1. Home
  2. Sullia
  3. ಬೆಳ್ಳಾರೆ : ದಿವ್ಯಪ್ರಭಾ ಗೌಡ ಚಿಲ್ತಡ್ಕ ಅವರಿಂದ ಸ್ವಂತ ಅಳಿಯನ ಅಪಹರಣ ಪ್ರಕರಣ – ಆರು ಮಂದಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲು : ತಾಯಿ ನೀಡಿದ ದೂರಿನಲ್ಲೇನಿದೆ?

ಬೆಳ್ಳಾರೆ : ದಿವ್ಯಪ್ರಭಾ ಗೌಡ ಚಿಲ್ತಡ್ಕ ಅವರಿಂದ ಸ್ವಂತ ಅಳಿಯನ ಅಪಹರಣ ಪ್ರಕರಣ – ಆರು ಮಂದಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲು : ತಾಯಿ ನೀಡಿದ ದೂರಿನಲ್ಲೇನಿದೆ?

ಬೆಳ್ಳಾರೆ : ದಿವ್ಯಪ್ರಭಾ ಗೌಡ ಚಿಲ್ತಡ್ಕ ಅವರಿಂದ ಸ್ವಂತ ಅಳಿಯನ ಅಪಹರಣ ಪ್ರಕರಣ – ಆರು ಮಂದಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲು : ತಾಯಿ ನೀಡಿದ ದೂರಿನಲ್ಲೇನಿದೆ?
0

ನ್ಯೂಸ್ ಆ್ಯರೋ : ಸ್ವಂತ ಅತ್ತೆ, ಪತ್ನಿ ‌ಮತ್ತು ಇನ್ನಿತರ ಅಪರಿಚಿತರು ಸೇರಿಕೊಂಡು ಯುವ ಉದ್ಯಮಿ ನವೀನ್ ಮಲ್ಲಾರ ಎಂಬವರನ್ನು ಅಪಹರಿಸಿರುವ ಘಟನೆಗೆ ಸಂಬಂಧಿಸಿದಂತೆ ಬೆಳ್ಳಾರೆ ಠಾಣೆಯಲ್ಲಿ‌ ಆರು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

ನವೀನ್ ಅವರ ತಾಯಿ ನೀರಜಾಕ್ಷಿ ಅವರು ನೀಡಿದ ದೂರಿನಂತೆ ಮಾಧವ ಗೌಡ, ದಿವ್ಯ ಪ್ರಭಾ ಗೌಡ ಚಿಲ್ತಡ್ಕ, ಪರಶುರಾಮ, ಸ್ಪಂದನ, ಸ್ಪರ್ಶಿತ್ ಮತ್ತು ನವೀನ್ ರೈ ತಂಬಿನಮಕ್ಕಿ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.

ಪ್ರಕರಣದ ವಿವರ :
ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಕಾವಿನಮೂಲೆಯ ಧರ್ಮಶ್ರೀ ನಿಲಯದಲ್ಲಿ ನವೀನ್ ಅವರು ವಾಸ್ತವ್ಯವಿದ್ದು, ಮನೆಯಲ್ಲಿ ನವೀನ್ ಅವರ ತಾಯಿ ಮತ್ತು ಅವರ ಅಣ್ಣನ ಮಗನ ಪತ್ನಿ ಇದ್ದ ವೇಳೆ ನಿನ್ನೆ ಮಧ್ಯಾಹ್ನ 12:45 ರ‌ ಸುಮಾರಿಗೆ ಈ ಮನೆಗೆ ಕದಂಬ ಆಂಬ್ಯುಲೆನ್ಸ್ ಬಂದಿದ್ದು, ಅದರಲ್ಲಿ ದಿವ್ಯಪ್ರಭಾ ಗೌಡ ಚಿಲ್ತಡ್ಕ, ಅವರ ಪುತ್ರಿ ಸ್ಪಂದನಾ ಹಾಗೂ ಪರಶುರಾಮ ಎಂಬವರಲ್ಲದೇ ಇನ್ನೂ ಏಳೆಂಟು ಜನರ ತಂಡವಿತ್ತು‌ ಎನ್ನಲಾಗಿದೆ.

ಅಂಬ್ಯುಲೆನ್ಸ್ ನಿಂದ ಇಳಿದು ಬಂದ ದುಷ್ಕರ್ಮಿಗಳು ಏಕಾಏಕಿ ನವೀನ್ ಅವರನ್ನು ಅಪಹರಿಸಲು ಯತ್ನಿಸಿದ್ದು, ತಡೆಯಲು ಹೋದ ನವೀನ್ ಅವರ ತಾಯಿ ಹಾಗೂ ಅತ್ತಿಗೆ ಮೇಲೆ ಹಲ್ಲೆಗ ನಡೆಸಿದ್ದು, ಕಾಲಿನಿಂದ ಒದ್ದು ನವೀನ್ ಅವರನ್ನು ಎಳೆದೊಯ್ದಿದ್ದಾರೆ ಎಂದು ನವೀನ್ ಅವರ ತಾಯಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ದೂರಿನಲ್ಲಿ ಏನಿದೆ?

ಕಳೆದ ಮೂರು ತಿಂಗಳಿನಿಂದ ನವೀನ್ ಹಾಗೂ ಸ್ಪಂದನ ನಡುವೆ ವೈಮನಸ್ಸು ಉಂಟಾಗಿದ್ದು, ಸ್ಪಂದನ ತವರುಮನೆಗೆ ಹೋಗಿದ್ದಳು. ಕಳೆದ 18 ರಂದು ಈ ಬಗ್ಗೆ ಮಾತುಕತೆಯಾಗಿದ್ದು, ನವೀನ್ ಅವರು ಸ್ಪಂದನ ನನಗೆ ಬೇಡ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಇದೇ ಕಾರಣದಿಂದ ದಿವ್ಯ ಪ್ರಭಾ ಗೌಡ ಚಿಲ್ತಡ್ಕ ಹಾಗೂ ಮಗಳು ಸ್ಪಂದನಾ ಮತ್ತು ಇನ್ನಿತರ ‌ಆರೋಪಿಗಳು ನವೀನ್ ಅವರನ್ನು ಅಪಹರಿಸುವ ಉದ್ದೇಶದಿಂದ ಕೈಕಾಲು ಕಟ್ಟಿ ಅಂಬ್ಯುಲೆನ್ಸ್ ನಲ್ಲಿ ನವೀನ್ ಅವರನ್ನು ಹೊತ್ತುಕೊಂಡು ಹೋಗಿರುವುದಾಗಿ ನೀರಜಾಕ್ಷಿ ಅವರು‌ ದೂರು ನೀಡಿದ್ದಾರೆ.

ಅಲ್ಲದೇ ಘಟನೆಯ ವೇಳೆ ತಡೆಯಲು ಹೋದ ನೀರಜಾಕ್ಷಿ ಮತ್ತು ಅವರ ಸೊಸೆ ಪ್ರಜ್ಞಾ ಅವರನ್ನು ಕೈಯಿಂದ ಎಳೆದಾಡಿ ಹಲ್ಲೆ ನಡೆಸಿರುವುದರಿಂದ, ತುಳಿದು ಗಾಯಗೊಳಿಸಿರುವುದರಿಂದ ಸುಳ್ಯ ಕೆ.ವಿ.ಜಿ. ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿ ದೂರಿನಲ್ಲಿ ಹೇಳಲಾಗಿದೆ.

ನಿನ್ನೆಯೇ ಅಪಹರಣಕಾರರನ್ನು ಸುಂಟಿಕೊಪ್ಪ ಪೋಲಿಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬಳಿಕ ನವೀನ್ ಅವರ ತಂದೆಯೇ ಸುಂಟಿಕೊಪ್ಪಕ್ಕೆ ತೆರಳಿ ಅವರೇ ಖುದ್ದಾಗಿ ವಾಹನದಲ್ಲಿ ಕೂರಿಸಿ ಬೆಂಗಳೂರಿನತ್ತ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದ್ದು, ನವೀನ್ ಅವರನ್ನು ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯುತ್ತಿರುವುದಾಗಿ ಹೇಳಿದ್ದಾರೆ ಎಂದು ನವೀನ್ ಅವರ ಸಹೋದರ ವಿನ್ಯಾಸ್ ಮಾಹಿತಿ ‌ನೀಡಿದ್ದಾರೆ. ಸದ್ಯ ನವೀನ್ ಅವರು ಎಲ್ಲಿದ್ದಾರೆ ಎನ್ನುವುದು ಇನ್ನೂ ಪ್ರಶ್ನಾರ್ಹವಾಗಿಯೇ ಉಳಿದಿದೆ. ಹೆಚ್ಚಿನ‌ ಮಾಹಿತಿ ನಿರೀಕ್ಷಿಸಲಾಗಿದೆ…

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..