1. Home
  2. Tech
  3. News
  4. ಎರಡು ವರ್ಷಗಳ ಅವಧಿಯಲ್ಲಿ 3 ಕೋಟಿಗೂ ಅಧಿಕ ವಾಟ್ಸಾಪ್ ಖಾತೆ ಬ್ಯಾನ್ – ಮತ್ತಷ್ಟು ಹೊಸ ಫೀಚರ್ಸ್ ಹೊರತಂದ ವಾಟ್ಸಾಪ್

ಎರಡು ವರ್ಷಗಳ ಅವಧಿಯಲ್ಲಿ 3 ಕೋಟಿಗೂ ಅಧಿಕ ವಾಟ್ಸಾಪ್ ಖಾತೆ ಬ್ಯಾನ್ – ಮತ್ತಷ್ಟು ಹೊಸ ಫೀಚರ್ಸ್ ಹೊರತಂದ ವಾಟ್ಸಾಪ್

ಎರಡು ವರ್ಷಗಳ ಅವಧಿಯಲ್ಲಿ 3 ಕೋಟಿಗೂ ಅಧಿಕ ವಾಟ್ಸಾಪ್ ಖಾತೆ ಬ್ಯಾನ್ – ಮತ್ತಷ್ಟು ಹೊಸ ಫೀಚರ್ಸ್ ಹೊರತಂದ ವಾಟ್ಸಾಪ್
0

ನ್ಯೂಸ್ ಆ್ಯರೋ‌ : ನಿಮ್ಮ ವಾಟ್ಸಪ್ ಖಾತೆಯು ಅನಿರೀಕ್ಷಿತವಾಗಿ ಬ್ಯಾನ್ ಆಗಿದೆ ಎಂದಾದರೆ ನೀವು ಯಾವುದಾದರೂ ಒಂದು ತಪ್ಪನ್ನು ಮಾಡಿದ್ದೀರಿ ಎಂದರ್ಥ. ಏಕೆಂದರೆ, ಮೆಟಾ-ಮಾಲೀಕತ್ವದ ಜನಪ್ರಿಯ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಪ್ ತನ್ನ ಅಪ್ಲಿಕೇಷನ್ ಮೂಲಕ ದ್ವೇಷದ ಸಂದೇಶಗಳು, ಬಾಟ್‌ಗಳು, ನಕಲಿ ಸುದ್ದಿಗಳು ಮತ್ತು ತಪ್ಪು ಮಾಹಿತಿಯ ಹರಡುವಿಕೆಯನ್ನು ತಡೆಗಟ್ಟುವ ಸಲುವಾಗಿ ಕೋಟ್ಯಾಂತರ ಬಳಕೆದಾರರ ಖಾತೆಗಳನ್ನು ನಿರ್ಬಂಧಿಸುತ್ತಿದೆ. ಕಳೆದ ಆಗಸ್ಟ್ ಒಂದೇ ತಿಂಗಳಲ್ಲೇ ವಾಟ್ಸಪ್ ತನ್ನ ಪ್ಲಾಟ್‌ಫಾರ್ಮ್‌ನಿಂದ 23 ಲಕ್ಷ ಖಾತೆಗಳನ್ನು ನಿಷೇಧಿಸಲಾಗಿದ್ದು, ಒಟ್ಟಾರೆ ಕಳೆದ ಎರಡು ವರ್ಷಗಳಲ್ಲಿ 3 ಕೋಟಿಗೂ ಅಧಿಕ ಖಾತೆಗಳನ್ನು ಬ್ಲಾಕ್ ಮಾಡಿದೆ.!

ವಾಟ್ಸಪ್ ಸಂಸ್ಥೆ ಪ್ರತಿ ತಿಂಗಳು ಸರಾಸರಿ 20 ಲಕ್ಷ ಖಾತೆಗಳನ್ನು ನಿಷೇಧಿಸುತ್ತಿದ್ದು, ನಿಷೇಧಿತ ಖಾತೆಗಳ ದೊಡ್ಡ ಸಂಖ್ಯೆಯ ಹೊರತಾಗಿಯೂ, ವಾಟ್ಸಪ್ ಮೂಲಕ ನಕಲಿ ಸಂದೇಶಗಳನ್ನು ಹರಡುವ ಕಳವಳವನ್ನು ಮುಂದುವರೆಸಿದೆ.

ಅಲ್ಲದೇ ಡಿಜಿಟಲ್ ಸುರಕ್ಷತೆ ಈಗಿನ ಕಾಲದಲ್ಲಿ ಅತ್ಯಂತ ಪ್ರಮುಖ ಹಾಗೂ ಅತೀ ಅಗತ್ಯದ ವಿಚಾರವಾಗಿದ್ದು, ಹೀಗಾಗಿ ಸಾಮಾಜಿಕ ಜಾಲತಾಣ, ಆ್ಯಪ್‌ಗಳಲ್ಲಿ ಸುರಕ್ಷಾ ಫೀಚರ್ಸ್ ಸೇರಿಸಿಕೊಳ್ಳಲಾಗುತ್ತದೆ. ಈ ಹಿನ್ನಲೆಯಲ್ಲಿಯೇ ಇದೀಗ ಅತೀ ಜನಪ್ರಿಯ ಚಾಟಿಂಗ್ ಆ್ಯಪ್ ವ್ಯಾಟ್ಸ್ಆ್ಯಪ್ ಇದೀಗ ಸ್ಕ್ರೀನ್‌ಶಾಟ್ ನಿರ್ಬಂಧಿಸುವ ಫೀಚರ್ಸ್ ಜಾರಿಗೊಳಿಸಿದೆ. ನೂತನ ಫೀಚರ್ ವ್ಯಾಟ್ಸ್ಆ್ಯಪ್ ಬೆಟಾ ವರ್ಶನ್‌ನಲ್ಲಿ ಈಗಾಗಲೇ ಜಾರಿಗೊಳಿಸಲಾಗಿದ್ದು, ಆ್ಯಂಡ್ರಾಯ್ಡ್ ಬಳಕೆದಾರರು ಇನ್ಮುಂದೆ ವ್ಯಾಟ್ಸ್ಆ್ಯಪ್ ಚಾಟ್ ಸ್ಕ್ರೀನ್‌ಶಾಟ್ ತೆಗೆಯಲು ಸಾಧ್ಯವಿಲ್ಲ.

ಇದನ್ನು ವ್ಯಾಟ್ಸ್ಆ್ಯಪ್ ನಿರ್ಬಂಧಿಸುತ್ತಿದ್ದು, ವೀವ್ ಒನ್ಸ್ ಫೀಚರ್ಸ್‌ನಲ್ಲಿ ವ್ಯಾಟ್ಸ್ಆ್ಯಪ್ ಈಗಾಗಲೇ ಕೆಲ ಫೀಚರ್ಸ್ ನೀಡಿದೆ. ಆದರೆ ಸ್ಕ್ರೀನ್‌ಶಾಟ್‌ಗೆ ಅವಕಾಶ ನೀಡಿತ್ತು. ಇದೀಗ ವ್ಯಾಟ್ಸ್ಆ್ಯಪ್ ಸ್ಕ್ರೀನ್‌ಶಾಟ್ ಅವಕಾಶವನ್ನು ತೆಗೆದಿದೆ. ಐಒಎಸ್ ಹಾಗೂ ಆ್ಯಂಡ್ರಾಯ್ಡ್ ಬಳಕೆದಾರರಿಗೆ ವ್ಯಾಟ್ಸ್ಆ್ಯಪ್‌ನಲ್ಲಿರುವ ವೀವ್ ಒನ್ಸ್ ಫೀಚರ್ಸ್‌ ಆಕ್ಟೀವ್ ಮಾಡಿಕೊಂಡರೆ, ನೀವು ಕಳುಹಿಸುವ ಫೋಟೋ ಅಥವಾ ವಿಡಿಯೋ ವನ್ನು ಸ್ವೀಕೃತ ಬಳಕೆದಾರ ಕೇವಲ ನೋಡಲು ಮಾತ್ರ ಸಾಧ್ಯವಿದೆ. ಈ ಸ್ವೀಕೃತ ಬಳಕೆದಾರ ನೋಡಿದ ಬಳಿಕ ಎಲ್ಲಿಯೂ ಸೇವ್ ಆಗುವುದಿಲ್ಲ. ಆದರೆ ಫೋಟೋ, ವಿಡಿಯೋ ಸ್ಕ್ರೀನ್ ಶಾಟ್ ತೆಗೆಯುವ ಅವಕಾಶ ನೀಡಿತ್ತು. ಇದೀಗ ಈ ಫೀಚರ್‌ಗೆ ನಿರ್ಬಂಧ ವಿಧಿಸಿದೆ.

ಇತ್ತೀಚೆಗೆ ವ್ಯಾಟ್ಸ್ಆ್ಯಪ್ ಸ್ಕ್ರೀನ್‌ಶಾಟ್ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇದು ವೈಯುಕ್ತಿಕವಾಗಿ ಕಳುಹಿಸಿದ, ಅಥವಾ ಗ್ರೂಪ್‌ಗೆ ಕಳುಹಿಸಿದ ಯಾವುದೇ ಅಂಶಗಳ ಸ್ಕ್ರೀನ್‌ಶಾಟ್‌ಗಳು ಹರಿದಾಡುವುದು ಸಾಮಾನ್ಯವಾಗಿತ್ತು. ವೀವ್ ಔನ್ಸ್ ಫೀಚರ್ಸ್ ಅಡಿಯಲ್ಲಿ ಫೋಟೋ ಅಥವಾ ವಿಡಿಯೋ ಸ್ಕ್ರೀನ್ ಶಾಟ್ ತೆಗೆಯಲು ಸಾಧ್ಯವಿಲ್ಲ. ಆದರೆ ಇನ್ನೊಂದು ಫೋನ್ ಕ್ಯಾಮೆರಾ ಮೂಲಕ ಫೋಟೋ ತೆಗೆಯಬಹುದು.

ಇದರ ಜೊತೆಗೆ ವ್ಯಾಟ್ಸ್ಆ್ಯಪ್ ಮತ್ತೊಂದು ಫೀಚರ್ ಸುಧಾರಿಸಿದೆ. ಕಳುಹಿಸಿದ ಸಂದೇಶವನ್ನು ಡಿಲೀಟ್ ಮಾಡುವ ಫೀಚರ್ ಇದ್ದು, ಡಿಲೀಟ್ ಫಾರ್ ಎವರಿವನ್ ಆಯ್ಕೆಯಡಿಯಲ್ಲಿ ಕಳುಹಿಸಿದ ಸಂದೇಶವನ್ನು ಡಿಲೀಟ್ ಮಾಡಬಹುದು. ಇದು ಹೊಸ ಫೀಚರ್ ಅಲ್ಲ. ಆದರೆ ಇದೀಗ ಡಿಲೀಟ್ ಫಾರ್ ಎವರಿವನ್ ಆಯ್ಕೆಯ ಸಮಯವನ್ನು ಹೆಚ್ಚಿಸಲಾಗಿದೆ. 1 ಗಂಟೆ 16 ಸೆಕೆಂಡ್ ಅವಧಿಯಿಂದ ಎರಡು ದಿನಕ್ಕೆ ವಿಸ್ತರಿಸಲಾಗಿದೆ.

ಇದರ ಜೊತೆಗೆ ಆನ್ ಲೈನ್ ಹಾಗೂ ಆಫ್ ಲೈನ್ ಆಯ್ಕೆಯನ್ನು ಬಳಕೆದಾರರೇ ನಿರ್ಧರಿಸುವ ಆಯ್ಕೆಯನ್ನು ನೀಡಿದೆ. ಆನ್‌ಲೈನ್‌ನಲ್ಲಿರುವಾಗ ಆಫ್ ಲೈನ್‌ನ ಮೂಡ್‌ನಲ್ಲಿರುವಂತ ಆಯ್ಕೆಯನ್ನೂ ನೀಡಲಾಗುತ್ತಿದೆ. ಇತ್ತ ಗ್ರೂಪ್‌ನಿಂದ ಎಕ್ಸಿಟ್ ಆಗುವ ಫೀಚರ್‌ನಲ್ಲಿ ಕೆಲ ಬದಲಾವಣೆ ತರಲಾಗಿದೆ. ಯಾರಿಗೂ ತಿಳಿಯದಂತೆ ಎಕ್ಸಿಟ್ ಆಗುವ ಆಯ್ಕೆಯನ್ನು ನೀಡಿದೆ.