1. Home
  2. Tech
  3. News
  4. ಜಗತ್ತಿನ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಸುಪರ್ದಿಗೆ ಟ್ವಿಟರ್‌ – ಸಿಇಒ ಸೇರಿದಂತೆ ಭಾರತ ಮೂಲದ ಮೂವರ ವಜಾ, ಸೇಡು ತೀರಿಸಿಕೊಂಡ್ರಾ ಟೆಸ್ಲಾ ಸ್ಥಾಪಕ?

ಜಗತ್ತಿನ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಸುಪರ್ದಿಗೆ ಟ್ವಿಟರ್‌ – ಸಿಇಒ ಸೇರಿದಂತೆ ಭಾರತ ಮೂಲದ ಮೂವರ ವಜಾ, ಸೇಡು ತೀರಿಸಿಕೊಂಡ್ರಾ ಟೆಸ್ಲಾ ಸ್ಥಾಪಕ?

ಜಗತ್ತಿನ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಸುಪರ್ದಿಗೆ ಟ್ವಿಟರ್‌ – ಸಿಇಒ ಸೇರಿದಂತೆ ಭಾರತ ಮೂಲದ ಮೂವರ ವಜಾ, ಸೇಡು ತೀರಿಸಿಕೊಂಡ್ರಾ ಟೆಸ್ಲಾ ಸ್ಥಾಪಕ?
0

ನ್ಯೂಸ್ ಆ್ಯರೋ : ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ಸಾಮಾಜಿಕ ಮಾಧ್ಯಮ ಟ್ವಿಟರ್‌ ಅನ್ನು ತನ್ನ ಸುಪರ್ದಿಗೆ ತೆಗೆದುಕೊಂಡ ಕೆಲವೇ ಗಂಟೆಗಳಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಟ್ವಿಟರ್‌ನ ಸಿಇಒ ಪರಾಗ್ ಅಗರ್‌ವಾಲ್ ಸೇರಿದಂತೆ ಉನ್ನತ ಹುದ್ದೆಯಲ್ಲಿದ್ದ ಭಾರತದ ಮೂಲದ ಹಲವರನ್ನು ಕೆಲಸದಿಂದ ವಜಾ ಮಾಡಿದ್ದಾರೆ. ಮುಂಬರುವ ದಿನಗಳಲ್ಲಿ ಅವರ ಕಾರ್ಯವೈಖರಿ ಬಗ್ಗೆ ಇನ್ನೂ ಕುತೂಹಲ ಹೆಚ್ಚಿಸಿದೆ.

ಈ ಬಗ್ಗೆ ವರದಿ ಮಾಡಿರುವ ರಾಯಿಟರ್ಸ್ ಸಂಸ್ಥೆ, ಟ್ವಿಟರ್‌ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಭಾರತ ಮೂಲದ ಪರಾಗ್‌ ಅಗರವಾಲ್, ಕಾನೂನು ವ್ಯವಹಾರಗಳು ಮತ್ತು ನೀತಿ ವಿಭಾಗದ ಮುಖ್ಯಸ್ಥೆ ವಿಜಯಾ ಗದ್ದೆ, ಮುಖ್ಯ ಹಣಕಾಸು ಅಧಿಕಾರಿ ನೆಡ್ ಸೆಗಲ್ ಅವರನ್ನು ವಜಾ ಮಾಡಿದ್ದಾರೆ ಎಂದು ವರದಿ ಪ್ರಕಟ ಮಾಡಿದೆ.

ಎಲಾನ್ ಮಸ್ಕ್‌ ಟ್ವಿಟರ್ ಖರೀದಿ ಒಪ್ಪಂದದಿಂದ ಹಿಂದೇಟು ಹಾಕಲು ಯತ್ನಿಸಿದಾಗ ಪರಾಗ್‌ ಅಗರವಾಲ್ ನ್ಯಾಯಾಲಯದ ಮೆಟ್ಟಿಲೇರಿದ್ದರು. ನ್ಯಾಯಾಲಯದಲ್ಲಿ ಹಿನ್ನಡೆಯಾಗಬಹುದೆಂಬ ಆತಂಕದಿಂದ ಮಸ್ಕ್‌ ಟ್ವಿಟರ್ ಖರೀದಿ ಪ್ರಕ್ರಿಯೆಯನ್ನು ಗುರುವಾರ ರಾತ್ರಿ ಪೂರ್ಣಗೊಳಿಸಿದ್ದರು.
ಟ್ವಿಟರ್ ಖರೀದಿ ಪ್ರಕ್ರಿಯೆಗೆ ನ್ಯಾಯಾಲಯವು ವಿಧಿಸಿದ್ದ ಗಡುವು ಪೂರ್ಣಗೊಳ್ಳಲು ಕೆಲವೇ ಗಂಟೆಗಳು ಬಾಕಿ ಇರುವಾಗ ಮಾಸ್ಕ್‌ ಈ ಮಹತ್ವದ ನಿರ್ಧಾರ ಕೈಗೊಂಡರು. ‌

ಟ್ವಿಟರ್ ಬಯೋ ಬದಲಾಯಿಸಿದ್ದ ಮಸ್ಕ್:

44 ಶತಕೋಟಿ ಡಾಲರ್ ಮೊತ್ತದ ಸಾಮಾಜಿಕ ಮಾಧ್ಯಮ ಟ್ವಿಟರ್‌ ಖರೀದಿ ಪ್ರಕ್ರಿಯೆ ಮುಗಿಯುವ ಮೊದಲೇ ತಮ್ಮನ್ನು ತಾವು ಚೀಫ್ ಟ್ವೀಟ್ ಎಂದು ಕರೆದುಕೊಂಡಿದ್ದು, ಅದಲ್ಲದೆ ವೈಯಕ್ತಿಕ ವಿವರಗಳನ್ನು ಬದಲಾಯಿಸಿದ್ದರು. ಬುಧವಾರ ಸ್ಯಾನ್​ಫ್ರಾನ್ಸಿಸ್ಕೊ ನಗರದಲ್ಲಿರುವ ಟ್ವಿಟರ್ ಕಂಪನಿಯ ಕೇಂದ್ರ ಕಚೇರಿಗೆ ಎಲಾನ್ ಮಸ್ಕ್ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಕೈ ತೊಳೆಯುವ ಸಿಂಕನ್ನು ಕಚೇರಿಗೆ ತಂದಿರುವ ವಿಡಿಯೋವನ್ನು ಶೇರ್ ಮಾಡಿ ಟ್ವಿಟರ್‌ ಕಚೇರಿಗೆ ಹೋಗುತ್ತಿದ್ದೇನೆ, ಇದು ನನ್ನೊಂದಿಗೆ ಬೆರೆತುಕೊಳ್ಳಲಿ ಎಂದು ಬರೆದುಕೊಂಡಿದ್ದಾರೆ.

ಖರೀದಿ ಪ್ರಕ್ರಿಯೆ ಮುಗಿದ ಬಳಿಕ ಈ ಸಂಬಂಧ ಟ್ವೀಟ್ ಮಾಡಿರುವ ಮಾಸ್ಕ್‌, ‘ಟ್ವಿಟರ್‌ನಲ್ಲಿ ನಕಲಿ ಖಾತೆಗಳಿಗೆ ಬ್ರೇಕ್ ಬೀಳಲಿದ್ದು, ನಾಗರಿಕತೆಯ ಭವಿಷ್ಯಕ್ಕೆ ಒಂದು ಆರೋಗ್ಯಕರ ವೇದಿಕೆ ಸೃಷ್ಟಿಯಾಗಿದೆ. ಬೇರೆ ಬೇರೆ ದೃಷ್ಟಿಕೋನದ ಜನರು ಒಂದೇ ವೇದಿಕೆಯಡಿಯಲ್ಲಿ ಆರೋಗ್ಯಕರವಾಗಿ ಚರ್ಚಿಸಲು ಅವಕಾಶ ಇರುತ್ತದೆ. ಪೋಸ್ಟ್​ಗಳು ಹೇಗೆ ಕಾಣಿಸುತ್ತದೆ ಎಂದು ಪತ್ತೆ ಮಾಡಲು ಟ್ವಿಟರ್​ನ ಆಲ್ಗರಿದಂ ಮಾರ್ಪಡಿಸಬೇಕು. ಟ್ವಿಟರ್ ವೇದಿಕೆಯು ದ್ವೇಷ ಮತ್ತು ವಿಭಜನೆಯ ‘ಎಕೊ ಛೇಂಬರ್’(ಪ್ರತಿಧ್ವನಿ ಪೆಟ್ಟಿಗೆ) ಆಗಬಾರದು. ಹಾಗೆಂದು ವಿಪರೀತ ಸೆನ್ಸಾರ್​ಶಿಪ್ ಇರಬಾರದು’ಎಂದಿದ್ದಾರೆ.

‘ನಾನು ಹಣ ಮಾಡಬೇಕೆಂಬ ಉದ್ದೇಶದಿಂದ ಟ್ವಿಟರ್‌ ಅನ್ನು ಖರೀದಿಸಿಲ್ಲ. ಈ ಮೂಲಕ ನಾನು ತುಂಬಾ ಪ್ರೀತಿಸುವ ಮನುಕುಲಕ್ಕೆ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದೇನೆ’ ಎಂದು ಮಸ್ಕ್ ಟ್ವೀಟ್ ಮಾಡಿ ಜಾಹೀರಾತುದಾರರಿಗೆ ಎರಡು ಪುಟಗಳ ಪತ್ರವನ್ನು ಬರೆದಿದ್ದಾರೆ.

ಇನ್ನೂ ತಮ್ಮ ಆಡಳಿತದ ಅವಧಿಯಲ್ಲಿ ಟ್ವಿಟರ್‌ ಅನ್ನು ಹೇಗೆ ನಿರ್ವಹಿಸುತ್ತೇನೆ ಎಂಬ ಯಾವುದೇ ಮಾಹಿತಿಯನ್ನು ಬಿಚ್ಚಿಡದಿದ್ದರೂ ಏಕಾಏಕಿ ತೆಗದುಕೊಂಡ ನಿರ್ಧಾರದಿಂದ ‘ಉದ್ಯೋಗಿಗಳ ಸಂಖ್ಯೆ ಕಡಿಮೆ ಮಾಡಲಾಗುವುದು’ಎಂದು ಹೇಳಿ ಸುಮ್ಮನಾಗಿದ್ದಾರೆ. ಇವರ ಈ ಹೇಳಿಕೆ 7,500 ಉದ್ಯೋಗಿಗಳಲ್ಲಿ ಕೆಲಸ ಕಳೆದುಕೊಳ್ಳುವ ಭೀತಿ ಎದುರಾಗಿದೆ.‌ ಕಚೇರಿಗೆ ಭೇಟಿ ಕೊಟ್ಟ ವೇಳೆ ಟ್ವಿಟರ್ ಮುನ್ನಡೆಸುವ ಕುರಿತು ತಮ್ಮ ಆಲೋಚನೆಗಳನ್ನು ಉದ್ಯೋಗಿಗಳೊಂದಿಗೆ ಹಂಚಿಕೊಳ್ಳುತ್ತಿರುವ ಚಿತ್ರವನ್ನು ಶೇರ್ ಮಾಡಿದ್ದಾರೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..