1. Home
  2. Tech
  3. News
  4. ಮತ್ತೆ ಟ್ವಿಟರ್ ಖರೀದಿಗೆ ಮುಂದಾದ ಟೆಸ್ಲಾ ಒಡೆಯ ಎಲಾನ್ ಮಸ್ಕ್ – ಶೇರ್ ಮಾರ್ಕೆಟ್ ನಲ್ಲಿ ಟ್ವಿಟರ್ ದರ ದಿಢೀರ್ ಏರಿಕೆ

ಮತ್ತೆ ಟ್ವಿಟರ್ ಖರೀದಿಗೆ ಮುಂದಾದ ಟೆಸ್ಲಾ ಒಡೆಯ ಎಲಾನ್ ಮಸ್ಕ್ – ಶೇರ್ ಮಾರ್ಕೆಟ್ ನಲ್ಲಿ ಟ್ವಿಟರ್ ದರ ದಿಢೀರ್ ಏರಿಕೆ

ಮತ್ತೆ ಟ್ವಿಟರ್ ಖರೀದಿಗೆ ಮುಂದಾದ ಟೆಸ್ಲಾ ಒಡೆಯ ಎಲಾನ್ ಮಸ್ಕ್ – ಶೇರ್ ಮಾರ್ಕೆಟ್ ನಲ್ಲಿ ಟ್ವಿಟರ್ ದರ ದಿಢೀರ್ ಏರಿಕೆ
0

ನ್ಯೂಸ್ ಆ್ಯರೋ : ಟೆಸ್ಲಾ ಸಿಇಓ ಹಾಗೂ ಜಗತ್ತಿನ ಅತಿ ಶ್ರೀಮಂತರ ಪಟ್ಟಿಯಲ್ಲಿರುವ ಎಲಾನ್ ಮಸ್ಕ್ ಭಾರೀ ಚರ್ಚೆಗೆ ಒಳಗಾಗಿದ್ದ ಟ್ವಿಟ್ಟರ್ ಖರೀದಿ ವಿಚಾರವಾಗಿ ಪ್ರತಿನಿತ್ಯ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಾಗುತ್ತಿದ್ದಾರೆ.
ಇದೀಗ ಮತ್ತೆ ಟ್ವಿಟರ್ ಖರೀದಿ ವಿಚಾರ ಮುನ್ನೆಲೆಗೆ ಬಂದಿದ್ದು, ಎಲಾನ್ ಮಸ್ಕ್ ಅವರು ಮೊದಲ ಆಫರ್ ನಂತೆಯೇ ಪ್ರತಿ ಷೇರಿಗೆ 54.20 ಡಾಲರ್ ನೀಡಿ ಟ್ವಿಟರ್ ಖರೀದಿಸಲು ಒಪ್ಪಿದ್ದಾರೆ ಎಂದು ಟ್ವಿಟರ್ ಅಧಿಕೃತವಾಗಿ ಘೋಷಣೆ ಮಾಡಿದೆ.

ಕಳೆದ ಏಪ್ರಿಲ್‌ನಲ್ಲಿ ಸಾಮಾಜಿಕ ಮಾಧ್ಯಮ ದೈತ್ಯ ಟ್ವಿಟ್ಟರ್ ಅನ್ನು 44 ಶತಕೋಟಿಗೆ ಖರೀದಿಸಲು ಎಲಾನ್​ ಮಸ್ಕ್​ ವರ್ಷಾರಂಭದಲ್ಲಿ ಒಪ್ಪಂದ ಮಾಡಿಕೊಂಡಿದ್ದರು. ಆದರೆ ನಕಲಿ ಖಾತೆಗಳ ವಿಚಾರಕ್ಕೆ ಎಲಾನ್ ಮಸ್ಕ್ ಮತ್ತು ಟ್ವಿಟ್ಟರ್ ನಡುವಿನ ಒಪ್ಪಂದವು ಮುರಿದುಬಿದ್ದಿತ್ತು.

ಆದರೀಗ ಟ್ವಿಟ್ಟರ್ ಅನ್ನು ಖರೀದಿಸಲು ಎಲಾನ್ ಮಸ್ಕ್ ನಿರ್ಧರಿಸಿದ್ದು, ತಾನು ಮೊದಲು ನೀಡಿದ ಆಫರ್ ನಂತೆಯೇ ಪ್ರತಿ ಷೇರಿಗೆ 54.20 ಡಾಲರ್ ಟ್ವಿಟರ್ ಖರೀದಿ ಮಾಡುವುದಾಗಿ ಟ್ವಿಟರ್ ಗೆ ಪತ್ರ ಬರೆದಿದ್ದಾರೆ.

ಈ ಕುರಿತಾದ ಸುದ್ದಿಯನ್ನು ಬ್ಲೂಮ್‌ಬರ್ಗ್ ಮಾಧ್ಯಮಗಳು ವರದಿ ಮಾಡಿದ್ದು, ಎಲಾನ್​ ಮಸ್ಕ್​ ಟ್ವಿಟ್ಟರ್ ಖರೀದಿ ಮಾಡಲಿದ್ದಾರೆ ಎಂಬ ಸುದ್ದಿ ಹೊರಬಿದ್ದ ಬಳಿಕ ಷೇರು ಮಾರುಕಟ್ಟೆಯಲ್ಲಿ ಟ್ವಿಟ್ಟರ್​ ದರಗಳು 12.7 ರಷ್ಟು ಏರಿಕೆ ಕಂಡಿವೆ. ಇದೇ ವೇಳೆ ಟೆಸ್ಲಾದ ಷೇರುಗಳು ಶೇ.3 ರಷ್ಟು ಕುಸಿದಿವೆ. ಒಪ್ಪಂದವನ್ನು ಮುಂದುವರಿಸುವುದಾಗಿ ಎಲಾನ್​ ಮಸ್ಕ್ ಘೋಷಿಸಿದ್ದರಿಂದ ತನ್ನ ವಿರುದ್ಧದ ಪ್ರಕರಣವನ್ನು ವಜಾಗೊಳಿಸುವಂತೆ ಮನವಿ ಮಾಡಿದ್ದಾರೆ.

ಈ ಹಿಂದೆ ಟ್ವಿಟರ್ ಖರೀದಿಗೆ ಒಪ್ಪಂದ ಮಾಡಿಕೊಂಡಿದ್ದ ಒಪ್ಪಂದದಿಂದ ಹಿಂದೆ ಸರಿಯುವುದಾಗಿ ಮಸ್ಕ್ ಘೋಷಣೆ ಮಾಡಿದ್ದರು. ಟ್ವಿಟರ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿರುವ ನಕಲಿ ಖಾತೆಗಳ ಸಂಖ್ಯೆಗೆ ಸಂಬಂಧಿಸಿದಂತೆ ತನ್ನನ್ನು ದಾರಿ ತಪ್ಪಿಸುತ್ತಿದೆ ಎಂದು ಆರೋಪಿಸಿ ಈ ಟ್ವಿಟರ್ ಜೊತೆಗಿನ ಒಪ್ಪಂದವನ್ನು ರದ್ದುಗೊಳಿಸಿದ್ದರು. ಈ ಆರೋಪಗಳನ್ನು ಟ್ವಿಟರ್ ಸಂಸ್ಥ ತಿರಸ್ಕರಿಸಿತ್ತು. ಅಲ್ಲದೇ ಮಸ್ಕ್ ವಿರುದ್ಧ ಟ್ವಿಟ್ಟರ್​ ಕಾನೂನು ಹೋರಾಟ ನಡೆಸಿತ್ತು. ಶೇ.5 ಕ್ಕಿಂತ ನಕಲಿ ಖಾತೆಗಳಿವೆ ಎಂದು ಕಂಪನಿ ಮಾಹಿತಿ ನೀಡಿತ್ತು. ಆದರೆ, ಅದಕ್ಕಿಂತಲೂ ಹೆಚ್ಚಿವೆ ಎಂದು ಎಲಾನ್​ ವಾದಿಸಿ ಒಪ್ಪಂದವನ್ನೇ ಮುರಿದುಕೊಳ್ಳುವುದಾಗಿ ಹೇಳಿದ್ದರು.

ಇದೀಗ ಮನಸ್ಸು ಬದಲಾಯಿಸಿರುವ ಎಲಾನ್​ ಮಸ್ಕ್​ “ತಾನು ಮೊದಲು ನೀಡಿದ ಆಫರ್​ನಂತೆಯೇ ಪ್ರತಿ ಷೇರಿಗೆ 54.20 ಡಾಲರ್​ಗೆ ಟ್ವಿಟ್ಟರ್​ ಖರೀದಿ ಮಾಡುವುದಾಗಿ ಟ್ವಿಟ್ಟರ್​ಗೆ ಪತ್ರ ಬರೆದಿದ್ದು, ಒಪ್ಪಂದವನ್ನು ಮುಂದುವರಿಸುವುದಾಗಿ ಎಲಾನ್​ ಮಸ್ಕ್ ಘೋಷಿಸಿದ್ದರಿಂದ ತನ್ನ ವಿರುದ್ಧದ ಪ್ರಕರಣವನ್ನು ವಜಾಗೊಳಿಸುವಂತೆ ಕೋರಿದ್ದಾರೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..