ಸ್ಯಾಮ್‌ಸಂಗ್ ಮೊಬೈಲ್ ಖರೀದಿಸುವವರಿಗೆ ದೀಪಾವಳಿ ಧಮಾಕಾ – 10 ಸಾವಿರದವರೆಗೆ ಡಿಸ್ಕೌಂಟ್ ನಲ್ಲಿ ಮೊಬೈಲ್ ಖರೀದಿಸಿ

ನ್ಯೂಸ್ ಆ್ಯರೋ : ಭಾರತದಲ್ಲಿ ಸ್ಯಾಮ್ಸಂಗ್ ಕಂಪನಿಯ ಮೊಬೈಲ್ಗಳಿಗೆ ವಿಶೇಷ ಬೇಡಿಕೆ ಇದೆ. ಯಾಕೆಂದರೆ ಸ್ಯಾಮ್ಸಂಗ್ ಬಜೆಟ್ ಬೆಲೆಯಿಂದ ಹಿಡಿದು ಮಧ್ಯಮ ಹಾಗೂ ಹೈ ರೇಂಜ್ ಮಾದರಿಯವರೆಗೆ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಮುಖ್ಯವಾಗಿ ಕಡಿಮೆ ಬೆಲೆಯ ಸ್ಯಾಮ್ಸಂಗ್ ಫೋನುಗಳಿಗೆ ದೇಶದಲ್ಲಿ ಭರ್ಜರಿ ಬೇಡಿಕೆ ಇದೆ. ಇದಕ್ಕಾಗಿ ಭಾರತದಲ್ಲಿ ಹೆಚ್ಚು ಬಜೆಟ್ ಬೆಲೆಗೇ ಫೋನ್ ಅನಾವರಣ ಮಾಡುತ್ತಿದೆ. ಅದರಲ್ಲೂ ತನ್ನ A ಸರಣಿಯ ಫೋನ್ಗೆ ಅತ್ಯುತ್ತಮ ಪ್ರತಿಕ್ರಿಯೆ ಕೇಳಿಬರುತ್ತದೆ.

ಇದೀಗ ದೀಪಾವಳಿ ಸೇಲ್ ನಲ್ಲೂ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ ಗಳಿಗೆ ಭಾರೀ ಡಿಮ್ಯಾಂಡ್ ಇದ್ದು, ಗ್ರಾಹಕರು ಸ್ಯಾಮ್‌ಸಂಗ್ ಬ್ರ್ಯಾಂಡ್ ನ ಫೋನ್ ಗಳ ಖರೀದಿಗೆ ಹೆಚ್ಚು ಒಲವು ತೋರಿಸಿದ್ದಾರೆ.
ಭಾರತದಲ್ಲಿ ಹಬ್ಬದ ಸೀಸನ್ ಶುರುವಾಗಿದೆ. ಇ ಕಾಮರ್ಸ್ ತಾಣಗಳಲ್ಲಂತೂ ಬಂಪರ್ ಡಿಸ್ಕೌಂಟ್ಗೆ ಮೊಬೈಲ್, ಲ್ಯಾಪ್ಟಾಪ್, ಡ್ರೆಸ್ ಸೇರಿದಂತೆ ಎಲೆಕ್ಟ್ರಾನಿಕ್ ವಸ್ತುಗಳು ಮಾರಾಟ ಆಗುತ್ತಿದೆ. ಮುಖ್ಯವಾಗಿ ಸ್ಯಾಮ್ಸಂಗ್ ಕಂಪನಿಯ ಸ್ಮಾರ್ಟ್ಫೋನ್ಗಳು ಭರ್ಜರಿ ರಿಯಾಯಿತಿ ಪಡೆದುಕೊಂಡಿದೆ.
ಅಮೆಜಾನ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ S20 FE 5G ಕೇವಲ 29,990 ರೂ. ಗೆ ಮಾರಾಟ ಆಗುತ್ತಿದೆ. ಆದರೆ, ನೀವು ಇನ್ನೊಂದಿಷ್ಟು ಹಣ ಹಾಕುವವರಾಗಿದ್ದರೆ ಗ್ಯಾಲಕ್ಸಿ S21 FE 5G ಅನ್ನು ಫ್ಲಿಪ್ಕಾರ್ಟ್ನಲ್ಲಿ ಕೇವಲ 35,999 ರೂ. ಗೆ ಖರೀದಿಸಬಹುದು. ಇದರ ಮೂಲಬೆಲೆ 54,999 ರೂ. ಆಗಿದೆ. ಇವುಗಳ ನಡುವೆ ಫ್ಲ್ಯಾಗ್ಶಿಪ್ 5G ಸ್ಮಾರ್ಟ್‌ಫೋನ್ ಗ್ಯಾಲಕ್ಸಿ S22 ಅಮೆಜಾನ್ ದೀಪಾವಳಿ ಸೇಲ್ನಲ್ಲಿ ಬಂಪರ್ ಡಿಸ್ಕೌಂಟ್ನಲ್ಲಿ ಲಭ್ಯವಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S22 ಸ್ಮಾರ್ಟ್‌ಫೋನ್ 50,000 ರೂ. ಗಳ ಒಳಗೆ ಖರೀದಿಸಬಹುದು. ಅಮೆಜಾನ್ನಲ್ಲಿ ಇದರ ಬೆಲೆಯು 59,000 ರೂ. ಆಗಿದ್ದು, ಕೊಡುಗೆಯಲ್ಲಿ ಈ ಫೋನ್ 49,000 ರೂ. ಗಳಿಗೆ ದೊರೆಯುತ್ತದೆ. 10,000 ರೂ. ಗಳ ರಿಯಾಯಿತಿ ಕೂಪನ್ ಕೊಡುಗೆ ಲಭ್ಯವಾಗಲಿದೆ. ಫ್ಯಾಂಟಮ್ ವೈಟ್, ಫ್ಯಾಂಟಮ್ ಬ್ಲಾಕ್ ಮತ್ತು ಗ್ರೀನ್ ಬಣ್ಣಗಳಲ್ಲಿ ಈ ಫೋನನ್ನು ಖರೀದಿಸಬಹುದು.
ಗ್ಯಾಲಕ್ಸಿ S22 ಸ್ಮಾರ್ಟ್‌ಫೋನ್ 6.1 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಡೈನಾಮಿಕ್ AMOLED 2X ಡಿಸ್‌ಪ್ಲೇಯನ್ನು ಹೊಂದಿದ್ದು ಜೊತೆಗೆ ಡಿಸ್‌ಪ್ಲೇಯು ಗೊರಿಲ್ಲಾ ಗ್ಲಾಸ್ ವಿಕ್ಟಸ್ + ನಿಂದ ರಕ್ಷಿಸಲಾಗಿದೆ. 8 GB RAM ಮತ್ತು 256 GB ವೇರಿಯಂಟ್ ಆಯ್ಕೆ ಪಡೆದಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 12 ಓಎಸ್ ಸಪೋರ್ಟ್ ಪಡೆದಿದೆ. ಆಕ್ಟಾ ಕೋರ್ 4nm SoC ಪ್ರೊಸೆಸರ್ ಬೆಂಬಲ ನೀಡಲಾಗಿದೆ.

ಹಾಗೆಯೇ ಈ ಫೋನ್ ಟ್ರಿಪಲ್ ಕ್ಯಾಮೆರಾ ರಚನೆಯನ್ನು ಒಳಗೊಂಡಿದ್ದು, ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯವನ್ನು ಪಡೆದಿದೆ. 3,700mAh ಬ್ಯಾಟರಿ ಬ್ಯಾಕ್‌ಅಪ್ ಪಡೆದಿದ್ದು, 15W ವೈರ್‌ಲೆಸ್ ಚಾರ್ಜಿಂಗ್ ಮತ್ತು ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್‌ಗಾಗಿ ವೈರ್‌ಲೆಸ್ ಪವರ್‌ಶೇರ್ ಅನ್ನು ಸಹ ಬೆಂಬಲಿಸುತ್ತದೆ. ಹಾಗೆಯೇ 5G, 4G LTE, ವೈ ಫೈ 6, ಬ್ಲೂಟೂತ್ v5.2, ಜಿಪಿಎಸ್/ A ಜಿಪಿಎಸ್, NFC ಮತ್ತು USB ಟೈಪ್ ಸಿ ಪೋರ್ಟ್ ನಂತಹ ಕನೆಕ್ಟಿವಿಟಿ ಆಯ್ಕೆ ಇದೆ.
ಇನ್ನೂ ಈ ಹಬ್ಬದ ಸೀಜನ್ ನಲ್ಲಿ ಶೇ.26ರಷ್ಟು ಸ್ಯಾಮ್‍ಸಂಗ್ ಫೋನ್ ಮಾರಾಟಗೊಂಡಿದ್ದು, ಸೆ. 30ರವರೆಗಿನ ಕಾಲಾವಧಿಯಲ್ಲಿ ಸ್ಯಾಮ್‌ಸಂಗ್ 33 ಲಕ್ಷಕ್ಕೂ ಹೆಚ್ಚು ಸ್ಮಾರ್ಟ್‌ಫೋನ್‌ಗಳನ್ನು ಸೇಲ್ ಆಗಿದೆ ಎಂದು ವರದಿಗಳು ಹೇಳಿದೆ.
ಇನ್ನೂ ಚೀನೀ ಸ್ಮಾರ್ಟ್‌ಫೋನ್ ಬ್ರಾಂಡ್‌ಗಳಾದ Xiaomi ಮತ್ತು Realmeಗಳನ್ನು ಸ್ಯಾಮ್‍ಸಂಗ್ ಹಿಂದಿಕ್ಕಿದ್ದು, ಹಬ್ಬದ ಸೇಲ್ ನಲ್ಲಿ Xiaomi 2.5 ಮಿಲಿಯನ್ ನಷ್ಟು ಮಾರಾಟಗೊಂಡರೆ, ರಿಯಲ್ ಮಿ 2.2 ಮಿಲಿಯನ್ ಯುನಿಟ್‌ಗಳ ಮಾರಾಟದೊಂದಿಗೆ ಟಾಪ್ 3 ಶ್ರೇಯಾಂಕ ಪಡೆದುಕೊಂಡಿದೆ. ಇದರೊಂದಿಗೆ ಐಫೋನ್ 13 ಮತ್ತು ಹಳೆಯ ಐಫೋನ್ ಮಾರಾಟ ಗಣನೀಯ ಮಟ್ಟದಲ್ಲಿ ಇಳಿಕೆ ಕಂಡಿದ್ದು, ಆಕರ್ಷಕ ರಿಯಾಯಿತಿ ಇದ್ದರೂ ಗ್ರಾಹಕರ ಮನ ಗೆಲ್ಲುವಲ್ಲಿ ಐಫೋನ್ ಸೋತಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಐಫೋನ್ ಮಾರಾಟ ಪ್ರಮಾಣದಲ್ಲಿ ಶೇ.2ರಷ್ಟು ಕುಸಿತ ಕಂಡಿದೆ.