1. Home
  2. Tech
  3. News
  4. ಟ್ವಿಟ್ಟರ್‌ ಖರೀದಿಸಿ ಕೈ ಸುಟ್ಟುಕೊಂಡ್ರ ಎಲಾನ್ ಮಸ್ಕ್: ನಷ್ಟದ ಸೂಚನೆ ಕೊಟ್ಟ ಶ್ರೀಮಂತ ಉದ್ಯಮಿ

ಟ್ವಿಟ್ಟರ್‌ ಖರೀದಿಸಿ ಕೈ ಸುಟ್ಟುಕೊಂಡ್ರ ಎಲಾನ್ ಮಸ್ಕ್: ನಷ್ಟದ ಸೂಚನೆ ಕೊಟ್ಟ ಶ್ರೀಮಂತ ಉದ್ಯಮಿ

ಟ್ವಿಟ್ಟರ್‌ ಖರೀದಿಸಿ ಕೈ ಸುಟ್ಟುಕೊಂಡ್ರ ಎಲಾನ್ ಮಸ್ಕ್: ನಷ್ಟದ ಸೂಚನೆ ಕೊಟ್ಟ ಶ್ರೀಮಂತ ಉದ್ಯಮಿ
0

ನ್ಯೂಸ್ ಆ್ಯರೋ : ಎಲಾನ್‌ ಮಸ್ಕ್ ಟ್ವಿಟರ್‌ನ ನೂತನ ಮಾಲೀಕರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಊಹಿಸಲಾಗದ ಬದಲಾವಣೆ ತಂದಿದ್ದು, ಇದೀಗ ಬಳಕೆದಾರರಿಗೆ ಇವರ ನಡೆ ಆತಂಕವನ್ನು ಸೃಷ್ಟಿ ಮಾಡಿದೆ. 44 ಬಿಲಿಯನ್‌ ಡಾಲರ್‌ ಕೊಟ್ಟು ಖರೀದಿಸಿರುವ ಟ್ವಿಟ್ಟರ್‌ ನಷ್ಟದಲ್ಲಿರುವ ಮುನ್ಸೂಚನೆಯೊಂದಿಗೆ ಎಲಾನ್‌ ಆತಂಕವನ್ನು ವ್ಯಕ್ತಪಡಿಸಿದ್ದಾರಂತೆ.

ಮೊದಲ ಬಾರಿ ಉದ್ಯೋಗಿಗಳನ್ನು ಉದ್ದೇಶಿಸಿ ಮಾತುಕತೆ ನಡೆಸಿದ ಎಲಾನ್ ಅವರು, ‘ಹೆಚ್ಚು ನಗದು ಉತ್ಪತ್ತಿ ಆರಂಭಿಸದೇ ಇದ್ದರೆ ಕಂಪನಿ ದಿವಾಳಿಯಾಗಲಿದೆ‌. ಅಲ್ಲದೇ, ಸಿಬ್ಬಂದಿ ಯಾವುದೇ ಲಾಭದ ಉದ್ದೇಶವಿಲ್ಲದೆ ವಾರಕ್ಕೆ 80 ಗಂಟೆ ಕೆಲಸ ಮಾಡಬೇಕು, ಇನ್ಮುಂದೆ ಕಚೇರಿಯಲ್ಲಿ ಉಚಿತ ಆಹಾರ ಸಿಗುವುದಿಲ್ಲ’ ಎಂದು ಖಡಕ್ಕಾಗಿ ಹೇಳಿದ್ದಾರೆ.

ಇವರ ಈ ಮಾತಿನಿಂದ ಜಾಹೀರಾತುದಾರರು ಆತಂಕಕ್ಕೆ ಒಳಗಾಗಿರುವುದನ್ನು ಎಲಾನ್‌ಗೆ ತಿಳಿಸಲು ಯತ್ನಿಸಿದ ವ್ಯಕ್ತಿಯೇ ರಾಜೀನಾಮೆಯನ್ನು ನೀಡಿ ಹೊರ ನಡೆದಿದ್ದಾರೆ. ಪ್ರಾರಂಭದಲ್ಲಿ ಎಲಾನ್‌ ಪ್ರಮುಖ ಹುದ್ದೆಯಲ್ಲಿದ್ದ ಹಲವು ಮಂದಿಯನ್ನು ಕೆಲಸದಿಂದ ಮನೆ ಕಳುಹಿಸಿದ್ದರು. ಇದೀಗ ಟ್ವಿಟರ್‌ನ ಅತಿಮುಖ್ಯ ವ್ಯಕ್ತಿಗಳು ಸತತವಾಗಿ ರಾಜೀನಾಮೆ ನೀಡುತ್ತಿರುವುದನ್ನು ಅಮೆರಿಕದ ವಾಣಿಜ್ಯ ಆಯೋಗವೂ ಕಳವಳದಿಂದ ನೋಡುತ್ತಿದೆ.

ದುರುಪಯೋಗವಾಗುತ್ತಿದೆ ಟ್ವಿಟ್ಟರ್‌ನ ನೀಲಿ ಚುಕ್ಕಿ:

ಟ್ವಿಟ್ಟರ್‌ನ ಖಾತೆಯನ್ನು ಅಧಿಕೃತ ಮಾಡಲು ಇರುವ ಅವಕಾಶವಾಗಿದ್ದು, ಇದೀಗ ಇದರಲ್ಲಿ ದೊಡ್ಡ ಪ್ರಮಾಣದಲ್ಲಿ ದುರುಪಯೋಗವಾಗುತ್ತಿದೆ. ಟ್ವಿಟರ್‌ನಲ್ಲಿ ನಿಷೇಧಕ್ಕೊಳಗಾಗಿರುವ ಡೊನಾಲ್ಡ್‌ ಟ್ರಂಪ್‌ ಹೆಸರಿನಲ್ಲೂ ನೀಲಿ ಗುರುತಿನ ಖಾತೆ ತೆರೆದುಕೊಂಡಿರುವ ಟ್ವಿಟ್ಟರ್‌ ದೋಷವನ್ನು ಎತ್ತಿತೋರಿಸುತ್ತಿದೆ.

ಬಾಸ್ಕೆಟ್‌ಬಾಲ್‌ ದಂತಕಥೆ ಲೆಬ್ರಾನ್‌ ಜೇಮ್ಸ್‌, ಸೂಪರ್‌ ಮಾರಿಯೊ ಹೆಸರಲ್ಲೂ ಖಾತೆಗಳು ತೆರೆದುಕೊಂಡಿದೆ. ಯೇಸುವಿನ ಹೆಸರಿನಲ್ಲಿರುವ ನಕಲಿ ಖಾತೆಗೂ ನೀಲಿ ಚುಕ್ಕಿಯನ್ನು ನೀಡಲಾಗಿದೆ. ಈ ಮೇಲಿನ ಬೆಳವಣಿಗೆಯಿಂದ ಎಲಾನ್‌ ಅಧಿಕಾರದ ನಿರ್ಧಾರಗಳು ಟ್ವಿಟ್ಟರ್‌ ಖಾತೆಯನ್ನು ದಿವಾಳಿಯನ್ನಾಗಿಸುತ್ತಾ ಎಂಬ ಪ್ರಶ್ನೆ ಬಳಕೆದಾರರಲ್ಲಿ ಉದ್ಭವವಾಗಿದೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..