India vs SA : ಅತ್ಯಧಿಕ ರನ್ ದಾಖಲೆ ಬರೆದ ಟೀಂ ಇಂಡಿಯಾ - ಪ್ರಪಂಚದಲ್ಲೇ ಮೊದಲ ಬಾರಿಗೆ ಭಾರತ ಮಾಡಿದ ಸಾಧನೆಯೇನು?

ನ್ಯೂಸ್ ಆ್ಯರೋ : ಟಿ20 ಅಂತರಾಷ್ಟ್ರೀಯ ಪಂದ್ಯದಲ್ಲಿ 20 ಓವರ್ ಗಳಲ್ಲಿ ಕೇವಲ ಮೂರು ವಿಕೆಟ್ ನಷ್ಟಕ್ಕೆ 237 ರನ್ ಪೇರಿಸಿ ಟೀಂ ಇಂಡಿಯಾ ನೂತನ ದಾಖಲೆ ಬರೆದಿದೆ. ಐಸಿಸಿ ಟಿ20ಐ ನಲ್ಲಿ ನಾಲ್ಕನೇ ಅತೀ ಹೆಚ್ಚು ರನ್ ಗಳಿಸಿದ ತಂಡ ಎಂಬ ಖ್ಯಾತಿಗೆ ಟೀಂ ಇಂಡಿಯಾ ಸೇರ್ಪಡೆಯಾಗಿದೆ.
ಅಸ್ಸಾಂ ನ ಗುವಾಹಟಿಯ ಬರ್ಸಾಪರ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಎರಡನೇ ಟಿ20 ಪಂದ್ಯ ಕಳೆದ ರಾತ್ರಿ ನಡೆದಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದು, ಬ್ಯಾಟಿಂಗ್ ಮಾಡಲು ಟೀಂ ಇಂಡಿಯಾಗೆ ಅವಕಾಶ ದೊರಕಿತು. ಈ ಅವಕಾಶವನ್ನು ಚೆನ್ನಾಗಿಯೇ ಉಪಯೋಗಿಸಿಕೊಂಡ ಟೀಂ ಇಂಡಿಯಾ ಬ್ಯಾಟಿಂಗ್’ನಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದೆ.
ಈ ಮೂಲಕ ಐಸಿಸಿ ಟಿ20ಐ ನಲ್ಲಿ ನಾಲ್ಕನೇ ಅತೀ ಹೆಚ್ಚು ರನ್ ಗಳಿಸಿದ ತಂಡ ಭಾರತ ಎನಿಸಿಕೊಂಡಿದೆ. 20 ಓವರ್ ಗಳಲ್ಲಿ ಕೇವಲ ಮೂರು ವಿಕೆಟ್ ನಷ್ಟಕ್ಕೆ 237 ರನ್ ಪೇರಿಸಿ ನೂತನ ದಾಖಲೆ ಸೃಷ್ಟಿಸಿದ ಹೆಗ್ಗಳಿಕೆಗೆ ಟೀಂ ಇಂಡಿಯಾ ಪಾತ್ರವಾಗಿದೆ.
ಟೀಂ ಇಂಡಿಯಾದ ಪರ ಸೂರ್ಯ ಕುಮಾರ್ ಯಾದವ್ ಅಬ್ಬರಿಸಿದ್ದು, 22 ಬಾಲ್ ಗೆ 66 ರನ್ ಬಾರಿಸಿ ಮತ್ತೊಮ್ಮೆ ಮಿಸ್ಟರ್ 360 ಎಂಬುದನ್ನು ಸಾಬೀತುಪಡಿಸಿದ್ದಾರೆ. ಇನ್ನುಳಿದಂತೆ ಕನ್ನಡಿಗ ಕೆ ಎಲ್ ರಾಹುಲ್ ಸಹ 28 ಬಾಲ್ ಗೆ 57 ರನ್ ಬಾರಿಸಿ ಅರ್ಧಶತಕ ಸಿಡಿಸಿದ್ದಾರೆ. ರೋಹಿತ್ ಶರ್ಮಾ 37 ಬಾಲ್ ಗೆ 43 ರನ್, ವಿರಾಟ್ ಕೊಹ್ಲಿ ಅಜೇಯ 28 ಬಾಲ್ ಗೆ 49 ರನ್, ದಿನೇಶ್ ಕಾರ್ತಿಕ್ ಅಜೇಯ 7 ಬಾಲ್ ಗೆ 17 ರನ್ ಬಾರಿಸಿ ಟೀಂ ಇಂಡಿಯಾ 237 ರನ್ ಕಲೆ ಹಾಕುವಂತೆ ಮಾಡಿದರು.
ಆದರೆ ಮಧ್ಯಮ ಕ್ರಮಾಂಕದ ಆಟಗಾರ ಡೇವಿಡ್ ಮಿಲ್ಲರ್ ಅವರ ವೀರಾವೇಶದ ಶತಕದ ಹೊರತಾಗಿಯೂ ದಕ್ಷಿಣ ಆಫ್ರಿಕಾ ಸೋಲು ಅನುಭವಿಸಿದೆ.