1. Home
  2. Tech
  3. News
  4. ಏರ್’ಟೆಲ್ vs ಜಿಯೋ : ಅಗ್ಗದ ಪ್ಲ್ಯಾನ್ ನಲ್ಲಿ ಯಾವುದು ಬೆಸ್ಟ್? – ಕಡಿಮೆ ಬೆಲೆಯ ಗ್ರಾಹಕ ಸ್ನೇಹಿ ರೀಚಾರ್ಜ್ ಎಷ್ಟು ಗೊತ್ತೇ…!?

ಏರ್’ಟೆಲ್ vs ಜಿಯೋ : ಅಗ್ಗದ ಪ್ಲ್ಯಾನ್ ನಲ್ಲಿ ಯಾವುದು ಬೆಸ್ಟ್? – ಕಡಿಮೆ ಬೆಲೆಯ ಗ್ರಾಹಕ ಸ್ನೇಹಿ ರೀಚಾರ್ಜ್ ಎಷ್ಟು ಗೊತ್ತೇ…!?

ಏರ್’ಟೆಲ್ vs ಜಿಯೋ : ಅಗ್ಗದ ಪ್ಲ್ಯಾನ್ ನಲ್ಲಿ ಯಾವುದು ಬೆಸ್ಟ್? – ಕಡಿಮೆ ಬೆಲೆಯ ಗ್ರಾಹಕ ಸ್ನೇಹಿ ರೀಚಾರ್ಜ್ ಎಷ್ಟು ಗೊತ್ತೇ…!?
0

ನ್ಯೂಸ್ ಆ್ಯರೋ : ದೇಶೀಯ ಟೆಲಿಕಾಂ ದಿಗ್ಗಜ ಸಂಸ್ಥೆಗಳಾದ ಜಿಯೋ ಹಾಗೂ ಏರ್ಟೆಲ್ ಕಂಪನಿಗಳು ಗ್ರಾಹಕ ಸ್ನೇಹಿ ಬೆಲೆಯಲ್ಲಿ ಕೆಲವು ಪ್ರೀಪೇಯ್ಡ್‌ ಯೋಜನೆಗಳನ್ನು ಅಧಿಕ ಪ್ರಯೋಜನಗಳೊಂದಿಗೆ ನೀಡುವ ಮೂಲಕ ಗಮನ ಸೆಳೆದಿವೆ. ಅವುಗಳಲ್ಲಿ ಎರಡು ಅಗ್ಗದ ಪ್ಲ್ಯಾನ್‌ಗಳು ಆಕರ್ಷಕ ಎನಿಸಿವೆ.

ರಿಲಯನ್ಸ್‌ ಜಿಯೋ 259ರೂ ಮತ್ತು ಭಾರ್ತಿ ಏರ್‌ಟೆಲ್‌ ಟೆಲಿಕಾಂ 265ರೂ ಬೆಲೆಯ ಪ್ರೀಪೇಯ್ಡ್‌ ಯೋಜನೆಯ ಆಯ್ಕೆ ಒಳಗೊಂಡಿವೆ. ಈ ಎರಡು ಟೆಲಿಕಾಂಗಳ ಈ ಎರಡು ರೀಚಾರ್ಜ್‌ ಯೋಜನೆ ಯಲ್ಲಿ ಅಧಿಕ ದೈನಂದಿನ ಡೇಟಾ, ಅಧಿಕ ವ್ಯಾಲಿಡಿಟಿ, ಅನಿಯಮಿತ ಉಚಿತ ವಾಯ್ಸ್‌ ಕರೆ ಹಾಗೂ ಎಸ್‌ಎಮ್‌ಎಸ್‌ ಪ್ರಯೋಜನಗಳು ಸೇರಿವೆ.

ಇನ್ನೂ ಹಾಗೆಯೇ ಈ ಎರಡು ಯೋಜನೆಗಳಲ್ಲಿ ಕೆಲವು ಹೆಚ್ಚುವರಿಯಾಗಿ ಆ್ಯಪ್ಸ್‌ಗಳ ಸೌಲಭ್ಯಗಳು ಸಿಗಲಿವೆ. ಆದರೂ ಈ ಎರಡು ಟೆಲಿಕಾಂಗಳ ಈ ಪ್ರಿಪೇಯ್ಡ್‌ ಪ್ಲ್ಯಾನ್‌ಗಳಲ್ಲಿ ಕೆಲವು ಭಿನ್ನತೆಗಳು ಕಾಣಬಹುದಾಗಿದೆ. ಹಾಗಾದರೆ ಜಿಯೋ 259ರೂ ಮತ್ತು ಏರ್‌ಟೆಲ್‌ 265ರೂ. ಪ್ಲ್ಯಾನಿನಲ್ಲಿ ಯಾವುದು ಬೆಸ್ಟ್? ಈ ಪ್ಲ್ಯಾನ್‌ಗಳ ಪ್ರಯೋಜನಗಳೇನು ಇಲ್ಲಿವೆ ಮಾಹಿತಿ…

ಜಿಯೋ ₹.259/- ಪ್ಲ್ಯಾನ್

ಜಿಯೋ ಟೆಲಿಕಾಂನ 259ರೂ ಬೆಲೆಯ ಕ್ಯಾಲೆಂಡರ್‌ ತಿಂಗಳ ಮಾನ್ಯತೆಯ ಪ್ಲಾನ್‌ ಪ್ರತಿ ತಿಂಗಳು ಕೇವಲ ಒಂದು ರೀಚಾರ್ಜ್ ದಿನಾಂಕವನ್ನು ನೆನಪಿಟ್ಟುಕೊಳ್ಳಲು ಬಳಕೆದಾರರಿಗೆ ಸಹಾಯ ಮಾಡುತ್ತದೆ. ಇನ್ನು ಈ ಪ್ರಿಪೇಯ್ಡ್‌ ಪ್ಲಾನ್‌ 1.5GB ಹೈ-ಸ್ಪೀಡ್ ಡೇಟಾ ಪ್ರಯೋಜನವನ್ನು ನೀಡಲಿದ್ದು, ನಂತರ 64 Kbps ಗೆ ಡೇಟಾ ವೇಗವನ್ನು ಇಳಿಯುತ್ತದೆ.

ಇದು ಅನಿಯಮಿತ ವಾಯ್ಸ್‌ ಕರೆಗಳು, ದೈನಂದಿನ 100 SMS ಪ್ರಯೋಜನವನ್ನು ನೀಡಲಿದೆ. ಇದಲ್ಲದೆ ಜಿಯೋ ಅಪ್ಲಿಕೇಶನ್‌ಗಳಿಗೆ ಪೂರಕ ಚಂದಾದಾರಿಕೆಯನ್ನು ಸಹ ಒಳಗೊಂಡಿದೆ. ಇದು ನಿಯಮಿತ ರೀಚಾರ್ಜ್ ಪ್ಲಾನ್‌ಗಿಂತ ಭಿನ್ನವಾಗಿದ್ದು, ನಿಗದಿತ ಮಾನ್ಯತೆಯ ಅವಧಿಯೊಂದಿಗೆ ಬರುತ್ತದೆ.

ಏರ್ಟೆಲ್ ₹.265/- ಪ್ಲ್ಯಾನ್

ಏರ್‌ಟೆಲ್ 265ರೂ. ಬೆಲೆಯ ಪ್ರಿಪೇಯ್ಡ್‌ ಪ್ಲಾನ್‌ ಕೂಡ 28 ದಿನಗಳ ಮಾನ್ಯತೆ ಹೊಂದಿದೆ. ಈ ಪ್ಲಾನ್‌ನಲ್ಲಿ ನಿಮಗೆ ಪ್ರತಿದಿನ 1 GB ಡೇಟಾ ಲಭ್ಯವಿದೆ. ಇದಲ್ಲದೆ ಎಲ್ಲಾ ನೆಟ್‌ವರ್ಕ್‌ ಬೆಂಬಲಿಸುವ ಅನಿಯಮಿತ ಕರೆಗಳು ಹಾಗೂ ದಿನಕ್ಕೆ 100 ಎಸ್‌ಎಂಎಸ್‌ ಸೇವೆಗಳು ಲಭ್ಯವಾಗಲಿದೆ. ಈ ಯೋಜನೆಯೊಂದಿಗೆ ಅಮೆಜಾನ್‌ ಪ್ರೈಮ್‌ ವೀಡಿಯೊಗೆ (ಫ್ರಿ ಟ್ರೈಯಲ್) ಮೊಬೈಲ್ ಚಂದಾದಾರಿಕೆಯು ಒಂದು ತಿಂಗಳವರೆಗೆ ಲಭ್ಯವಿರುತ್ತದೆ.

ಯಾವುದು ಬೆಸ್ಟ್?

ಜಿಯೋ 259ರೂ. ಮತ್ತು ಏರ್‌ಟೆಲ್‌ 265ರೂ. ಪ್ಲ್ಯಾನ್‌ ಗಳು ಆಕರ್ಷಕ ಸೌಲಭ್ಯ ಒಳಗೊಂಡಿವೆ. ಜಿಯೋ ಮತ್ತು ಏರ್‌ಟೆಲ್‌ ಟೆಲಿಕಾಂಗಳ ಈ ಯೋಜನೆಗಳು ಸಾಮ್ಯತೆ ಎನಿಸಿದರೂ, ಪ್ರಯೋಜನಗಳಲ್ಲಿ ಭಿನ್ನತೆ ಪಡೆದಿವೆ. ಜಿಯೋ ಯೋಜನೆಯು ಒಂದು ತಿಂಗಳ (30 ದಿನಗಳ) ವ್ಯಾಲಿಡಿಟಿ ನೀಡಿದೆ. ಏರ್‌ಟೆಲ್‌ 28 ದಿನಗಳ ವ್ಯಾಲಿಡಿಟಿ ನೀಡಿದೆ. ಇನ್ನು ಜಿಯೋ ಪ್ರತಿದಿನ 1.5GB ಡೇಟಾ ಪ್ರಯೋಜನ ಹೊಂದಿದ್ದು, ಏರ್‌ಟೆಲ್‌ ಪ್ರತಿದಿನ 1GB ಡೇಟಾ ಪ್ರಯೋಜನ ಪಡೆದಿದೆ. ಏರ್‌ಟೆಲ್‌ ಅಮೆಜಾನ್‌ ಪ್ರೈಮ್‌ ವೀಡಿಯೊಗೆ (ಫ್ರಿ ಟ್ರೈಯಲ್) ಸೌಲಭ್ಯ ಪಡೆದಿದೆ. ಡೇಟಾ ಮತ್ತು ವ್ಯಾಲಿಡಿಟಿ ಸೌಲಭ್ಯಗಳನ್ನು ಗಮನಿಸುವುದಾದರೆ ಜಿಯೋದ 259ರೂ. ಯೋಜನೆಯು ಆಕರ್ಷಕ ಎನಿಸುತ್ತದೆ ಎಂದು ಹೇಳಬಹುದು.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..