1. Home
  2. Sullia
  3. ಸುಳ್ಯ ‌: ಇಹಲೋಕ ತ್ಯಜಿಸಿದ ಕನಕಮಜಲಿನ ಸ್ವಾತಂತ್ರ್ಯ ಹೋರಾಟಗಾರ, ಶತಾಯುಷಿ ಮೋನಪ್ಪ ಗೌಡ

ಸುಳ್ಯ ‌: ಇಹಲೋಕ ತ್ಯಜಿಸಿದ ಕನಕಮಜಲಿನ ಸ್ವಾತಂತ್ರ್ಯ ಹೋರಾಟಗಾರ, ಶತಾಯುಷಿ ಮೋನಪ್ಪ ಗೌಡ

ಸುಳ್ಯ ‌: ಇಹಲೋಕ ತ್ಯಜಿಸಿದ ಕನಕಮಜಲಿನ ಸ್ವಾತಂತ್ರ್ಯ ಹೋರಾಟಗಾರ, ಶತಾಯುಷಿ ಮೋನಪ್ಪ ಗೌಡ
0

ನ್ಯೂಸ್ ಆ್ಯರೋ : ಸ್ವಾತಂತ್ರ್ಯ ಹೋರಾಟಗಾರ, ಶತಾಯುಷಿ ಸುಳ್ಯದ ಕನಕಮಜಲು ಗ್ರಾಮದ ಮೋನಪ್ಪ ಗೌಡ ಕೊರಂಬಡ್ಕ (102) ಅವರು ಬುಧವಾರ ಸ್ವಗೃಹದಲ್ಲಿ ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಸ್ವತಂತ್ರ ಭಾರತದ ಮೊದಲ ಪ್ರಧಾನಿಯಾಗಿದ್ದ ಪಂಡಿತ್ ಜವಾಹರ್ ಲಾಲ್ ನೆಹರೂ ಅವರೊಂದಿಗೆ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಗುರುತಿಸಿಕೊಂಡಿದ್ದ ಮೋನಪ್ಪ ಗೌಡ ಅವರು, ನೆಹರೂ ಅವರ ಕಾರು ಚಾಲಕರಾಗಿಯೂ ಕೂಡ ಕಾರ್ಯ ನಿರ್ವಹಿಸಿದ್ದರು.

ಸುಳ್ಯ ತಾಲೂಕಿನ ಕನಕಮಜಲು ಗ್ರಾಮದ ಹಿರಿಯರಾಗಿದ್ದ ಮೋನಪ್ಪ ಗೌಡ ಅವರು ಪುತ್ರ ವೆಂಕಟ್ರಮಣ ಕೊರಂಬಡ್ಕ, ಪುತ್ರಿಯರಾದ ಕಮಲ, ವಿಮಲ, ಕುಸುಮ ಅವರನ್ನು ಅಗಲಿದ್ದಾರೆ.

ಮೋನಪ್ಪ ಗೌಡ ಅವರು ಶಿವರಾಮ ಕಾರಂತರು, ಶ್ರೀನಿವಾಸ ಮಲ್ಯ, ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರಿಗೂ ಚಾಲಕರಾಗಿ ಸೇವೆ ಸಲ್ಲಿಸಿದ್ದರು.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..