1. Home
  2. Tech
  3. News
  4. ಸ್ಮಾರ್ಟ್‌ಫೋನ್ ಬಳಕೆದಾರರೇ ಎಚ್ಚರವಾಗಿರಿ – ಇಂತಹ ಆ್ಯಪ್’ಗಳಿದ್ದರೆ ತಕ್ಷಣ ಡಿಲೀಟ್ ಮಾಡಿ..!!

ಸ್ಮಾರ್ಟ್‌ಫೋನ್ ಬಳಕೆದಾರರೇ ಎಚ್ಚರವಾಗಿರಿ – ಇಂತಹ ಆ್ಯಪ್’ಗಳಿದ್ದರೆ ತಕ್ಷಣ ಡಿಲೀಟ್ ಮಾಡಿ..!!

ಸ್ಮಾರ್ಟ್‌ಫೋನ್ ಬಳಕೆದಾರರೇ ಎಚ್ಚರವಾಗಿರಿ – ಇಂತಹ ಆ್ಯಪ್’ಗಳಿದ್ದರೆ ತಕ್ಷಣ ಡಿಲೀಟ್ ಮಾಡಿ..!!
0

ನ್ಯೂಸ್ ಆ್ಯರೋ : ಈಗಿನ‌ ಕಾಲದಲ್ಲಿ ಎಷ್ಟು ಹುಷಾರಾಗಿದ್ರೂ ಸಾಲೋದಿಲ್ಲ. ಅದ್ರಲ್ಲೂ ನಮಗೆ ಗೊತ್ತಿಲ್ಲದಂತೆ ನಮ್ಮ‌ ವೈಯಕ್ತಿಕ ಮಾಹಿತಿ‌ ಪಡೆದು ಆನ್ಲೈನ್ ವಂಚನೆ, ಬ್ಲಾಕ್ ಮೇಲ್ ಮಾಡಿ ಹಣ ಕೀಳುವ ದೊಡ್ಡ ಜಾಲವೇ ಇದೆ.‌ ಅಷ್ಟೇ ಅಲ್ಲ, ವೈರಸ್’ಗಳ‌ ಮೂಲಕ ಖಾಸಗಿ ಫೋಟೋ, ವಿಡಿಯೋಗಳನ್ನು ಫೋನ್’ನಿಂದ ಕದ್ದು ದುರುಪಯೋಗ ಪಡಿಸಿಕೊಳ್ಳುವಂತಹ ಅನೇಕ ಘಟನೆಗಳು ನಡೆಯುತ್ತಿವೆ. ಈ ಮಧ್ಯೆ ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಆ್ಯಪಲ್ ಮತ್ತು ಆ್ಯಂಡ್ರಾಯ್ಡ್ ಫೋನ್ ಬಳಕೆದಾರರಿಗೆ ಎಚ್ಚರಿಕೆ ನೀಡಿದ್ದು, ಕೆಲವು ನಿರ್ದಿಷ್ಟ ಆ್ಯಪ್’ಗಳನ್ನು ಡಿಲೀಟ್ ಮಾಡುವಂತೆ ತಿಳಿಸಿದೆ.‌

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿರುವ ಕೆಲವು ಆ್ಯಪ್’ಗಳು ನಿಮ್ಮ ವೈಯಕ್ತಿಕ ಮಾಹಿತಿ ಕದಿಯುವ ಸಾಧ್ಯತೆ ಇರುವುದರಿಂದ ಫೇಸ್‌ಬುಕ್‌ ಈ ಎಚ್ಚರಿಕೆ ನೀಡಿದೆ.

ಸ್ಮಾರ್ಟ್‌ಫೋನ್ ಬಳಕೆದಾರರಿಂದ ಖಾಸಗಿ ಲಾಗಿನ್‌ಗಳನ್ನು ಕದಿಯುತ್ತಿರುವ ಅಪ್ಲಿಕೇಶನ್‌ಗಳನ್ನು ಫೇಸ್‌ಬುಕ್‌ ಗುರುತಿಸಿದ್ದು, ಆ ಬಗ್ಗೆ ಬಳಕೆದಾರರಿಗೆ ಎಚ್ಚರಿಸಿದೆ. ಫೇಸ್‌ಬುಕ್‌ ಸುಮಾರು 400 ಅಪ್ಲಿಕೇಶನ್‌ಗಳಿಗೆ ಸಂಬಂಧಿಸಿದ ಖಾಸಗಿ ಲಾಗಿನ್ ವಿವರಗಳ ಡೇಟಾ ಹ್ಯಾಕ್ ಆಗಿರುವುದನ್ನು ಪತ್ತೆ ಹಚ್ಚಿದೆ. ಈ ಅಪಾಯಕಾರಿ ಅಪ್ಲಿಕೇಶನ್‌ಗಳು ಗೂಗಲ್‌ ಪ್ಲೇ ಸ್ಟೋರ್ ಮತ್ತು ಆ್ಯಪಲ್ ಆ್ಯಪ್ ಸ್ಟೋರ್‌’ಗಳಲ್ಲಿ ಇದೆ ಅಂತ ಫೇಸ್‌ಬುಕ್‌ ಹೇಳಿದೆ.

ಸಾಮಾನ್ಯವಾಗಿ ಅಂತಹ ಆ್ಯಪ್’ಗಳು ವೈಯಕ್ತಿಕ ಮಾಹಿತಿ ಕಲೆ ಹಾಕುವ ಸಲುವಾಗಿಯೇ ಇವೆ ಅಂತ ಗೊತ್ತಾಗೋದಿಲ್ಲ. ಫೋಟೋ ಎಡಿಟರ್‌ಗಳು, ಮೊಬೈಲ್ ಗೇಮ್‌ಗಳು, ಫ್ಲ್ಯಾಶ್‌ಲೈಟ್ ಆಪ್‌, 3D ಗ್ರಾಫಿಕ್ಸ್, ಆರೋಗ್ಯ ಮತ್ತು ಜೀವನಶೈಲಿ ಅಪ್ಲಿಕೇಶನ್‌, ಜಾತಕ ಮತ್ತು ಫಿಟ್‌ನೆಸ್ ಟ್ರ್ಯಾಕರ್‌ಗಳು ಮತ್ತು ವಿಪಿಎನ್’ನಂತಹ ಜನಪ್ರಿಯ ಆ್ಯಪ್’ಗಳ ರೂಪದಲ್ಲಿಯೇ ಪ್ಲೇ ಸ್ಟೋರ್ ಮತ್ತು ಆಪ್ ಸ್ಟೋರ್‌ನಲ್ಲಿ ಲಭ್ಯವಿರುತ್ತವೆ.

ಬಳಕೆದಾರರು ಈ ಆ್ಯಪ್’ಗಳನ್ನು ಇನ್‌ಸ್ಟಾಲ್‌ ಮಾಡಿಕೊಂಡಾಗ ಫೀಚರ್‌ಗಳನ್ನು ನೋಡಲು ಫೇಸ್‌ಬುಕ್ ಖಾತೆಯ ಮೂಲಕ ಸೈನ್ ಇನ್ ಆಗಲು ಸೂಚಿಸುತ್ತದೆ. ಒಂದು ವೇಳೆ ನೀವು ಫೇಸ್‌ಬುಕ್‌ಗೆ ಸೈನ್‌ ಇನ್‌ ಆದರೆ ಅಲ್ಲಿಗೆ ಹ್ಯಾಕರ್ಸ್‌ಗಳ ಕೆಲಸ ಸುಲಭವಾಗುತ್ತದೆ. ನಿಮ್ಮ ವೈಯಕ್ತಿಕ ಮಾಹಿತಿ ಸಂಗ್ರಹಿಸಲು ಇದೊಂದು ಟ್ರಿಕ್ ಅಷ್ಟೆ. ಫೇಸ್‌ಬುಕ್‌ ಹೇಳುವ ಪ್ರಕಾರ ‘ಯಾವುದೇ ಆ್ಯಪ್ ಬಳಸಲು ಫೇಸ್‌ಬುಕ್‌ ಲಾಗಿನ್ ಆಗುವುದು ಅನಿವಾರ್ಯ ಎಂದಾದರೆ ಅಂತಹ ಆ್ಯಪ್’ಗಳ ಉದ್ದೇಶ ಖಾಸಗಿ ಮಾಹಿತಿ ಹ್ಯಾಕ್ ಮಾಡುವುದು ಆಗಿರುತ್ತದೆ.

ಬಳಕೆದಾರರು ಯಾವುದೇ ಆ್ಯಪ್’ಗೆ ಲಾಗ್ ಇನ್ ಆಗುವ ಮುನ್ನ ಕೆಲವು ವಿಚಾರಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಈ ಫೇಕ್ ಆ್ಯಪ್’ಗಳು ಲಾಗಿನ್ ಆಗಲು ಫೇಸ್‌ಬುಕ್‌ ಅಥವಾ ಸಾಮಾಜಿಕ ಜಾಲತಾಣಗಳ ಮಾಹಿತಿ ಕೇಳಿದರೆ ಎಚ್ಚರ ವಹಿಸುವುದು ಉತ್ತಮ. ಅಲ್ಲದೆ ಆ್ಯಪ್ ಡೌನ್‌ಲೋಡ್ ಮಾಡುವ ಮುನ್ನ ಡೌನ್‌ಲೋಡ್ ಎಣಿಕೆ, ರೇಟಿಂಗ್‌ ಮತ್ತು ವಿಮರ್ಶೆಗಳನ್ನು ನೋಡುವುದು ಉತ್ತಮ. ಅಲ್ಲದೆ ಆ್ಯಪ್ ವೈಶಿಷ್ಟ್ಯತೆಗಳ ಕುರಿತ ಮಾಹಿತಿಯನ್ನು‌ ತಪ್ಪದೆ ಚೆಕ್ ಮಾಡಿ.

ಅಂದಹಾಗೆ ಫೇಸ್‌ಬುಕ್‌ ಈ ಬಗ್ಗೆ ವಿಸ್ತ್ರತವಾಗಿ ರಿಸರ್ಚ್ ಮಾಡಿದ್ದು, ಆ್ಯಪಲ್ ಮತ್ತು ಗೂಗಲ್‌ಗೆ ವರದಿ ಮಾಡಿದೆ. ಬಳಕೆದಾರರು ಈ ಬಗ್ಗೆ ಎಚ್ಚರದಿಂದಿರುವಂತೆ ತಿಳಿಸಿದೆ. ಅಂತಹ ಆ್ಯಪ್’ಗಳನ್ನು ಡಿಲೀಟ್ ಮಾಡಲು ಸೂಚಿಸಿದೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..