1. Home
  2. Tech
  3. News
  4. ಸದ್ಯದಲ್ಲೇ ಡ್ಯುಯೆಲ್ ಸಿಮ್ ಫೀಚರ್ಸ್ ಫೋನ್ ಗಳಿಗೆ ಕಡಿವಾಣ – ಕಾರಣವೇನು ಗೊತ್ತಾ…!?

ಸದ್ಯದಲ್ಲೇ ಡ್ಯುಯೆಲ್ ಸಿಮ್ ಫೀಚರ್ಸ್ ಫೋನ್ ಗಳಿಗೆ ಕಡಿವಾಣ – ಕಾರಣವೇನು ಗೊತ್ತಾ…!?

ಸದ್ಯದಲ್ಲೇ ಡ್ಯುಯೆಲ್ ಸಿಮ್ ಫೀಚರ್ಸ್ ಫೋನ್ ಗಳಿಗೆ ಕಡಿವಾಣ – ಕಾರಣವೇನು ಗೊತ್ತಾ…!?
0

ನ್ಯೂಸ್ ಆ್ಯರೋ : ತಂತ್ರಜ್ಞಾನದ ಪ್ರಗತಿಯಿಂದಾಗಿ ಸ್ಮಾರ್ಟ್ಫೋನ್ಗಳಲ್ಲಿ ಡ್ಯುಯಲ್ ಸಿಮ್ ಫೀಚರ್ಸ್ ಬಂತು. ಇದರಿಂದ ಒಂದು ಸ್ಮಾರ್ಟ್ಫೋನ್ನಲ್ಲಿ ಎರಡು ಸಿಮ್ಗಳನ್ನು ಬಳಸಬಹುದಿತ್ತು. ಡ್ಯುಯಲ್ ಸಿಮ್ಗಳ ಬಳಕೆ ವ್ಯಾಪಕವಾಗಿ ಬೆಳೆಯಲು ಕಾರಣ ಟೆಲಿಕಾಂ ಕಂಪೆನಿಗಳು ಬಿಡುಗಡೆ ಮಾಡುತ್ತಿದ್ದ ರೀಚಾರ್ಜ್ ಪ್ಲಾನ್ಗಳು. ಆದರೆ ಇದೀಗ ಎಲ್ಲಾ ಸಿಮ್ಗಳ ರೀಚಾರ್ಜ್ ಪ್ಲಾನ್ಗಳು ಒಂದೇ ರೀತಿಯಿದ್ದುದರಿಂದ ಒಂದೇ ಸಿಮ್‌ನ್ನು ಬಳಕೆ ಮಾಡುತ್ತಿದ್ದಾರೆ.

ರೀಚಾರ್ಜ್ ವ್ಯಾಲಿಡಿಟಿಯಲ್ಲಿ ಬದಲಾವಣೆ

ಹಿಂದಿನ ಸಿಮ್ ಬಳಕೆ ಮಾಡಬೇಕಾದರೆ ಪ್ರತಿ ತಿಂಗಳು ರೀಚಾರ್ಜ್ ಮಾಡಬೇಕೆಂದಿರಲಿಲ್ಲ. ರೀಚಾರ್ಜ್ ಮಾಡಿದ ಅನುಸಾರ ನಾವು ಯಾರಿಗೂ ಬೇಕಾದರೂ ಕರೆ ಮಾಡಬಹುದಿತ್ತು. ಆದರೆ ಕೆಲವರ್ಷಗಳ ಹಿಂದೆ ಟೆಲಿಕಾಂ ಕಂಪೆನಿಗಳು ಈ ನಿಯಮವನ್ನು ಸ್ವಲ್ಪ ಮಟ್ಟಿಗೆ ಬದಲಾವಣೆ ಮಾಡಿ, ಸಿಮ್ ಕಾರ್ಡ್ ಆಕ್ಟೀವ್ ಇರಬೇಕಾದರೆ ಪ್ರತೀ ತಿಂಗಳು ರೀಚಾರ್ಜ್ ಮಾಡುವಂತೆ ನಿಯಮವನ್ನು ತಂದಿದ್ದಾರೆ.


ರೀಚಾರ್ಜ್‌ ಮಾಡದಿದ್ದಲ್ಲಿ ಇಂಟರ್ನೆಟ್, ಕರೆ ಮಾಡುವ ಮತ್ತು ಸ್ವೀಕರಿಸುವ ಸೌಲಭ್ಯಗಳು ದೊರೆಯುವುದಿಲ್ಲ. ಒಂದು ವೇಳೆ ರೀಚಾರ್ಜ್ ಮಾಡದಿದ್ದರೆ ಸಿಮ್ಗೆ ಸಂಬಂಧಪಟ್ಟ ಟೆಲಿಕಾಂ ಕಂಪೆನಿಯು ಕರೆ ಮಾಡಿ ರೀಚಾರ್ಜ್ ಮಾಡದಿದ್ದರೆ ನಿಮ್ಮ ಸಿಮ್‌ನ ಯೋಜನೆಗಳನ್ನು ನಿಲ್ಲಿಸಲಾಗುತ್ತದೆ ಎಂದು ತಿಳಿಸುತ್ತಾರೆ. ಇದರಿಂದ ಗ್ರಾಹಕರಿಗೆ ಎರಡು ಸಿಮ್‌ ಅನ್ನು ರೀಚಾರ್ಜ್ ಮಾಡಿದರೆ ಉಪಯೋಗವಿರುವುದಿಲ್ಲ. ಆ ನಿಟ್ಟಿನಲ್ಲಿ ಹೆಚ್ಚಾಗಿ ಒಂದೇ ಸಿಮ್‌ ಅನ್ನು ಬಳಸುತ್ತಾರೆ.

ಏಪ್ರಿಲ್‌ನಲ್ಲಿ 70 ಲಕ್ಷ ಸಿಮ್ ನಿಷ್ಕ್ರಿಯ

ಸಾಮಾನ್ಯವಾಗಿ ಇತ್ತೀಚೆಗೆ ಎಲ್ಲಾ ಟೆಲಿಕಾಂ ಕಂಪೆನಿಗಳ ರೀಚಾರ್ಜ್ ಪ್ಲಾನ್ಗಳು ಒಂದೇ ರೀತಿಯಾಗಿದೆ. ಇದರ ಪರಿಣಾಮವಾಗಿ ಈ ವರ್ಷದ ಏಪ್ರಿಲ್‌ನಲ್ಲಿ ಸುಮಾರು 70 ಲಕ್ಷ ಜನರು ಸಿಮ್ ಬಳಸುವುದನ್ನೇ ನಿಲ್ಲಿಸಿದ್ದು, ಇವುಗಳಲ್ಲಿ ವೊಡಾಫೋನ್-ಐಡಿಯಾ ಮೊದಲ ಸ್ಥಾನದಲ್ಲಿದ್ದರೆ, ಏರ್‌ಟೇಲ್ ದ್ವಿತೀಯ ಸ್ಥಾನದಲ್ಲಿದೆ.

ರೀಚಾರ್ಜ್ ದರದಲ್ಲಿ ಹೆಚ್ಚಳ:

ಕಳೆದ ನವೆಂಬರ್ – ಡಿಸೆಂಬರ್ನಲ್ಲಿ ಕಂಪೆನಿಗಳ ರೀಚಾರ್ಜ್ ಬೆಲೆಯನ್ನು ಹೆಚ್ಚಿಸಿತ್ತು. ಮುಂದಿನ ದಿನಗಳಲ್ಲಿ ದೇಶದೆಲ್ಲೆಡೆ 5ಜಿ ಸೇವೆ ಕೂಡ ಆರಂಭವಾಗುವುದರಿಂದ ರೀಚಾರ್ಜ್‌ ದರದಲ್ಲಿ ಹೆಚ್ಚಳವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಒಂದೇ ರೀತಿಯ ರೀಚಾರ್ಜ್‌ನಿಂದಾಗಿ ಗ್ರಾಹಕರು ಡ್ಯುಯಲ್ ಸಿಮ್ಗಳಿಂದ ಒಂದು ಸಿಮ್ನ ಬಳಕೆಯತ್ತ ಮುಖಮಾಡಿದ್ದು, ಸಹಜವಾಗಿಯೇ ಡ್ಯುಯೆಲ್ ಸಿಮ್ ಫೋನ್ ಗಳು ಮರೆಯಾಗುವ ದಿನಗಳು ದೂರವಿಲ್ಲ..

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..