ಜಿಯೋ, ಏರ್ಟೆಲ್, ವಿಐ ನಡುವೆ ಪೈಪೋಟಿ – ಅತೀ ಕಡಿಮೆ ಬೆಲೆಗೆ ಗ್ರಾಹಕರಿಗೆ ಬಂಪರ್ ಪ್ಲಾನ್ : ಲಾಭದಾಯಕ ಯಾವುದು?

ನ್ಯೂಸ್ ಆ್ಯರೋ : ಭಾರತದಲ್ಲಿ ಜಿಯೋ ಆರಂಭವಾದಾಗಿನಿಂದ ದೇಶದ ಟೆಲಿಕಾಂ ವಲಯದಲ್ಲಿ ಸಾಕಷ್ಟು ಪೈಪೋಟಿಗಳು ನಡೆಯುತ್ತಿವೆ. ತಮ್ಮ ಚಂದಾದರ ಸಂಖ್ಯೆ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಹೊಸ ಪ್ಲಾನ್‌ಗಳನ್ನು ಪರಿಚಯಿಸುತ್ತಿವೆ.
ಹಲವು ವರ್ಷಗಳಿಂದ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಟೆಲಿಕಾಂ ಸಂಸ್ಥೆಗಳ ನಡುವೆ ಪೈಪೋಟಿ ನಡೆಯುತ್ತಲೇ ಇದೆ. ಹೀಗಾಗಿ ತಮ್ಮ ಬಳಕೆದಾರರಿಗಾಗಿ ಪ್ರಿಪೇಯ್ಡ್ ಮತ್ತು ಪೋಸ್ಟ್ ಪೇಯ್ಡ್ ಪ್ಲಾನ್‌ಗಳನ್ನು ಪರಿಚಯಿಸುತ್ತಾ ಬಂದಿವೆ. ಇದರಲ್ಲಿ ಅಲ್ಪಾವಧಿ ಮಾನ್ಯತೆಯ ಪ್ಲಾನ್‌ಗಳು ಮಾತ್ರವಲ್ಲದೆ ದೀರ್ಘಾವಧಿಯ ಪ್ಲಾನ್‌ಗಳು ಕೂಡ ಸೇರಿವೆ.
ಈ ಟೆಲಿಕಾಂ ಕಂಪನಿಗಳು ಕಡಿಮೆ ಬೆಲೆಗೆ ಆಕರ್ಷಕವಾದ ಪ್ರಿಪೇಯ್ಡ್ ಯೋಜನೆಗಳನ್ನು ನೀಡಿವೆ. ಅದರಲ್ಲೂ 200 ರೂ. ಒಳಗಿನ ಕೆಲವು ಪ್ಲಾನ್ ಹೆಚ್ಚು ಪ್ರಸಿದ್ಧಿ ಪಡೆದಿವೆ. ಈ ಯೋಜನೆಯಲ್ಲಿ ಅನಿಯಮಿತ ಕರೆ, ಅತ್ಯುತ್ತಮ ಡೇಟಾ, ಉಚಿತ ಎಸ್ ಎಮ್ ಎಸ್ ಆಫರ್ ಕೂಡ ಇದೆ.
ಏರ್‌ಟೆಲ್ 200 ರೂ. ಒಳಗಿನ ಪ್ರಿಪೇಯ್ಡ್ ಪ್ಲಾನ್ ಗಳು
ರೂ. 155: ಈ ಪ್ಲಾನ್ ನಲ್ಲಿ 1GB ಡೇಟಾ ಉಚಿತವಾಗಿ ಸಿಗುತ್ತದೆ. ಅನಿಯಮಿತ ಕರೆ ಆಫರ್ ಕೂಡ ಇದ್ದು 300 ಎಸ್ ಎಮ್ ಎಸ್ ಫ್ರೀ ಇದೆ. ಇದು 24 ದಿನಗಳ ವ್ಯಾಲಿಡಿಯನ್ನು ಹೊಂದಿದೆ. ಜೊತೆಗೆ ಹೆಲೋ ಟ್ಯೂನ್ಸ್ ಮತ್ತು ಉಚಿತ ವಿಂಗ್ ಮ್ಯೂಸಿಕ್ ಚಂದಾದಾರಿಕೆ ಸಿಗುತ್ತದೆ.
ರೂ. 179: ಈ ಪ್ಲಾನ್ ನಲ್ಲಿ ಒಟ್ಟು 2GB ಡೇಟಾ ಉಚಿತವಾಗಿ ಸಿಗುತ್ತದೆ. ಅನಿಯಮಿತ ಕರೆ ಆಫರ್ ಕೂಡ ಇದ್ದು 300 ಎಸ್ ಎಮ್ ಎಸ್ ಫ್ರೀ ಇದೆ. ಇದು 24 ದಿನಗಳ ವ್ಯಾಲಿಡಿ ಹೊಂದಿದೆ. ಜೊತೆಗೆ ಹೆಲೋ ಟ್ಯೂನ್ಸ್ ಮತ್ತು ಉಚಿತ ವಿಂಗ್ ಮ್ಯೂಸಿಕ್ ಚಂದಾದಾರಿಕೆ ಸಿಗುತ್ತದೆ.
ರೂ. 209: ಈ ಪ್ಲಾನ್ ನಲ್ಲಿ ದಿನಕ್ಕೆ 1GB ಡೇಟಾ ಉಚಿತವಾಗಿ ಸಿಗುತ್ತದೆ. ಅನಿಯಮಿತ ಕರೆ ಆಫರ್ ಕೂಡ ಇದ್ದು ಒಟ್ಟು 300 ಎಸ್ ಎಮ್ ಎಸ್ ಫ್ರೀ ಇದೆ. ಇದು 21 ದಿನಗಳ ವ್ಯಾಲಿಡಿಯನ್ನು ಹೊಂದಿದೆ. ಜೊತೆಗೆ ಹೆಲೋ ಟ್ಯೂನ್ಸ್ ಮತ್ತು ಉಚಿತ ವಿಂಗ್ ಮ್ಯೂಸಿಕ್ ಚಂದಾದಾರಿಕೆ ಸಿಗುತ್ತದೆ.
ಜಿಯೋ 200 ರೂ. ಒಳಗಿನ ಪ್ರಿಪೇಯ್ಡ್ ಪ್ಲಾನ್ ಗಳು
ರೂ. 149: ಈ ಪ್ಲಾನ್ ನಲ್ಲಿ ದಿನಕ್ಕೆ 1GB ಡೇಟಾ ಉಚಿತವಾಗಿ ಸಿಗುತ್ತದೆ. ಅನಿಯಮಿತ ಕರೆ ಆಫರ್ ಕೂಡ ಇದ್ದು ದಿನಕ್ಕೆ 10 ಎಸ್ ಎಮ್ ಎಸ್ ಫ್ರೀ ಇದೆ. ಇದು 20 ದಿನಗಳ ವ್ಯಾಲಿಡಿಯನ್ನು ಹೊಂದಿದೆ.
ರೂ. 179: ಈ ಪ್ಲಾನ್ ನಲ್ಲಿ ಕೂಡ ದಿನಕ್ಕೆ 1GB ಡೇಟಾ ಉಚಿತವಾಗಿ ಸಿಗುತ್ತದೆ. ಅನಿಯಮಿತ ಕರೆ ಆಫರ್ ಕೂಡ ಇದ್ದು ದಿನಕ್ಕೆ 10 ಎಸ್ ಎಮ್ ಎಸ್ ಫ್ರೀ ಇದೆ. ಆದರೆ, ಇದು 24 ದಿನಗಳ ವ್ಯಾಲಿಡಿಯನ್ನು ಹೊಂದಿದೆ.
ರೂ. 209: ಈ ಪ್ಲಾನ್ ನಲ್ಲಿ ದಿನಕ್ಕೆ 1GB ಡೇಟಾ ಉಚಿತವಾಗಿ ಸಿಗುತ್ತದೆ. ಅನಿಯಮಿತ ಕರೆ ಆಫರ್ ಕೂಡ ಇದ್ದು ದಿನಕ್ಕೆ 10 ಎಸ್ ಎಮ್ ಎಸ್ ಫ್ರೀ ಇದೆ. ಇದು 28 ದಿನಗಳ ವ್ಯಾಲಿಡಿಯನ್ನು ಹೊಂದಿದೆ.
ವೊಡಾಫೋನ್ ಐಡಿಯಾ 200 ರೂ. ಒಳಗಿನ ಪ್ರಿಪೇಯ್ಡ್ ಪ್ಲಾನ್ ಗಳು
ರೂ. 179: ಈ ಪ್ಲಾನ್ ನಲ್ಲಿ ಒಟ್ಟು 2GB ಡೇಟಾ ಉಚಿತವಾಗಿ ಸಿಗುತ್ತದೆ. ಅನಿಯಮಿತ ಕರೆ ಆಫರ್ ಕೂಡ ಇದ್ದು ಒಟ್ಟು 300 ಎಸ್ ಎಮ್ ಎಸ್ ಫ್ರೀ ಇದೆ. ಇದು 28 ದಿನಗಳ ವ್ಯಾಲಿಡಿಯನ್ನು ಹೊಂದಿದೆ. ಜೊತೆಗೆ ವಿ ಮ್ಯೂಸಿಕ್ ಮತ್ತು ಟಿವಿಯ ಚಂದಾದಾರಿಕೆ ಸಿಗುತ್ತದೆ.
ರೂ. 195: ಈ ಪ್ಲಾನ್ ನಲ್ಲಿ ಕೂಡ ಒಟ್ಟು 2GB ಡೇಟಾ ಉಚಿತವಾಗಿ ಸಿಗುತ್ತದೆ. ಅನಿಯಮಿತ ಕರೆ ಆಫರ್ ಕೂಡ ಇದ್ದು ಒಟ್ಟು 300 ಎಸ್ ಎಮ್ ಎಸ್ ಫ್ರೀ ಇದೆ. ಇದು ಒಂದು ತಿಂಗಳ ವ್ಯಾಲಿಡಿಯನ್ನು ಹೊಂದಿದೆ. ಜೊತೆಗೆ ವಿ ಮ್ಯೂಸಿಕ್ ಮತ್ತು ಟಿವಿಯ ಚಂದಾದಾರಿಕೆ ಸಿಗುತ್ತದೆ.