1. Home
  2. Tech
  3. News
  4. ವಾಟ್ಸಾಪ್‌ನಲ್ಲಿ ಸುಲಭವಾಗಿ ಕರೆ ರೆಕಾರ್ಡ್ ಮಾಡಬಹುದು; ಹೇಗೆ ಗೊತ್ತಾ..?

ವಾಟ್ಸಾಪ್‌ನಲ್ಲಿ ಸುಲಭವಾಗಿ ಕರೆ ರೆಕಾರ್ಡ್ ಮಾಡಬಹುದು; ಹೇಗೆ ಗೊತ್ತಾ..?

ವಾಟ್ಸಾಪ್‌ನಲ್ಲಿ ಸುಲಭವಾಗಿ ಕರೆ ರೆಕಾರ್ಡ್ ಮಾಡಬಹುದು; ಹೇಗೆ ಗೊತ್ತಾ..?
0

ನ್ಯೂಸ್ ಆ್ಯರೋ : ಬಹುತೇಕ ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿ ಅಟೋಮ್ಯಾಟಿಕ್ ಕಾಲ್ ರೆಕಾರ್ಡ್ ಆಪ್ಷನ್ ಇದೆ. ಆದ್ರೆ ವಾಟ್ಸಾಪ್‌ನಲ್ಲಿ ಕರೆ ಬಂದರೆ ಅದು ರೆಕಾರ್ಡ್ ಮಾಡುವುದಿಲ್ಲ. ರೆಕಾರ್ಡ್ ಮಾಡಲು ಸಾಧ್ಯವೂ ಇಲ್ಲ. ವಾಟ್ಸಾಪ್‌ ಮೆಸೆಂಜರ್ ಆ್ಯಪ್ ಮೂಲಕ ಟೆಕ್ಸ್ಟ್ ಮೆಸೆಜ್, ವಾಯಿಸ್ ಮೆಸೆಜ್ ಕಳುಹಿಸಬಹುದು. ಫೋಟೋ, ವಿಡಿಯೋ, ಡಾಕ್ಯೂಮೆಂಟ್ ಶೇರ್ ಮಾಡಬಹುದು.

ಈಗ ವಾಟ್ಸಾಪ್ ಮೇಮೆಂಟ್ ಮಾಡೋದಕ್ಕೂ ಅವಕಾಶವಿದೆ. ವಾಯ್ಸ್ ಕಾಲ್, ವಿಡಿಯೋ ಕಾಲ್ ಮಾಡಬಹುದು. ಆದ್ರೆ ರೆಕಾರ್ಡ್ ಮಾಡಲು ಇಲ್ಲಿವರೆಗೂ ಯಾವುದೇ ಫೀಚರ್ ಬಂದಿಲ್ಲ. ಹಾಗಂತ ನಿರಾಶೆಗೊಳ್ಳಬೇಡಿ. ವಾಟ್ಸಾಪ್ ವಾಯ್ಸ್ ಕಾಲ್, ವಿಡಿಯೋ ಕಾಲ್ ರೆಕಾರ್ಡ್ ಮಾಡೋದಕ್ಕೆ ಕೆಲವು ಸಿಂಪಲ್ ಟ್ರಿಕ್ಸ್ ಬಳಸಿ.

ವಾಟ್ಸಾಪ್‌ ಮೆಸೆಂಜರ್ ಆ್ಯಪ್’ನಲ್ಲಿ ವಾಯ್ಸ್‌ ಮತ್ತು ವಿಡಿಯೋ ಕರೆ ಮಾಡುವುದಕ್ಕೆ ಅವಕಾಶ ನೀಡಿದೆ. ಆದರೆ ವಾಯ್ಸ್‌ ಕರೆಗಳು ಅಥವಾ ವೀಡಿಯೊ ಕರೆಗಳನ್ನು ರೆಕಾರ್ಡ್ ಮಾಡಲು ಇದು ಅನುಮತಿಸುವುದಿಲ್ಲ. ಆದ್ರೆ ಕರೆಗಳನ್ನು ರೆಕಾರ್ಡ್ ಮಾಡಲು ಕೆಲವು ಪರ್ಯಾಯ ಮಾರ್ಗಗಳಿವೆ. ಆಂಡ್ರಾಯ್ಡ್‌ ಮತ್ತು ಐಓಎಸ್‌ ಸಾಧನಗಳಲ್ಲಿ ಥರ್ಡ್ ಪಾರ್ಟಿ ಆ್ಯಪ್’ಗಳ ಮೂಲಕ ರೆಕಾರ್ಡ್ ಮಾಡಬಹುದಾಗಿದೆ.

ಕ್ಯೂಬ್ ಕಾಲ್ ಅಪ್ಲಿಕೇಶನ್‌ ಮೂಲಕ ನೀವು ವಾಯ್ಸ್‌ ಮತ್ತು ವಿಡಿಯೋ ಕರೆಗಳನ್ನು ರೆಕಾರ್ಡ್ ಮಾಡಬಹುದು. ಮೊದಲು ಗೂಗಲ್ ಪ್ಲೇ ಸ್ಟೋರ್‌ಗೆ ಹೋಗಿ ಕ್ಯೂಬ್ ಕಾಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ. ಬಳಿಕ ಆ್ಯಪ್ ಇನ್‌ಸ್ಟಾಲ್‌ ಮಾಡಿ. ನಂತರ ಕ್ಯೂಬ್ ಕಾಲ್ ವಾಯ್ಸ್ ಕಾಲ್ ರೆಕಾರ್ಡರ್ ಅಪ್ಲಿಕೇಶನ್ ತೆರೆದು, ವಾಟ್ಸಾಪ್’ಗೆ ಬದಲಿಸಿ. ಕ್ಯೂಬ್ ಕಾಲ್ ವಾಯಿಸ್‌ ಕರೆಯನ್ನು ತೆಗೆದುಕೊಳ್ಳುವಾಗ ಕ್ಯೂಬ್ ಕಾಲ್ ವಿಜೆಟ್ ಕಾಣಿಸುತ್ತದೆ.

ಇಲ್ಲದಿದ್ದರೆ, ಕ್ಯೂಬ್ ಕಾಲ್ ರೆಕಾರ್ಡರ್ ಸೆಟ್ಟಿಂಗ್‌ಗೆ ಹೋಗಿ ಫೋರ್ಸ್ VoIP ಕರೆಯನ್ನು ಧ್ವನಿ ಕರೆಯಾಗಿ ಆಯ್ಕೆ ಮಾಡಿ. ಮತ್ತೆ ಕರೆ ಮಾಡಿ ಮತ್ತು ವಿಜೆಟ್ ಕಾಣಿಸುತ್ತದೆಯೇ, ಇಲ್ಲವೇ ಎಂಬುದನ್ನು ಖಾತರಪಡಿಸಿಕೊಳ್ಳಿ. ಆಗಲೂ ಕಾಣಿಸದಿದ್ದರೆ ನಿಮ್ಮ ಫೋನ್ ಅಪ್ಲಿಕೇಶನ್‌ನೊಂದಿಗೆ ಕಾರ್ಯನಿರ್ವಹಿಸುವುದಿಲ್ಲ ಎಂದರ್ಥ.

ಇನ್ನು ಆಂಡ್ರಾಯ್ಡ್‌ನಲ್ಲಿ ವಾಟ್ಸಾಪ್‌ ವಾಯಿಸ್‌ ಕರೆಗಳನ್ನು ರೆಕಾರ್ಡ್ ಮಾಡಲು ಗೂಗಲ್ ಪ್ಲೇ ಸ್ಟೋರ್’ಗೆ‌ ಹೋಗಿ AZ ಸ್ಕ್ರೀನ್ ರೆಕಾರ್ಡರ್ ಅಪ್ಲಿಕೇಶನ್‌ ಅನ್ನು ಡೌನ್‌ಲೋಡ್ ಮಾಡಿ. ಬಳಿಕ ಇನ್‌ಸ್ಟಾಲ್ ಮಾಡಿ,‌ ಅಪ್ಲಿಕೇಶನ್ ಓಪನ್ ಮಾಡಿ. ಅಪ್ಲಿಕೇಶನ್ ನಿಮ್ಮ ಅಧಿಸೂಚನೆ ಫಲಕದಲ್ಲಿ ಪಾಪ್-ಅಪ್ ವಿಜೆಟ್ ಅನ್ನು ರಚಿಸುತ್ತದೆ. ಕರೆಯನ್ನು ರೆಕಾರ್ಡ್ ಮಾಡುವ ಮೊದಲು ನೀವು ‘ಆಡಿಯೊ ರೆಕಾರ್ಡಿಂಗ್ ಸಕ್ರಿಯಗೊಳಿಸಿ’ ಅನ್ನು ಟಾಗಲ್ ಮಾಡಬೇಕು.

ಈಗ ವಾಟ್ಸಾಪ್‌ ಆಪ್‌ ಓಪನ್ ಮಾಡಿ, ನೀವು ಕರೆ ರೆಕಾರ್ಡ್ ಮಾಡಲು ಬಯಸುವ ವ್ಯಕ್ತಿಗೆ ಕರೆ ಮಾಡಿ. ಕರೆ ಪ್ರಾರಂಭವಾದ ನಂತರ, AZ ಸ್ಕ್ರೀನ್ ರೆಕಾರ್ಡರ್ ವಿಜೆಟ್‌ನಲ್ಲಿರುವ ರೆಕಾರ್ಡ್ ಬಟನ್ ಅನ್ನು ಟ್ಯಾಪ್ ಮಾಡಿ. ಬಳಿಕ ರೆಕಾರ್ಡಿಂಗ್ ಸ್ಟಾಪ್ ಮಾಡಿ. ಆಗ ನಿಮ್ಮ ವಾಟ್ಸಾಪ್‌ ವೀಡಿಯೊ ಕರೆ ಆ್ಯಪ್’ನಲ್ಲಿ ಸೇವ್ ಆಗುತ್ತದೆ.

ಐಫೋನ್‌ನಲ್ಲಿಯೂ ವಾಟ್ಸಾಪ್‌ ಕರೆಗಳನ್ನು ರೆಕಾರ್ಡ್ ಮಾಡುವುದು ಟ್ರಿಕಿ ಅನಿಸಿದರೂ ಅಸಾಧ್ಯವೇನಲ್ಲ. ಸುಲಭವಾಗಿ ರೆಕಾರ್ಡ್ ಮಾಡಲು ಯಾವುದೇ ನಿರ್ದಿಷ್ಟ ಅಪ್ಲಿಕೇಶನ್ ಇಲ್ಲ. ಕರೆಗಳನ್ನು ರೆಕಾರ್ಡ್ ಮಾಡಲು ಮ್ಯಾಕ್ ಮತ್ತು ಐಫೋನ್ ಅಗತ್ಯವಿರುತ್ತದೆ. ಕೇಬಲ್ ಬಳಸಿ ನಿಮ್ಮ ಐಫೋನ್ ಅನ್ನು ಮ್ಯಾಕ್‌ಗೆ ಸಂಪರ್ಕಿಸಿ. ನಿಮ್ಮ ಐಫೋನ್‌ನಲ್ಲಿ ‘Trust this computer’ ಆಯ್ಕೆಯನ್ನು ಆರಿಸಿ. ಬಳಿಕ ಮ್ಯಾಕ್‌ ಡಿವೈಸ್‌ನಲ್ಲಿ QuickTime ಅಪ್ಲಿಕೇಶನ್ ತೆರೆಯಿರಿ.

ಫೈಲ್ ಆಯ್ಕೆಗೆ ಹೋಗಿ, ಆಡಿಯೊ ರೆಕಾರ್ಡಿಂಗ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಈಗ, ನೀವು ವಾಟ್ಸ್ಆ್ಯಪ್ ನಿಂದ ಕರೆ ಮಾಡಿ. ಕರೆ ಸಂಪರ್ಕಗೊಂಡ ನಂತರ ರೆಕಾರ್ಡ್ ಆದ ಆಡಿಯೋವನ್ನು ಸೇವ್ ಮಾಡಿಕೊಳ್ಳಬಹುದು.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..