1. Home
  2. Sports
  3. News
  4. ಮಹಿಳಾ ಏಷ್ಯಾ ಕಪ್ ಗೆದ್ದು ಬೀಗಿದ ಭಾರತ – 2022 : ಫೈನಲ್ ನಲ್ಲಿ ಶ್ರೀಲಂಕಾದ ಎದುರು ಭರ್ಜರಿ ಜಯ, ಗೆಲುವು ತಂದಿತ್ತ ಬೌಲರ್ ಗಳು

ಮಹಿಳಾ ಏಷ್ಯಾ ಕಪ್ ಗೆದ್ದು ಬೀಗಿದ ಭಾರತ – 2022 : ಫೈನಲ್ ನಲ್ಲಿ ಶ್ರೀಲಂಕಾದ ಎದುರು ಭರ್ಜರಿ ಜಯ, ಗೆಲುವು ತಂದಿತ್ತ ಬೌಲರ್ ಗಳು

ಮಹಿಳಾ ಏಷ್ಯಾ ಕಪ್ ಗೆದ್ದು ಬೀಗಿದ ಭಾರತ – 2022 : ಫೈನಲ್ ನಲ್ಲಿ ಶ್ರೀಲಂಕಾದ ಎದುರು ಭರ್ಜರಿ ಜಯ, ಗೆಲುವು ತಂದಿತ್ತ ಬೌಲರ್ ಗಳು
0

ನ್ಯೂಸ್ ಆ್ಯರೋ : ಬಾಂಗ್ಲಾದೇಶದ ಸಿಲ್ಹೆಟ್​ನಲ್ಲಿ ನಡೆದ ಮಹಿಳಾ ಏಷ್ಯಾಕಪ್​ ಫೈನಲ್​ನಲ್ಲಿ ಭಾರತದ ವನಿತೆಯರು ಶ್ರೀಲಂಕಾ ಮಹಿಳಾ ತಂಡದ ವಿರುದ್ಧ ಜಯಗಳಿಸಿದ್ದು, ಏಷ್ಯಾ ಕಪ್ 2022 ಗೆದ್ದಿದ್ದಾರೆ.

ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡದ ನಾಯಕಿ ಚಾಮರಿ ಅಟ್ಟಪಟ್ಟು ಬ್ಯಾಟಿಂಗ್ ಆಯ್ದುಕೊಂಡಿದ್ದರು. ಆದರೆ ಟೀಮ್ ಇಂಡಿಯಾ ವನಿತೆಯರ ಸಾಂಘಿಕ ದಾಳಿಯಿಂದಾಗಿ ಲಂಕಾ ತಂಡವು ಉತ್ತಮ ಆರಂಭ ಪಡೆಯಲು ಸಾಧ್ಯವಾಗಿರಲಿಲ್ಲ. ರನೌಟ್ ಮೂಲಕ ಮೊದಲ ವಿಕೆಟ್ ಪಡೆದ ಟೀಮ್ ಇಂಡಿಯಾ ಆ ಬಳಿಕ ಅತ್ಯುತ್ತಮ ದಾಳಿ ಸಂಘಟಿಸುವಲ್ಲಿ ಯಶಸ್ವಿಯಾಗಿದ್ದರು. ಪರಿಣಾಮ ಕೇವಲ 18 ರನ್​ಗಳಿಗೆ ಶ್ರೀಲಂಕಾ ತಂಡವು ಅಗ್ರ ಕ್ರಮಾಂಕದ 6 ಬ್ಯಾಟರ್​ಗಳನ್ನು ಕಳೆದುಕೊಂಡಿತು.

ಚಾಮರಿ ಅಟ್ಟಪಟ್ಟು (8), ಅನುಷ್ಕಾ (2), ಮಾದವಿ (1), ನಿಲಾಕ್ಷಿ (6), ಹಾಸಿನಿ (0) ಹಾಗು ಕವಿಶಾ (1) ಒಂದಂಕಿ ರನ್​ಗಳಿಸಿ ಪೆವಿಲಿಯನ್​ಗೆ ಮರಳಿದರು. ಇತ್ತ ಭರ್ಜರಿ ದಾಳಿ ಸಂಘಟಿಸಿದ ರೇಣುಕಾ ಸಿಂಗ್ 3 ವಿಕೆಟ್ ಉರುಳಿಸಿ ಮಿಂಚಿದ್ದರು. ಪರಿಣಾಮ ಮೊದಲ 10 ಓವರ್​ಗಳಲ್ಲಿ ಶ್ರೀಲಂಕಾ ತಂಡದ ಮೊತ್ತ 30 ರ ಗಡಿದಾಟಿರಲಿಲ್ಲ.

ಅಂತಿಮ ಹಂತದಲ್ಲಿ ರಣಸಿಂಘೆ ಅಜೇಯ 18 ಹಾಗೂ ಅಚಿನಿ ಅಜೇಯ 6 ರನ್​ ಬಾರಿಸುವ ಮೂಲಕ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ ತಂಡದ ಮೊತ್ತವನ್ನು 69 ಕ್ಕೆ ತಂದು ನಿಲ್ಲಿಸಿದರು.

ಟೀಮ್ ಇಂಡಿಯಾ ಪರ ರೇಣುಕಾ ಸಿಂಗ್ 3 ಓವರ್​ಗಳಲ್ಲಿ ಕೇವಲ 5 ರನ್ ನೀಡಿ 3 ವಿಕೆಟ್ ಪಡೆದರೆ, ರಾಜೇಶ್ವರಿ ಗಾಯಕ್ವಾಡ್ ಹಾಗೂ ಸ್ನೇಹ್ ರಾಣಾ ತಲಾ 2 ವಿಕೆಟ್ ಕಬಳಿಸಿ ಮಿಂಚಿದರು.

70 ರನ್ ಗಳ ಗುರಿ ಬೆಂಬತ್ತಿದ ಭಾರತ ತಂಡಕ್ಕೆ ಸ್ಮೃತಿ ಮಂದಾನ ಬಿರುಸಿನ ಆರಂಭ ಒದಗಿಸಿದರು. ಇನ್ನೊಬ್ಬ ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮ ಮತ್ತು ವನ್ ಡೌನ್ ನಲ್ಲಿ ಆಡಳಿಲಿದ ಜೆಮಿಮಾ ರೋಡ್ರಿಗಸ್ ಅಲ್ಪ ಮೊತ್ತಕ್ಕೆ ಔಟಾಗಿ ನಿರಾಸೆ ಮೂಡಿಸಿದರು.

ಮಧ್ಯಮ ಕ್ರಮಾಂಕದಲ್ಲಿ ಆಡಳಿಲಿದ ನಾಯಕಿ ಹರ್ಮನ್ ಪ್ರೀತ್ ಕೌರ್ ಸ್ಮೃತಿ ಮಂದಾನ ಜೊತೆ ಸೇರಿ ಭಾರತದ ಗೆಲುವನ್ನು ಸಾರಿದರು.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..