ಅಂತಿಮ ಘಟ್ಟ ತಲುಪಿದ ಟಿ20 ವಿಶ್ವಕಪ್ – ಟ್ರೋಫಿ ಗೆಲ್ಲುವ ತಂಡಕ್ಕೆ ಎಷ್ಟು ಮಿಲಿಯನ್ ಸಿಗಲಿದೆ ಗೊತ್ತಾ..!?

ನ್ಯೂಸ್ ಆ್ಯರೋ : ಟಿ20 ವಿಶ್ವಕಪ್ ಅಂತಿಮ ಹಂತ ತಲುಪಿದೆ. ಇದೇ ನವೆಂಬರ್ 13ರಂದು ಟಿ20 ವಿಶ್ವಕಪ್ 2022ರ ಫೈನಲ್ ಪಂದ್ಯವು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಭಾರತ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಪಾಕಿಸ್ತಾನದ ನಡುವೆ ಅಂತಿಮ ಹಣಾಹಣಿ ನಡೆಯಲಿದ್ದು, ಯಾರಿಗೆ ಒಲಿಯಲಿದೆ 2022ರ ವಿಶ್ವಕಪ್ ಅನ್ನೋದು ಗೊತ್ತಾಗಲಿದೆ. ಈ ಮಧ್ಯೆ ವಿಶ್ವಕಪ್ ಗೆದ್ದವರಿಗೆ ಸಿಗುವ ನಗದು ಬಹುಮಾನದ ಬಗ್ಗೆ ಚರ್ಚೆಯಾಗುತ್ತಿದೆ. ಅಷ್ಟಕ್ಕೂ ವಿಶ್ವಕಪ್ ಗೆದ್ದವರ ಪಾಲಾಗಲಿರುವ ಮೊತ್ತವೆಷ್ಟು ಅನ್ನೋದರ ಅಧಿಕೃತ ಮಾಹಿತಿಯನ್ನು ನಾವು ನೀಡ್ತೀವಿ.

ಟಿ20 ವಿಶ್ವಕಪ್ 2022 ಅಂತಿಮ ಘಟ್ಟ ತಲುಪಿದ್ದು, ಭಾರತ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ತಂಡಗಳು ಸೆಮಿಫೈನಲ್ ತಲುಪಿವೆ. ಪಂದ್ಯದಲ್ಲಿ ಗೆದ್ದವರು ಟಿ20 ವಿಶ್ವಕಪ್ 2022ರ ಟ್ರೋಫಿಯನ್ನು ಗೆಲ್ಲುವುದಲ್ಲದೆ, ಈ ಬಾರಿ ಗೆಲ್ಲುವ ತಂಡದ ಮೇಲೆ ಹಣದ ಮಳೆಯೇ ಸುರಿಯಲಿದೆ. ಮಾತ್ರವಲ್ಲ, ಫೈನಲ್’ನಲ್ಲಿ ರನ್ನರ್ ಅಪ್ ಆಗುವ ತಂಡಕ್ಕೂ ದೊಡ್ಡ ಮೊತ್ತ ಸಿಗಲಿದೆ. ಮೊದಲ ಹಾಗೂ ಎರಡನೇಯ ಸೆಮಿಫೈನಲ್’ನಲ್ಲಿ ಸೋತ ತಂಡಗಳಿಗೂ ನಗದು ಬಹುಮಾನ ಸಿಗಲಿದೆ.
ಟಿ20 ವಿಶ್ವಕಪ್ 2022ರ ಟ್ರೋಫಿ ಗೆಲ್ಲುವ ಚಾಂಪಿಯನ್ ತಂಡವು 1.6 ಮಿಲಿಯನ್ ಯುಎಸ್ ಡಾಲರ್‌ಗಳನ್ನು ಪಡೆಯುತ್ತದೆ. ಅಂದರೆ ಸುಮಾರು 13,11,72,000 ರೂ. ನಗದು ಬಹುಮಾನ ಪಡೆಯಲಿದೆ. ಇನ್ನು ರನ್ನರ್-ಅಪ್ ಆದ ತಂಡಕ್ಕೆ 8 ಲಕ್ಷ ಯುಎಸ್ ಡಾಲರ್‌ಗಳನ್ನು ನೀಡಲಾಗುತ್ತದೆ. ಅಂದ್ರೆ ಸುಮಾರು 6,55,86,040 ರೂ. ಮೊತ್ತದ ಹಣ ಪಡೆಯಲಿದೆ. ಸೆಮಿಫೈನಲ್‌ನಲ್ಲಿ ಸೋತ ಎರಡೂ ತಂಡಗಳಿಗೂ ತಲಾ 4 ಲಕ್ಷ ಅಮೆರಿಕನ್ ಡಾಲರ್ ಬಹುಮಾನವಾಗಿ ಸಿಗಲಿದೆ. ಅಂದ್ರೆ ಸುಮಾರು 3,29,48,820 ರೂ. ಮೊತ್ತದ ಹಣ ಪಡೆಯಲಿದೆ.
ಟಿ20 ವಿಶ್ವಕಪ್ 2022ರ ಅಂತಿಮ ಪಂದ್ಯವು ನವೆಂಬರ್ 13, ಭಾನುವಾರದಂದು ನಡೆಯಲಿದೆ. ಭಾರತ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ತಂಡಗಳು ಸೆಮಿಫೈನಲ್ ಹಂತ ತಲುಪಿದ್ದು , ಭಾರತವೂ ವಿಶ್ವಕಪ್ ಗೆಲ್ಲುವ ವಿಶ್ವಾಸದಲ್ಲಿದೆ. ಆದ್ರೆ ಅಂತಿಮವಾಗಿ ಟಿ20 ವಿಶ್ವಕಪ್ ಟ್ರೋಫಿ ಗೆಲ್ಲೋದ್ಯಾರು ಅನ್ನೋದನ್ನು ಕಾದು ನೋಡಬೇಕಿದೆ.