
ನ್ಯೂಸ್ ಆ್ಯರೋ : ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಸಂಸ್ಥೆ ದೂರಸಂಪರ್ಕ ಕ್ಷೇತ್ರದಲ್ಲಿನ ಜಿಯೋ ಹಾಗೂ ಏರ್ಟೆಲ್ ಓಟವನ್ನು ತಡೆಯಲು ಗ್ರಾಹಕರಿಗೆ ಆಕರ್ಷಕ ಆಫರ್ ಗಳನ್ನು ನೀಡಲು ಶುರುಮಾಡಿದೆ. ಕಳೆದ ಕೆಲವು ತಿಂಗಳುಗಳಿಂದ BSNL ಗ್ರಾಹಕರು ಪೋರ್ಟಿಂಗ್ ಮೂಲಕ ಇತರೆ ನೆಟ್ವರ್ಕ್ ಗೆ ತೆರಳುತ್ತಿರುವುದನ್ನು ಮನಗಂಡು ರಿಯಾಯಿತಿ ದರ ನೀಡುವ ಮೂಲಕ ಮನವೊಲಿಸಲು ಯತ್ನಿಸುತ್ತಿದೆ. ಇದರ ಮುಂದುವರೆದ ಭಾಗವಾಗಿ ಸದ್ಯ ಬಿಎಸ್ ಎನ್ ಎಲ್ ತನ್ನ ಬಳಕೆದಾರರಿಗೆ ಬಂಪರ್ ಆಫರ್ ಒಂದನ್ನು ಘೋಷಿಸಿದೆ.
ಬಿಎಸ್ಎನ್ಎಲ್ ಯೋಜನೆಗಳ ಮೂಲಕ ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗಿರುವುದಲ್ಲದೆ, SMS ಮತ್ತು ಧ್ವನಿ ಕರೆಗಳಿಂದ ಡೇಟಾ ಮತ್ತು OTT ವರೆಗೆ ಎಲ್ಲಾ ರೀತಿಯ ಪ್ರಯೋಜನಗಳನ್ನು ನೀಡುತ್ತಿದೆ. ಈ ಎಲ್ಲಾ ಯೋಜನೆಗಳು ವಿಭಿನ್ನ ಮಾನ್ಯತೆಯೊಂದಿಗೆ ಬರುತ್ತಿದ್ದು, ಹೌದು ಸರ್ಕಾರಿ ಟೆಲಿಕಾಂ ಸಂಸ್ಥೆಯಾದ ಭಾರತ ಸಂಚಾರ ನಿಗಮ ಲಿಮಿಟೆಡ್ (ಬಿಎಸ್‍ಎನ್‍ಎಲ್) ಸಂಪರ್ಕ ವ್ಯವಸ್ಥೆಯಲ್ಲಿ ಮೊದಲಿನಿಂದಲೂ ಕೇಳಿ ಬರುತ್ತಿರುವ ಪ್ರಚಲಿತ ಹೆಸರು. ಇದೀಗ ಇದೇ ಕಂಪೆನಿ ತನ್ನ ಪ್ರೀಪೇಯ್ಡ್ ಗ್ರಾಹಕರಿಗೆ 296 ರೂ. ರಿಚಾರ್ಜ್, 60 ದಿನ ವ್ಯಾಲಿಡಿಟಿಯ ಆಕರ್ಷಕ ಆಫರ್ ಒಂದನ್ನು ಬಿಡುಗಡೆ ಮಾಡಿದೆ. ಈ ಕುರಿತ ಮತ್ತಷ್ಟು ವಿವರ ಇಲ್ಲಿದೆ ನೋಡಿ.
ಹೌದು.. ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ BSNL ಎಲ್ಲಾ ಖಾಸಗಿ ಟೆಲಿಕಾಂ ಕಂಪನಿಗಳಾದ Jio, Airtel ಮತ್ತು Vi ಮುಂದೆ ಪೈಪೋಟಿ ನೀಡುತ್ತಾ ಬಂದಿದೆ. ಅದರಂತೆ BSNL ನ ಅತ್ಯುತ್ತಮ ಪ್ರಿಪೇಯ್ಡ್ ಯೋಜನೆಗಳ ಪರಿಚಯಿಸುತ್ತಾ ಬಂದಿದೆ. ಜೊತೆಗೆ ಅದರ ಪ್ರಯೋಜನಗಳು Jio, Airtel ಮತ್ತು Vi ಯೋಜನೆಗಳಿಗೆ ಕಠಿಣ ಸ್ಪರ್ಧೆಯನ್ನು ನೀಡುತ್ತಿದೆ.
ಬಿಎಸ್‌ಎನ್‌ಎಲ್ 296ರೂ. ಪ್ರೀಪೇಯ್ಡ್ ಯೋಜನೆಯಲ್ಲಿ ಪ್ರತಿದಿನ 100 ಎಸ್‌ಎಮ್‌ಎಸ್ ಪ್ರಯೋಜನ ಲಭ್ಯ ಆಗಲಿದೆ. ಇದರೊಂದಿಗೆ ಲೋಕಲ್ ಹಾಗೂ ಎಸ್‌ಟಿಡಿ ವಾಯಿಸ್ ಕರೆಗಳ ಪ್ರಯೋಜನ ಸಿಗಲಿದೆ. ಹಾಗೆಯೇ ಒಟ್ಟಾರೇ 120 GB ಹೈ ಸ್ಪೀಡ್ ಡೇಟಾ ಪ್ರಯೋಜನವನ್ನು ನೀಡಿದ್ದು, ನಿಗದಿತ ಡೇಟಾ ಮುಗಿದ ಬಳಿಕ 40kbps ವೇಗದಲ್ಲಿ ಇಂಟರ್ನೆಟ್ ಮುಂದುವರೆಯಲಿದೆ. ಇನ್ನು ಈ ಯೋಜನೆಯು 60 ದಿನಗಳ ವ್ಯಾಲಿಡಿಟಿಯನ್ನು ಪಡೆದಿದೆ.