1. Home
  2. Sports
  3. News
  4. IPL 2023 : ಮಿನಿ ಹರಾಜಿಗೆ ಕ್ಷಣಗಣನೆ ಆರಂಭ – ತಂಡದಿಂದ ಹೊರಬಿದ್ದ ಪೊಲಾರ್ಡ್, ಮಯಾಂಕ್ : ಹತ್ತು ತಂಡಗಳಿಂದ ರಿಲೀಸ್ ಆಗಲಿರುವ ಆಟಗಾರರ ಪಟ್ಟಿ ಹೀಗಿದೆ..

IPL 2023 : ಮಿನಿ ಹರಾಜಿಗೆ ಕ್ಷಣಗಣನೆ ಆರಂಭ – ತಂಡದಿಂದ ಹೊರಬಿದ್ದ ಪೊಲಾರ್ಡ್, ಮಯಾಂಕ್ : ಹತ್ತು ತಂಡಗಳಿಂದ ರಿಲೀಸ್ ಆಗಲಿರುವ ಆಟಗಾರರ ಪಟ್ಟಿ ಹೀಗಿದೆ..

IPL 2023 : ಮಿನಿ ಹರಾಜಿಗೆ ಕ್ಷಣಗಣನೆ ಆರಂಭ – ತಂಡದಿಂದ ಹೊರಬಿದ್ದ ಪೊಲಾರ್ಡ್, ಮಯಾಂಕ್ : ಹತ್ತು ತಂಡಗಳಿಂದ ರಿಲೀಸ್ ಆಗಲಿರುವ ಆಟಗಾರರ ಪಟ್ಟಿ ಹೀಗಿದೆ..
0

ನ್ಯೂಸ್ ಆ್ಯರೋ : ಮುಂದಿನ ತಿಂಗಳ 23 ರಂದು ಕೇರಳದ ಕೊಚ್ಚಿಯಲ್ಲಿ 2023ರ ಐಪಿಎಲ್ ಆಟಗಾರರ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದ್ದು, ಐಪಿಎಲ್ ಮಾಲಕರು ತಮಗೆ ಬೇಡದ ಆಟಗಾರರ ಪಟ್ಟಿಯನ್ನು ರಿಲೀಸ್ ಮಾಡಿದ್ದಾರೆ.‌ ಇದರಲ್ಲಿ ಹಲವು ಅಚ್ಚರಿಗಳು ಕಂಡು ಬಂದಿದ್ದು, ಮುಂಬೈ ಇಂಡಿಯನ್ಸ್ ವೆಸ್ಟ್ ಇಂಡೀಸ್ ನ ದೈತ್ಯ ಪ್ರತಿಭೆ ಪೊಲಾರ್ಡ್ ಅವರನ್ನು ಕೈಬಿಟ್ಟು ಅಚ್ಚರಿ ಮೂಡಿಸಿದೆ.

ಕಳೆದ ಬಾರಿ ಮೆಗಾ ಹರಾಜು ನಡೆದಿರುವ ಹಿನ್ನಲೆಯಲ್ಲಿ, ಈ ಬಾರಿ ಆಯಾ ತಂಡವು ಬಿಡುಗಡೆ ಮಾಡುವ ಆಟಗಾರರ ಸ್ಥಾನಕ್ಕಾಗಿ ಹರಾಜು ಪ್ರಕ್ರಿಯೆ ನಡೆಯಲಿದೆ. ಹರಾಜಿಗೂ ಮುನ್ನ ಎಲ್ಲಾ ತಂಡಗಳು ಉಳಿಸಿಕೊಳ್ಳುವ ಹಾಗೂ ಬಿಡುಗಡೆ ಮಾಡುವ ಆಟಗಾರರ ಪಟ್ಟಿಯನ್ನು ಐಪಿಎಲ್ ಆಡಳಿತ ಮಂಡಳಿಗೆ ಸಲ್ಲಿಸಬೇಕಾಗಿತ್ತು.

ಸದ್ಯ ಹತ್ತು ಫ್ರಾಂಚೈಸಿಗಳು ತಮ್ಮ ತಂಡಗಳನ್ನು ಮರುನಿರ್ಮಾಣ ಮಾಡಲಿವೆ. ಹತ್ತು ತಂಡಗಳು ಈಗಾಗಲೇ ಯಾವ್ಯಾವ ಆಟಗಾರರನ್ನು ತಂಡದಿಂದ ಕೈಬಿಡಬೇಕು ಎನ್ನುವ ಪಟ್ಟಿಯನ್ನು ಮಾಡಿಕೊಂಡಿವೆ.

ಪಂಜಾಬ್ ಕಿಂಗ್ಸ್ ಕೂಡ ತಮ್ಮ ತಂಡದ ನಾಯಕರಾಗಿದ್ದ ಮಯಾಂಕ್ ಅಗರ್ವಾಲ್ ಅವರನ್ನು ತಂಡದಿಂದ ಕೈ ಬಿಟ್ಟರೆ, ಕೊಲ್ಕತ್ತಾ ತಂಡವು ವೆಂಕಟೇಶ್ ಅಯ್ಯರ್ ಅವರನ್ನು ಕೈ ಬಿಡುವ ಮೂಲಕ ಅಚ್ಚರಿ ಮೂಡಿಸಿವೆ.

ತಂಡದಿಂದ ಕೈಬಿಡಲಿರುವ ಆಟಗಾರರ ಪಟ್ಟಿ ಹೀಗಿದೆ..

  1. ರಾಯಲ್ ಚಾಲೆಂಜರ್ಸ್ ಬೆಂಗಳೂರು : ಸಿದ್ಧಾರ್ಥ್ ಕೌಲ್, ಕರ್ಣ್ ಶರ್ಮಾ ಡೇವಿಡ್ ವಿಲ್ಲಿ, ಆಕಾಶ್ ದೀಪ್
  2. ಚೆನ್ನೈ ಸೂಪರ್ ಕಿಂಗ್ಸ್: ಕ್ರಿಸ್ ಜೋರ್ಡಾನ್, ಆಡಮ್ ಮಿಲ್ನೆ, ನಾರಾಯಣ್ ಜಗದೀಸನ್, ಮಿಚೆಲ್ ಸ್ಯಾಂಟ್ನರ್.
  3. ಮುಂಬೈ ಇಂಡಿಯನ್ಸ್: ಫ್ಯಾಬಿಯನ್ ಅಲೆನ್, ಕೀರಾನ್ ಪೊಲಾರ್ಡ್, ಟೈಮಲ್ ಮಿಲ್ಸ್, ಮಯಾಂಕ್ ಮಾರ್ಕಂಡೆ, ಹೃತಿಕ್ ಶೋಕೀನ್.
  4. ಗುಜರಾತ್ ಟೈಟಾನ್ಸ್: ಮ್ಯಾಥ್ಯೂ ವೇಡ್, ವಿಜಯ್ ಶಂಕರ್, ಗುರುಕೀರತ್ ಮನ್ ಸಿಂಗ್, ಜಯಂತ್ ಯಾದವ್, ಪ್ರದೀಪ್ ಸಾಂಗ್ವಾನ್, ನೂರ್ ಅಹ್ಮದ್, ಸಾಯಿ ಕಿಶೋರ್, ವರುಣ್ ಆರೋನ್
  5. ದೆಹಲಿ ಕ್ಯಾಪಿಟಲ್ಸ್: ಶಾರ್ದೂಲ್ ಠಾಕೂರ್, ಟಿಮ್ ಸಿಫೆರ್ಟ್, ಕಮಲೇಶ್ ನಾಗರಕೋಟಿ, ಕೆಎಸ್ ಭರತ್, ಮನ್ದೀಪ್ ಸಿಂಗ್, ರಿಪಾಲ್ ಪಟೇಲ್, ಚೇತನ್ ಸಕರಿಯಾ
  6. ರಾಜಸ್ಥಾನ್ ರಾಯಲ್ಸ್: ನವದೀಪ್ ಸೈನಿ, ಡೇರಿಲ್ ಮಿಚೆಲ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಕಾರ್ಬಿನ್ ಬಾಷ್
  7. ಪಂಜಾಬ್ ಕಿಂಗ್ಸ್: ಒಡಿಯನ್ ಸ್ಮಿತ್, ಮಯಾಂಕ್ ಅಗರ್ವಾಲ್, ಶಾರುಖ್ ಖಾನ್, ಇಶಾನ್ ಪೊರೆಲ್, ಬೆನ್ನಿ ಹೋವೆಲ್, ಬಲ್ತೇಜ್ ಸಿಂಗ್ ಧಂಡಾ, ರಿಟಿಕ್ ಚಟರ್ಜಿ, ರಿಷಿ ಧವನ್
  8. ಲಕ್ನೋ ಸೂಪರ್ ಜೈಂಟ್ಸ್: ಕೈಲ್ ಮೇಯರ್ಸ್, ದುಷ್ಮಂತ ಚಮೀರಾ, ಮನೀಶ್ ಪಾಂಡೆ, ಶಹಬಾಜ್ ನದೀಮ್, ಅಂಕಿತ್ ರಾಜ್‌ಪೂತ್
  9. ಸನ್ ರೈಸರ್ಸ್ ಹೈದರಾಬಾದ್: ರೊಮಾರಿಯೋ ಶೆಫರ್ಡ್, ಜಗದೀಶ ಸುಚಿತ್, ಕಾರ್ತಿಕ್ ತ್ಯಾಗಿ, ಸೀನ್ ಅಬಾಟ್, ಶಶಾಂಕ್ ಸಿಂಗ್, ಫಜಹಕ್ ಫಾರೂಕಿ, ಶ್ರೇಯಸ್ ಗೋಪಾಲ್
  10. ಕೋಲ್ಕತ್ತಾ ನೈಟ್ ರೈಡರ್ಸ್: ಶಿವಂ ಮಾವಿ, ವೆಂಕಟೇಶ್ ಅಯ್ಯರ್, ಮೊಹಮ್ಮದ್ ನಬಿ, ಚಾಮಿಕಾ ಕರುಣಾರತ್ನೆ, ರಮೇಶ್ ಕುಮಾರ್, ಅಜಿಂಕ್ಯ ರಹಾನೆ, ಆರೋನ್ ಫಿಂಚ್
News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..