ ಗೆಲುವಿಗಾಗಿ ಇಂಗ್ಲೆಂಡ್ ತಂಡದ ಪ್ರತಿಯೊಬ್ಬ ಆಟಗಾರರು ಪೂರ್ಣ ಪ್ರಮಾಣದಲ್ಲಿ ಶ್ರಮಿಸಿದ್ದರು. ಹೀಗಾಗಿ ಈ ಗೆಲುವು ಎಲ್ಲರ ಖುಷಿಯನ್ನು ಇಮ್ಮಡಿಗೊಳಿಸಿತ್ತು. ಆದ್ರೆ ಈ ಸಂಭ್ರಮ ವೇಳೆಬಟ್ಲರ್ ಸಹ ಆಟಗಾರರಿಬ್ಬರನ್ನು ಹೊರ ಹೋಗಿ ಎಂದು ಹೇಳಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

ಆದರೆ ಈ ವಿಡಿಯೋ ನೋಡಿದ ಅನೇಕರು ಬಟ್ಲರ್ ನಡೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಹೌದು, ಬಟ್ಲರ್ ನಡೆಯನ್ನು ಯಾರು ಟೀಕಿಸದೆ ಹೊಗಳಿದ್ದಾರೆ. ಯಾಕೆ ಅಂದರೆ ತಂಡದ ಸಹ ಆಟಗಾರರಾದ ಮೊಯಿನ್ ಅಲಿ ಹಾಗೂ ಆದಿಲ್ ರಶೀದ್, ಇಸ್ಲಾಂ ಧರ್ಮಕ್ಕೆ ಸೇರಿದವರು. ಈ ಧರ್ಮದಲ್ಲಿ ಇವರಿಗೆ ಶಾಂಪೇನ್ (ಮದ್ಯ) ನಿಷೇಧ.

ಹಾಗಾಗಿ ಇಸ್ಲಾಂ ಧರ್ಮದಲ್ಲಿ ಮದ್ಯ ನಿಷೇಧ ಎಂಬುವುದನ್ನು ಅರಿತಿದ್ದ ಬಟ್ಲರ್, ಸಂಭ್ರಮಾಚರಣೆ ವೇಳೆ ಮೊಯಿನ್ ಅಲಿ ಹಾಗೂ ಆದಿಲ್ ರಶೀದ್ ಅವರನ್ನು ಹೊರ ಕಳುಹಿಸಿದ್ದಾರೆ. ನಂತರ ಎಲ್ಲರೂ ಸೇರಿಕೊಂಡು ಶಾಂಪೇನ್ ಬಾಟಲ್ ತೆರೆದು ವಿಶ್ವಕಪ್ ಗೆದ್ದ ಸಂಭ್ರಮಾಚರಣೆ ಮುಂದುವರಿಸಿದ್ದಾರೆ. ಸದ್ಯ ನಾಯಕನಾದವ ಹೀಗಿರಬೇಕು, ಬಟ್ಲರ್ ಒಬ್ಬ ನಿಜವಾಗಿಯೂ ಅದ್ಭುತ ನಾಯಕ ಎಂದು ನೆಟ್ಟಿಗರು ಕೊಂಡಾಡಿದ್ದಾರೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..