1. Home
  2. Tech
  3. News
  4. ಫ್ಲಿಫ್ ಕಾರ್ಟ್ ನಲ್ಲಿ ಐಫೋನ್‌ ಬುಕ್ ಮಾಡಿದಾತನಿಗೆ ಬಂಪರ್ ಲಾಟರಿ – ಅಂಥಾದ್ದೇನಾಯ್ತು ಗೊತ್ತಾ…!?

ಫ್ಲಿಫ್ ಕಾರ್ಟ್ ನಲ್ಲಿ ಐಫೋನ್‌ ಬುಕ್ ಮಾಡಿದಾತನಿಗೆ ಬಂಪರ್ ಲಾಟರಿ – ಅಂಥಾದ್ದೇನಾಯ್ತು ಗೊತ್ತಾ…!?

ಫ್ಲಿಫ್ ಕಾರ್ಟ್ ನಲ್ಲಿ  ಐಫೋನ್‌ ಬುಕ್ ಮಾಡಿದಾತನಿಗೆ ಬಂಪರ್ ಲಾಟರಿ – ಅಂಥಾದ್ದೇನಾಯ್ತು ಗೊತ್ತಾ…!?
0

ನ್ಯೂಸ್ ಆ್ಯರೋ : ಇದು ಆನ್‍ಲೈನ್ ಶಾಪಿಂಗ್‍ನ (Online Shopping) ಮತ್ತೊಂದು ಅವಾಂತರ. ಈಗ ಆಫ್‌ಲೈನ್‌ಗಿಂತ ಆನ್ಲೈನ್ ನೆಚ್ಚಿಕೊಂಡವರೇ ಅಧಿಕ. ಯಾಕೆಂದರೆ ಬಹಳ ಸುಲಭ. ಕುಳಿತಲ್ಲೇ ಎಲ್ಲ ಕೆಲಸ ಆಗುತ್ತದೆ. ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದರೆ ಸ್ಮಾರ್ಟ್​ಫೋನ್​ಗೆ ಬದಲಾಗಿ ಕಲ್ಲು, ಇಟ್ಟಿಗೆ ಹಾಗೂ ಬದಲಿ ವಸ್ತುಗಳು ಬಂದಿರುವ ನಿದರ್ಶನಗಳು ಸಾಕಷ್ಟಿವೆ. ಗ್ರಾಹಕರು ಆರ್ಡರ್ ಮಾಡುವುದೇ ಒಂದಾದರೆ, ಅವರಿಗೆ ಬರೋದು ಇನ್ನೊಂದು. ಆದರೂ ಕೂಡ ಆನ್‌ಲೈನ್ ಶಾಪಿಂಗ್ ಮಾಡುವುದು ಕಡಿಮೆಯಾಗಿಲ್ಲ.

ಅಲ್ಲದೇ ಇತ್ತೀಚಿನ ದಿನಗಳಲ್ಲಿ ವಂಚಕರು ನೇರವಾಗಿ ಮೋಸ ಮಾಡುವುದನ್ನು ಕಡಿಮೆ ಮಾಡಿ ಆನ್​ಲೈನ್ ಮೂಲಕ ವಂಚಿಸಲು ಶುರುಮಾಡಿದ್ದಾರೆ. ಎಲ್ಲೋ ಕೂತು, ಕೇವಲ ಆನ್​ಲೈನ್​ ಮೂಲಕವೇ ಲಕ್ಷ ಲಕ್ಷ ಹಣ ಎಗರಿಸುತ್ತಿದ್ದಾರೆ. ದಿನ ಬೆಳಗಾದರೇ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಮೂಲಕ ಆರ್ಡರ್ ವಂಚನೆ ಪ್ರಕರಣಗಳು ಚಿತ್ರ, ವಿಚಿತ್ರ ರೀತಿಯಲ್ಲಿ ಮೋಸ ಮಾಡುವ ಸುದ್ದಿ ಕೇಳುತ್ತಲೇ ಇರುತ್ತೇವೆ.

ಈಗ ಅದೇ ರೀತಿಯ ಪ್ರಕರಣವೊಂದು ನಡೆದಿದ್ದು, ಇಲ್ಲಿ ಆರ್ಡರ್ ಮಾಡಿದ್ದ ವ್ಯಕ್ತಿಗೆ ಮೋಸ ಆಗಿಲ್ಲ. ಬದಲಾಗಿ ಜಾಕ್ ಪಾಟ್ ಹೊಡೆದಿದೆ. ಅದು ಹೇಗೆ ಅಂತೀರಾ..? ಇಲ್ಲಿದೆ ಮಾಹಿತಿ..

ಹೌದು ಫ್ಲಿಪ್‌ಕಾರ್ಟ್‌ ಮೂಲಕ 50 ಸಾವಿರ ರೂ.ಗಳ ಐಫೋನ್ 13 ಅನ್ನು ಆರ್ಡರ್ ಮಾಡಿದ ವ್ಯಕ್ತಿಗೆ ಲಾಟರಿ ಹೊಡೆದಿದ್ದು, ಐಫೋನ್ 13 ಬದಲು ಐಫೋನ್ 14 ಕೈ ಸೇರಿದೆ.

ಈ ಘಟನೆ ಕುರಿತು ಅಶ್ವಿನ್​ ಹೆಗಡೆ ಎಂಬುವವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ತನ್ನ ಫಾಲೋವರ್ ಒಬ್ಬರು ಐಫೋನ್ 13 ರ ಬದಲಿಗೆ ಐಫೋನ್ 14 ಅನ್ನು ಪಡೆದಿದ್ದಾರೆ ಎಂದು ಟ್ವೀಟ್ ಮಾಡಿ ಸ್ಕ್ರೀನ್ ಶಾಟ್ ಆಪ್ ಲೋಡ್ ಮಾಡಿದ್ದಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಈ ಟ್ವೀಟ್​ ವೈರಲ್ ಆಗುತ್ತಿದ್ದು, ಹಲವರು ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ಕಮೆಂಟ್ ಗಳಲ್ಲಿ ಆಪಲ್‌ ಸಂಸ್ಥೆಯನ್ನೇ ಅಣಕಿಸಿದ್ದು, ‘ಐಫೋನ್​13 ಮತ್ತು ಐಫೋನ್14ರ ನಡುವೆ ಹೋಲಿಕೆ ಎಷ್ಟಿದೆಯೆಂದರೆ, 14 ಅನ್ನು 13 ಎಂದು ತಪ್ಪಾಗಿ ಭಾವಿಸಿ ಆರ್ಡರ್ ಮಾಡಿದ್ದಾರೆ. ಆಗ 13ರ ಬದಲಿಗೆ 14 ಅನ್ನು ಕಂಪೆನಿ ವಿತರಿಸಿದೆ ಎಂದು ವ್ಯಂಗ್ಯವಾಡಿದ್ದಾರೆ. ಮತ್ತೊಂದೆಡೆ ‘ಐಫೋನ್ 14 ಪಡೆದ ವ್ಯಕ್ತಿ ತಮಗೆ ಬಂದಿರುವ ಪ್ರೊಡಕ್ಟ್ ಅನ್ನು ಹಿಂದಿರುಗಿಸುವಂತೆ ಸಲಹೆ ನೀಡಿದ್ದು, ಮುಂದಿನ ದಿನಗಳಲ್ಲಿ ವಾರೆಂಟಿಯನ್ನು ಕ್ಲೈಮ್ ಮಾಡುವಾಗ ಸಮಸ್ಯೆ ಉಂಟಾಗಬಹುದು’ ಎಂದಿದ್ದಾರೆ.

ಇನ್ನೂ ಈ ಹಿಂದೆ ಕೂಡ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದರೆ ಫೋನಿಗೆ ಬದಲಾಗಿ ಆಪ್ಯಲ್ ಜ್ಯೂಸ್, ಮೊಸರು ಪ್ಯಾಕೆಟ್, ವಾಷಿಂಗ್ ಪೌಡರ್ ಪ್ಯಾಕೆಟ್, ಕಲ್ಲು ಸೇರಿದಂತೆ ಬದಲಿ ವಸ್ತುಗಳು ಬಂದಿರುವ ನಿದರ್ಶನಗಳು ಸಾಕಷ್ಟಿವೆ. ಗ್ರಾಹಕರು ಆರ್ಡರ್ ಮಾಡುವುದೇ ಒಂದಾದರೆ, ಅವರಿಗೆ ಬರೋದು ಇನ್ನೊಂದು. ಆದರೂ ಕೂಡ ಆನ್‌ಲೈನ್ ಶಾಪಿಂಗ್ ಮಾಡುವುದು ಕಡಿಮೆಯಾಗಿಲ್ಲ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..