ಸಾನಿಯಾ– ಶೋಯೆಬ್ ದಾಂಪತ್ಯದಲ್ಲಿ ಬಿರುಕು: ತಾರಾ ದಂಪತಿಯ ಮಧ್ಯೆ ಹುಳಿ ಹಿಂಡಿದ್ಲಾ ಪಾಕ್ ನಟಿ?

ನ್ಯೂಸ್ ಆ್ಯರೋ : ಕ್ರೀಡಾ ಲೋಕದ ಸುಂದರ ಜೋಡಿ ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ ದಾಂಪತ್ಯ ಜೀವನ ಸರಿಯಿಲ್ಲ, ಈ ಜೋಡಿ ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದಾರೆ ಎಂದು ಸಾಕಷ್ಟು ಸುದ್ದಿಗಳು ಹರಿದಾಡುತ್ತಿದೆ. ಈಚೆಗೆ ಸಾನಿಯಾ ಮಿರ್ಜಾ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಫೋಸ್ಟ್ ಹಾಗೂ ಶೋಯೆಬ್ ಅವರು ಪಾಕ್ ನಟಿಯೊಂದಿಗೆ ತೆಗೆಸಿಕೊಂಡ ಹಾಟ್ ಫೋಟೋಶೂಟ್ ಕಾರಣವಾಗಿದೆ ಎನ್ನಲಾಗುತ್ತಿದೆ.
ಸಾನಿಯಾ ಪೋಸ್ಟ್‌ನಲ್ಲಿ ಏನಿದೆ:

ಕೆಲ ದಿನಗಳ ಹಿಂದೆ ಸಾನಿಯಾ ಹಂಚಿಕೊಂಡ ಪೋಸ್ಟ್‌ನಲ್ಲಿ “ಒಡೆದ ಹೃದಯಗಳು ಎಲ್ಲಿಗೆ ಹೋಗುತ್ತವೆ. ಅಲ್ಲಾನನ್ನು ಹುಡುಕಲು” ಎಂದು ಬರೆದುಕೊಂಡಿದ್ದರು. ಅದಲ್ಲದೆ ಈಚೆಗೆ ಅವರ ಮಗ ಇಜಾನ್ ಮಿರ್ಜಾ ಮಲಿಕ್ ಅವರ ನಾಲ್ಕನೇ ವರ್ಷದ ಹುಟ್ಟುಹಬ್ಬವನ್ನು ದುಬೈನಲ್ಲಿ ಆಚರಿಸಿಕೊಂಡಿದ್ದರು. ಅದರ ಫೋಟೋವನ್ನು ಶೋಯೆಬ್ ಮಲಿಕ್ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ಎಲ್ಲ ಬೆಳವಣಿಗೆಯಿಂದ ಈ ಕ್ರೀಡಾ ದಂಪತಿಗಳ ನಡುವೆ ಎಲ್ಲವೂ ಸರಿ ಇಲ್ಲ ಎಂಬ ಗುಸು ಗುಸು ಮಾತು ಹೆಚ್ಚಾಯಿತು.
ಶೋಯೆಬ್‌ಗೆ ಉಂಟೇ ಅಕ್ರಮ ಸಂಬಂಧ:
ಕಳೆದ ವರ್ಷ ಶೋಯೆಬ್ ಮಲಿಕ್ ಪಾಕಿಸ್ತಾನಿ ನಟಿ ಆಯೇಶಾ ಒಮರ್ ಜೊತೆ ಹಾಟ್ ಫೋಟೋಶೂಟ್ ಮಾಡಿಕೊಂಡಿದ್ದರು. ಸ್ವಿಮ್ಮಿಂಗ್ ಪೂಲ್‌ನಲ್ಲಿ ತೆಗೆದಿದ್ದ ಅವರಿಬ್ಬರ ಹಾಟ್ ಫೋಟೋಗಳು ಭಾರೀ ವೈರಲ್ ಆಗಿ, ಚರ್ಚೆಗೆ ಗ್ರಾಸವಾಗಿತ್ತು.


ಪಾಕಿಸ್ತಾನಿ ಕ್ರಿಕೆಟ್ ಶೋಗಳಲ್ಲಿ ಒಂದಾದ ‘ಆಸ್ಕ್ ದಿ ಪೆವಿಲಿಯನ್’ ಶೋವೊಂದರಲ್ಲಿ ಶೋಯೆಬ್ ಮಲಿಕ್ ಅಥಿತಿಯಾಗಿ ಭಾಗವಹಿಸಿದ್ದರು. ಈ ವೇಳೆ ಅವರಿಗೆ ಸಾನಿಯಾ ಮಿರ್ಜಾ ಅವರ ಟೆನಿಸ್ ಅಕಾಡೆಮಿಗಳು ಮತ್ತು ಅವುಗಳ ಸ್ಥಳಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಶೋಯೆಬ್, ನಿಜವಾಗಿಯೂ ನನಗೆ ಆ ಸ್ಥಳಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲ ಎಂದು ಉತ್ತರಿಸಿದ್ದಾರೆ. ಈ ವೇಳೆ ಕಾರ್ಯಕ್ರಮದ ನಿರೂಪಕ ವಾಕರ್ ಯೂನಸ್ ಶಾಕ್ ಆಗಿ ನೀವು ಯಾವ ರೀತಿಯ ಗಂಡ ಎಂದು ಮರುಪ್ರಶ್ನೆಯನ್ನು ಮಾಡಿದ್ದರು.
2010ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಾನಿಯಾ– ಸೋಯೆಬ್:

ಪಾಕಿಸ್ತಾನದ ಕ್ರಿಕೆಟ್ ಆಟಗಾರ ಸೋಯೆಬ್ ಮಲಿಕ್ ಅವರನ್ನು ಪ್ರೀತಿಸಿದ್ದಕ್ಕೆ ಸಾನಿಯಾ ವಿರುದ್ಧ ಭಾರತದ ಕ್ರೀಡಾ ಪ್ರೇಮಿಗಳು ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಆದರೆ ಇದು ಯಾವುದನ್ನು ಕ್ಯಾರೇ ಮಾಡದೇ ಸಾನಿಯಾ ಏಪ್ರಿಲ್ 2010ರಲ್ಲಿ ಸೋಯೆಬ್ ಅವರನ್ನು ಹೈದಾರಾಬಾದ್‌ನಲ್ಲಿ ಮುಸ್ಲಿಂ ಸಂಪ್ರದಾಯದಂತೆ ವಿವಾಹವಾದರು. ಈ ಇಬ್ಬರ ಮದುವೆಗೆ ಭಾರೀ ವಿರೋಧ ಕೂಡ ವ್ಯಕ್ತವಾಗಿತ್ತು. ಈ ದಂಪತಿಗಳಿಗೆ 2018 ರಲ್ಲಿ ಗಂಡು ಮಗು ಜನಿಸಿದೆ.
ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣದಲ್ಲಿ ಸಾನಿಯಾ–ಸೋಯೆಬ್ ವೈವಾಹಿಕ ಜೀವನದ ಬಗ್ಗೆ ಸುದ್ದಿಗಳು ಪ್ರಕಟಗೊಳುತ್ತಿದ್ದು, ಇದುವರೆಗೂ ಈ ಜೋಡಿ ಯಾವುದೇ ಸ್ಪಷ್ಟಣೆಯನ್ನು ನೀಡಿಲ್ಲ. ಇನ್ನೂ ಪಾಕಿಸ್ತಾನದ ಮಾಧ್ಯಮಗಳು 12 ವರ್ಷಗಳ ವೈವಾಹಿಕ ಬದುಕಿಗೆ ವಿದಾಯ ಹೇಳಲು ಮುಂದಾಗಿದ್ದಾರೆ ಎಂದು ಸುದ್ದಿಯನ್ನು ಪ್ರಸಾರ ಮಾಡುತ್ತಿದ್ದಾರೆ.
ಬ್ರೇಕಪ್ ಸುದ್ದಿ ಹರಡಲು ಕಾರಣ ಏನು ಗೊತ್ತಾ: ಸಾನಿಯಾ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ಪೋಸ್ಟ್‌ವೊಂದರಲ್ಲಿ ‘ಕಠಿಣ ದಿನಗಳು ಮತ್ತು ಒಡೆದ ಹೃದಯಗಳು’ ಎಂಬ ಅಡಿಬರಹವನ್ನು ಬರೆದು ಹಂಚಿಕೊಂಡಿದ್ದು. ಅದಲ್ಲದೆ ಕಳೆದ ಶುಕ್ರವಾರ ಇಝಾನ್ ಜೊತೆಗಿನ ಮುದ್ದಾದ ಫೋಟೋವನ್ನು ಹಂಚಿಕೊಂಡು, ‘ಕಠಿಣ ದಿನಗಳಲ್ಲಿ ನನ್ನನ್ನು ಪಡೆಯುವ ಕ್ಷಣಗಳು’ ಎಂದು ಬರೆದುಕೊಂಡಿದ್ದಾರೆ.