ನ್ಯೂಸ್ ಆ್ಯರೋ : ಟಿ- ಟ್ವೆಂಟಿ ವಿಶ್ವಕಪ್ ಪಂದ್ಯಾವಳಿಯ ಆರಂಭದಲ್ಲೇ ಶಾಕಿಂಗ್ ಫಲಿತಾಂಶ ಹೊರಬಿದ್ದಿದ್ದು, ಟಿ20ಯ ದೈತ್ಯ ತಾರೆಗಳನ್ನು ಒಳಗೊಂಡಿದ್ದ ವೆಸ್ಟ್ ಇಂಡೀಸ್ ಕೂಟದಿಂದಲೇ ಹೊರಬಿದ್ದಿದೆ. 2 ಬಾರಿ T-20 ವಿಶ್ವ ಚಾಂಪಿಯನ್ ಆದ ತಂಡವು ಕ್ರಿಕೆಟ್ ಲೋಕದಲ್ಲಿ ಇನ್ನೂ ಅಂಬೆಗಾಲಿಡುವ ಐರ್ಲೆಂಡ್ ತಂಡದೆದುರು ಸೋಲು ಅನುಭವಿಸಿದೆ.
ಬಹಳ ಅಚ್ಚರಿಯ ಬೆಳವಣಿಗೆ ಒಂದರಲ್ಲಿ ಐರ್ಲೆಂಡ್ ಕ್ರಿಕೆಟ್ ತಂಡವು 2 ಬಾರಿ ವಿಶ್ವ ಚಾಂಪಿಯನ್ ಆದ ದೈತ್ಯ ವೆಸ್ಟ್ ಇಂಡೀಸ್ ತಂಡವನ್ನು ಟಿ20 ವಿಶ್ವಕಪ್ ಪಂದ್ಯಾವಳಿಯಿಂದ ಹೊರಗೆ ಅಟ್ಟಿದೆ.
ಇಂದು ನಡೆದ ಅರ್ಹತಾ ಪಂದ್ಯಾವಳಿಯಲ್ಲಿ ವೆಸ್ಟ್ ಇಂಡೀಸ್ ತಂಡ ಐರ್ಲೆಂಡ್ ತಂಡದ ಎದುರು ಒಂಬತ್ತು ವಿಕೆಟ್ಗಳ ಹೀನಾಯ ಸೋಲು ಅನುಭವಿಸಿ ಟಿ ಟ್ವೆಂಟಿ ವಿಶ್ವಕಪ್ ನಿಂದ ಹೊರ ಬಿದ್ದಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ವೆಸ್ಟ್ ಇಂಡೀಸ್ ತಂಡವು ಐರ್ಲೆಂಡ್ ನ ಗ್ರೇತ್ ಡೆಲನಿ (3/16) ಅವರ ಮಾರಕ ದಾಳಿಗೆ ತುತ್ತಾಗಿ 5 ವಿಕೆಟ್ ನಷ್ಟಕ್ಕೆ 146 ಗಳಿಸಲಷ್ಠೆ ಶಕ್ತವಾಯಿತು. ನಂತರ ಬ್ಯಾಟಿಂಗ್ ಮಾಡಿದ ಐರ್ಲೆಂಡ್ ತಂಡವು ಪೌಲ್ ಸ್ಟೈರ್ಲಿಂಗ್ ರವರ ಅಜೇಯ 66 ಹಾಗೂ ಲೊರ್ಕನ್ ಠಕ್ಕರ್ ರವರ ಅಜೇಯ 45 ರನ್ನುಗಳ ಕೊಡುಗೆಯಿಂದ 1 ವಿಕೆಟ್ ನಷ್ಟಕ್ಕೆ ಇನ್ನೂ 15 ಎಸೆತ ಬಾಕಿ ಇರುವಂತೆ 150 ರನ್ನು ಪೇರಿಸಿ ಕ್ರಿಕೆಟ್ ದಿಗ್ಗಜ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿತು.
News Arrowಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..