1. Home
  2. Sullia
  3. ಸುಳ್ಯ ‌: ಪಂಚಾಯತ್ ರಾಜ್ ಕಾಯ್ದೆಗೆ ಸರ್ಕಾರದಿಂದ ತಿದ್ದುಪಡಿ – 40% ಕಮಿಷನ್ ಗಾಗಿ ಅಧಿಕಾರ ಮೊಟಕು : ಕಾಂಗ್ರೆಸ್ ಆರೋಪ

ಸುಳ್ಯ ‌: ಪಂಚಾಯತ್ ರಾಜ್ ಕಾಯ್ದೆಗೆ ಸರ್ಕಾರದಿಂದ ತಿದ್ದುಪಡಿ – 40% ಕಮಿಷನ್ ಗಾಗಿ ಅಧಿಕಾರ ಮೊಟಕು : ಕಾಂಗ್ರೆಸ್ ಆರೋಪ

ಸುಳ್ಯ ‌: ಪಂಚಾಯತ್ ರಾಜ್ ಕಾಯ್ದೆಗೆ ಸರ್ಕಾರದಿಂದ ತಿದ್ದುಪಡಿ – 40% ಕಮಿಷನ್ ಗಾಗಿ ಅಧಿಕಾರ ಮೊಟಕು : ಕಾಂಗ್ರೆಸ್ ಆರೋಪ
0

ನ್ಯೂಸ್‌ ಆ್ಯರೋ‌ : ರಾಜ್ಯ ಬಿಜೆಪಿ ಸರಕಾರವು ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಸ್ಥಳೀಯ ಆಡಳಿತಕ್ಕೆ ಒತ್ತು ನೀಡಿ ಪಂಚಾಯತ್ ರಾಜ್ ವ್ಯವಸ್ಥೆಗೆ ನೀಡಲಾಗಿದ್ದ ಅಧಿಕಾರವನ್ನು ಮೊಟಕುಗೊಳಿಸಲು ಮುಂದಾಗಿದೆ. ಈ ತಿದ್ದುಪಡಿಯನ್ನು ರಾಜ್ಯ ಸರಕಾರ ಗ್ರಾ.ಪಂ.ಅಧ್ಯಕ್ಷರ ಅಧಿಕಾರ ಮೊಟಕು ಗೊಳಿಸುವ ವಿರುದ್ದ ಆಕ್ರೋಶ ವ್ಯಕ್ತಿಪಡಿಸಿದ್ದು ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಸುಳ್ಯದ ಕಾಂಗ್ರೆಸ್ ಮುಖಂಡ ಎಂ.ವೆಂಕಪ್ಪ ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಮುಖಂಡ ಎಂ.ವೆಂಕಪ್ಪ ಗೌಡ ಮತ್ತು ಸಚಿನ್ ರಾಜ್ ಶೆಟ್ಟಿ ಅವರಿಂದ ಪತ್ರಿಕಾಗೋಷ್ಟಿ ನಡೆಸಿದ್ದು, ಈ ವೇಳೆ ರಾಜ್ಯ ಸರಕಾರ ಭ್ರಷ್ಟಚಾರಕ್ಕೆ ಕುಮ್ಮಕ್ಕು ನೀಡುತ್ತಿದೆ ಎಂದು ಆರೋಪಿಸಿದ್ದು, ಹಾಗೂ 40% ಸರಕಾರವೇ ಕುಮ್ಮಕ್ಕು ನೀಡಲು ಈ ರೀತಿ ಗ್ರಾಮಪಂಚಾಯಿತ್ ಅಧ್ಯಕ್ಷರ ಅಧಿಕಾರ ಮೊಟಕುಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಖ್ಯಾತ ವಕೀಲರದ ಎಂ.ವೆಂಕಪ್ಪ ಗೌಡ, ನಗರ ಪಂಚಾಯತ್ ಸದಸ್ಯರು ಸುಳ್ಯ ಹಾಗೂ ಸಚಿನ್ ರಾಜ್ ಶೆಟ್ಟಿ ಪೆರುವಾಜೆ ಗುತ್ತು ಸದಸ್ಯರು ಪೆರುವಾಜೆ ಗ್ರಾಮ ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಗನ್ನಾಥ ಪೂಜಾರಿ, ಶ್ರೀಮತಿ ಹಾಜಿರಾ ಗಾಫುರ್ ಗ್ರಾಮ ಪಂಚಾಯತ್ ಕಲ್ಮಡ್ಕ ಹಾಜರಿದ್ದರು.

ಅಲ್ಲದೇ ಶ್ರೀಮತಿ ಚಿತ್ರಕುಮಾರಿ ಗ್ರಾಮ ಪಂಚಾಯತ್ ಉಬರಡ್ಕ ಮಿತ್ತುರ್, ಶ್ರೀಮತಿ ಲೀಲಾ ಮೋಹನ್ ಗ್ರಾಮ ಉಪಾಧ್ಯಕ್ಷರು ಪಂಚಾಯತ್ ಅಜ್ಜಾವರ ಹಾಗೂ ವಿಠ್ಠಲ ದಾಸ್ ಗ್ರಾಮ‌ ಪಂಚಾಯತ್ ಸದಸ್ಯರು ಬೆಳ್ಳಾರೆ, ಜಯಪ್ರಕಾಶ್ ನೆಕ್ರಪಾಡಿ, ಪಂಚಾಯತ್ ರಾಜ್ ಒಕ್ಕೂಟ ಅನಿಲ್ ಬಳ್ಳುಡ್ಕ, ಸತ್ಯ ಕುಮಾರ್ ಅಡಿಂಜಾ ಹಾಗೂ ಮಣಿಕಂಠ ಉಪಸ್ಥಿತರಿದ್ದರು.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..