1. Home
  2. Tech
  3. News
  4. ಒಪ್ಪೋ ನೀಡಿದೆ ಬಂಪರ್ ಆಫರ್ – 25 ಸಾವಿರದ ಸ್ಮಾರ್ಟ್ ಫೋನ್ ಕೇವಲ 13 ಸಾವಿರಕ್ಕೆ ಮಾರಾಟ..!!

ಒಪ್ಪೋ ನೀಡಿದೆ ಬಂಪರ್ ಆಫರ್ – 25 ಸಾವಿರದ ಸ್ಮಾರ್ಟ್ ಫೋನ್ ಕೇವಲ 13 ಸಾವಿರಕ್ಕೆ ಮಾರಾಟ..!!

ಒಪ್ಪೋ ನೀಡಿದೆ ಬಂಪರ್ ಆಫರ್ – 25 ಸಾವಿರದ ಸ್ಮಾರ್ಟ್ ಫೋನ್ ಕೇವಲ 13 ಸಾವಿರಕ್ಕೆ ಮಾರಾಟ..!!
0

ನ್ಯೂಸ್ ಆ್ಯರೋ : ಹೊಸ ಮೊಬೈಲ್ ಖರೀದಿಸುವ ಯೋಚನೆಯಲ್ಲಿದ್ದೀರಾ…? ಹಾಗಿದ್ರೆ ಈ ನ್ಯೂಸ್ ತಪ್ಪದೆ ಓದಿ. ರಿಲಯನ್ಸ್ ಡಿಜಿಟಲ್’ನಲ್ಲಿ ಮೊಬೈಲ್ ಡೇಸ್ ಸೇಲ್ ಆರಂಭವಾಗಿದ್ದು, ಅತ್ಯಾಕರ್ಷಕ ರಿಯಾಯಿತಿ ದರದಲ್ಲಿ ಸ್ಮಾರ್ಟ್ ಫೋನ್ ಮಾರಾಟ ಮಾಡಲಾಗುತ್ತಿದೆ. ವಿವೋ, ರಿಯಲ್ ಮಿ, ಒಪ್ಪೋ, ಮೋಟೋ, ರೆಡ್‌ಮಿ ಸೇರಿದಂತೆ ಹಲವು ಸ್ಮಾರ್ಟ್ ಫೋನ್ ಕಂಪನಿಗಳು ಬಂಪರ್ ಆಫರ್’ನಲ್ಲಿ ಸೇಲ್ ಮಾಡುತ್ತಿವೆ. ಅದ್ರಲ್ಲೂ ಇತ್ತೀಚೆಗಷ್ಟೆ ಬಿಡುಗಡೆ ಆದ ಒಪ್ಪೋ ಎ17 ಫೋನ್ ಶೇ. 50ರಷ್ಟು ಡಿಸ್ಕೌಂಟ್ ದರದಲ್ಲಿ ಮಾರಾಟವಾಗುತ್ತಿದ್ದು, ಬೇಡಿಕೆಯೂ ಹೆಚ್ಚಿದೆ.

ಭಾರತದಲ್ಲಿ ಒಪ್ಪೋ A17 ಸ್ಮಾರ್ಟ್‌ಫೋನ್’ನ ಮೂಲ ಬೆಲೆ 24,999 ರೂ. ಇದೆ. ಆದ್ರೆ ನೀವು 12,999 ರೂ. ಇನ್ವೆಸ್ಟ್ ಮಾಡಿದ್ರೆ ಸಾಕು, 24,999 ರೂ. ಬೆಲೆಯ ಒಪ್ಪೋ ಎ17 ಮೊಬೈಲ್ ಫೋನ್ ಖರೀದಿಸಬಹುದು. ಅಷ್ಟೇ ಅಲ್ಲ, ಒಪ್ಪೋ ಕಂಪನಿಯು ಕ್ಯಾಶ್ ಬ್ಯಾಕ್ ಆಫರ್ ಕೂಡ ನೀಡಿದ್ದು, ಮತ್ತಷ್ಟು ಕಡಿಮೆ ಬೆಲೆಗೆ ಈ ಫೋನನ್ನು ನಿಮ್ಮದಾಗಿಸಬಹುದು.

ಒಪ್ಪೋ A17 ಸ್ಮಾರ್ಟ್‌ಫೋನ್ ಲೇಕ್ ಬ್ಲೂ ಮತ್ತು ಮಿಡ್ನೈಟ್ ಬ್ಲಾಕ್ ಕಲರ್‌ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. 4GB RM + 64GB ಇಂಟರ್ ಸ್ಟೋರೇಜ್ ಆಯ್ಕೆಯ ಈ ಫೋನ್ 720 x 1600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.56 ಇಂಚಿನ ಹೆಚ್‌ಡಿ ಪ್ಲಸ್‌ LCD ಡಿಸ್‌ಪ್ಲೇ ಹೊಂದಿದೆ. ಮೀಡಿಯಾ ಟೆಕ್ ಹೆಲಿಯೊ G35 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 12 ಬೆಂಬಲವನ್ನು ಪಡೆದಿದೆ.

ಒಪ್ಪೋ A17 ಸ್ಮಾರ್ಟ್‌ಫೋನ್‌ ಡ್ಯುಯಲ್ ರಿಯರ್‌ ಕ್ಯಾಮೆರಾ ಸೆಟಪ್ ಹೊಂದಿದೆ. ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯ ಹೊಂದಿದ್ದು, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಡೆಪ್ತ್ ಸೆನ್ಸಾರ್‌ ಹೊಂದಿದೆ. ವಿಡಿಯೋ ಕರೆಗಳು ಹಾಗೂ ಸೆಲ್ಫಿಗಾಗಿ 5 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವೂ ಲಭ್ಯವಿದೆ. ಈ ಮೊಬೈಲ್ ಫೋನ್ ರಿಲಯನ್ಸ್ ಡಿಜಿಟಲ್’ನಲ್ಲಿ ನಡೆಯುತ್ತಿರುವ ಮೊಬೈಲ್ ಡೇಸ್ ಸೇಲ್’ನಲ್ಲಿ ಶೇ. 50ರಷ್ಟು ರಿಯಾಯಿತಿಯಲ್ಲಿ ಲಭ್ಯವಿದ್ದು, 24,999 ರೂ. ಬೆಲೆಯ ಮೊಬೈಲ್ ಅನ್ನು 12,999 ರೂ.ಗೆ ಪಡೆಯಬಹುದು. ಜೊತೆಗೆ ಮೊಬಿಕ್ ವಿಕ್ ವಾಲೆಟ್ ಮೂಲಕ 1000 ರೂ. ಗಳ ಮತ್ತಷ್ಟು ಡಿಸ್ಕೌಂಟ್ ಪಡೆಯಬಹುದಾಗಿದೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..